ಫ್ಲೈ‌ಓವರ್ ಮೇಲಿಂದ ಹೋಗುತ್ತಿದ್ದಾಗ ರೇಸ್‌ಕೋರ್ಸಿನ ಅಂಗಳದಲ್ಲಿ ಕುದುರೆಗಳು ಓಡುತ್ತಿದ್ದುದನ್ನು ನೋಡಿದ ಚಂದ್ರಹಾಸ ಕೂಡಲೇ ಬೈಕ್ ನಿಲ್ಲಿಸುವಂತೆ ಡೇವಿಡ್‌ನಿಗೆ ಹೇಳಿದ. ಊರಿನಿಂದ ಬಂದಿದ್ದ ಗೆಳೆಯ ಚಂದ್ರಹಾಸನಿಗೆ ಬೆಂಗಳೂರನ್ನು ತೋರಿಸುತ್ತೇನೆಂದ...

ಆಶಾಢ ನಿಬ್ಬಣ ಸೂಶ್ಯಾಡಿ ಬಂತು ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ || ಪ || ಲೇಸವಾದ ತಾಯಿಯಾಸೆ ಬಿಟ್ಟು ಈಶಗುರು ಗಂಡಗ ವಾಸವಾಗಮ್ಮಾ ||ಅ.ಪ.|| ಮುತ್ತೈದಿ ಮಂದಿ ಕೂಡಿ ಗೊತ್ತಿಟ್ಟು ಮುದ್ದಾಡಿ ನಿತ್ಯ ನಿರಂಜನ ತೋರಮ್ಮಾ ತಾರಕ ಮನೆಯೊಳು ಮೀರಿದ ದಾ...

ಮಳಿ ಬಂತೇ ರಮಣಿ ಮಾಯದ್ದೊಂದು ||ಪ|| ಮಳಿ ಬಂತೇ ರಮಣಿ ಬೆಳಗು ಮೀರಿತೆ ನಳಿನಲೋಚನೆ ಮಳಿ ಬಂದಿತು ಛಳಿ ಬಿದ್ದಿತು ಕಳೆದೋರಿತು ಇಳಿಸ್ಥಳದೊಳು ಜಲಜಮುಖಿ ಪ್ರಳಯ ಸೂಚನೆ ಇದು ||೧|| ನಾವು ಬರುವ ಹಾದಿ ತಪ್ಪಿ ಸುವಿಚಾರದೋರದೆ ತೊಯ್ಯದ ಗೊನಿ ತಪ್ಪಲಮನಿ ಮ...

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ ಜಾಣನಾದ ಚಂದ್ರಮನ ಅಳುಕಿಸಿ ಕೋಣೆಯೊಳಗೆ ಅವಮಾನಗೊಳಿಸಿತೆ ||೧|| ರಾಹು ಸಿಟ್ಟಲೆ ಬಂದು ಠಾವು ತಿಳಿಯದೆ ನಿಂದು ತೋಯದ ಗೋನಿಯನು ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ ||೨|| ಮಂಗಳವಾರ ಒಂದಾದಿ ರಂಗು...

ಹುಡಕುತ ನಾ ಎಲ್ಲಿ ಹೊಗಲಿ? ಹುಡುಕಿ ನಾ ಬ್ಯಾಸತ್ತೆ ||ಪ|| ಏಳು ಸಮುದ್ರಗಳು ಏಳು ದಿವಸಗಳು ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ ||೧|| ಧರಿಯೆಲ್ಲ ತಿರುಗಿದೆ ಗಿರಿಯೆಲ್...

ವಾರಿಜಾಕ್ಷಿ ವನಪಿನೊಯ್ಯಾರೆ ಬಾರೆ ನೀರೆ ನಿನ್ನನಗಲಿರಲಾರೆ || ಪ || ದೀರೆ ಮರೆಯದಿರಲಾರೆ ಬ್ರಹ್ಮದ ನೀರು ತುಂಬಿದ ಕೆರಿಯ ಮೇಲಿನ ಏರಿಯೊಳು ನೀ ಬಾರದಿಹೆ ನಾ ದಾರಿಯೊಳು ತರುಬಿದರೆ ಸುಮ್ಮನೆ ||ಅ.ಪ.|| ಹರನಾ ಹಿಡಿದೆ ವಿಧಿ ತಲಿಗಡಿದೆ ಹರಿಯ ಚರಣಾಂಬ...

ಗುಗ್ಗುಳ ಹೊರಟಿತಮ್ಮಾ ಈ ಊರೊಳು ಗುಗ್ಗುಳ ಹೊರಟಿತಮ್ಮಾ || ಪ|| ಗುಗ್ಗುಳ ಹೊರಟಿತು ವೆಗ್ಗಳಾಯಿತು ಮ್ಯಾಳಾ ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ ||ಅ.ಪ.|| ಭೂತ ಪಂಚಕ ರೂಪದಾ ಪುರಂತರು ಆತುಕೊಂಡಿರುತಿಹರು ನೂತನವಾಯಿತು ಏ ತರುಣಿ ಕೇಳೆ ಧಾತ ಶಿವ...

ಮುತ್ತು ರನ್ನದ ಕಿಡಿ ಉದುರೀತು ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು || ಪ || ಅಪ್ಪ ಅಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಅಸು ಹಾರಿಹೋಯಿತು ||ಆ.ಪ.|| ದೇಶಕಧಿಕವಾದ ಹುಬ್ಬಳ್ಳಿ ಹುಚ್ಚಯ್ಯಸ್...

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ ತಿಳಿದು ಬ್ರಹ್ಮದ ಬಯಲೊಳಗಾಡೋಣಮ್ಮಾ || ಪ || ಬಲು ಸಂಸಾರವೆಂಬುವ ಹಳುವನೆಲ್ಲವ ದಾಟಿ ಸುಳಿದಾಡಿ ಶರಣರ ಬಳಿವಿಡಿದಾಡುತ || ಆ. ಪ. || ಬ್ರಹ್ಮರಕ್ಕಸಿಯೆಂಬ ಘಟ್ಟವ ದಾಟಿ ಹಮ್ಮನಳಿದು ದಾರಿ ಸುಮ್ಮನೆ ಹಿಡಿದು ...

ಏ ಸಖರಿಯೆ ನಾ ಸಖರಿಯೆ ಬ್ಯಾಸರಾದಿತು ಮನವ ಆಸರಿಸಿ ತೈಯ್ಯ ||ಪ|| ಪರಸತಿಗೆ ಒಲಿದು ವಿಸ್ತರದಿ ತಿಳಿದು ಜರಿದು ಪಾದ ಪೋಗಿರಿ ರತಿಸತಿಯ ||೧|| ಬಾರದೆ ನಿಂತು ತೋರಿತು ಪಂಥ ಜಾರಿದ ಪಾದ ಪೋಗಿ ವಿರಚಿಸಲೆನ್ನ ||೨|| ಶಿಶುವಿನ ಈಶ ಅಸಮ ಪ್ರಕಾಶ ರಸಿಕ ಗೋ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...