ಜಾಣ ಹೆಂಗಸರಾಟ ನೋಡು ಜಲದ ಬಾವ್ಯಾಗ ಜಲದಿಂದ ಕೊಡಗಳ ತುಂಬುತಿದ್ದರು ನಲಿದು ನೀರಾಗ ||ಪ|| ಸಲಗಿಯಿಂದ ಗೆಳತೆರೆಲ್ಲರು ಕುಲಕೆ ಒಬ್ಬರು ಕೂಡಿಕೊಂಡು ಹಲವು ಮಾತಗಳಾಡುತಾಡುತ ಚಿಕ್ಕಿ ಸೀರಿ ಚಿಮ್ಮು ಚಿಮ್ಮುತ ||ಅ.ಪ.|| ಅಡಗಿಮಾಡುವ ಲಕ್ಷ್ಯ ಆಗಿತ್ತು ಅ...

ಸಖಿ ಬೆಣ್ಣೆಮಾರುವ ನೀನಾರೆ ನಾನು ನಿಂತೇನಿ ಒದರಿ ||ಪ|| ಬೆಣ್ಣೆಮಾರುವ ಆರ್ಭಾಟದೊಳಗೆ ನನ್ನ ಬಿಟ್ಟು ನೀ ವ್ಯಾಪಾರ ಮಾಡತಿ ನಿಮ್ಮ ವ್ಯವಹಾರವು ಎನಗೆ ಸಾಕೆ ನಾನು ನಿಂತೇನಿ ಓದರಿ ||೧|| ಎಳಗಂದಿನ ಎಮ್ಮೆ ಬೆಣ್ಣೀನ ಏನ ತುಟ್ಟಿ ಮಾರತಿ ನೀನ ಅಡಕಿಬೆಟ್...

ತೂಗುತಿದೆ ನಿಜ ಬೈಲಲಿ ಜೋಕಾಲಿ -ಜೋಲಿ- ಲಾಲಿ                       ||ಪ|| ಸಾಂಬಲೋಕದ ಮಧ್ಯದಿ ಸವಿಗೊಂಡು ಕಂಬ ಸೂತ್ರದ ಸಾಧ್ಯದಿ ಅಂಬರದೊಳವತಾರ ತುಂಬಿ ತುಳುಕುವಂತೆ ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ         ||೧|| ಪೊಡವಿಗಡಗಿರ್ದ ಜ್...

ಕೋಲು ಕೋಲಿನ ಕೋಲು ಮೇಲು ಮುತ್ತಿನ ಕೋಲು || ಪ || ಕಾಲಕರ್ಮವನು ತಿಳಿದು ವಿಲಾಸದಿ ಬಾಲಕರಾಡುವ ಬಯಲು ಬ್ರಹ್ಮದ || ಅ. ಪ. || ಗೌರಿಹುಣ್ಣಿವೆಯ ದಿನ ಶೌರಿ ಗೋಪಿಯರು ಮೂರು ಹೆಜ್ಜೆಯ ಮೆಟ್ಟಿ ಸಾರುತ ಹಾರುತ ಹರುಷದಿ ಸುವರ್ಣದ ಕೋಲು || ೧ || ನಾರಿಯರ...

ಆಗರ್ಭ ಶ್ರೀಮಂತರ ಮಗಳಾಕೆ. ದಿನಾಲು ಶಾಲೆಗೆ ಕಾರಿನಲ್ಲಿ ಬಂದು ಹೋಗುವಳು. ಅವಳ ಚೆಂದದ ಪಾದಗಳಿಗೆ ಒಮ್ಮೆಯೂ ಮಣ್ಣು ತಗುಲಿರಲಿಲ್ಲ. ಮೈ ನೆಲದ ಸ್ಪರ್ಶ ಅನುಭವಿಸಿರಲಿಲ್ಲ. ಅವಳಿಗೆ ಬೇಕೆನೆಸಿದ್ದೆಲ್ಲ ಕ್ಷಣ ಮಾತ್ರದಲ್ಲಿ ದಕ್ಕುತ್ತಿತ್ತು. ಮಕಮಲ್ಲಿನ...

ಜೋಕಾಲಿ ಆಡೋಣ ಬರ್ರೆ ಬೇಕಾದ ನಾರಿಯರೆಲ್ಲ ಸಾಕಾಗುವತನಕನಾಡೋಣ ನಾವು ನೀವು ಸಾಕಾದಮ್ಯಾಲೆ ಇಳಿಯೋಣ ||ಪ|| ಖೊಬ್ಬರಿ ತಂಬಿಟ್ಟು ಇಬ್ಬರು ಉಡಿಯೊಳು ಕಟ್ಟಿ ಹಬ್ಬಕೊಮ್ಮೆ ಹಾಲ ಹೊಯ್ಯೋಣ ಸಾಕಾಗುತನಕನಾಡೋಣ ನಾವು ನೀವು ಸಾಕಾದಮ್ಯಾಲೆ ಇಳಿಯೋಣ ||೧|| ಏಕ ...

ಆ ಊರಿನಲ್ಲಿ ಅನೇಕ ಧರ್ಮಗಳಿಗೆ ಸೇರಿದ ಜನರಿದ್ದರು. ಅವರೆಲ್ಲರೂ ಮನುಷ್ಯರಾಗಿದ್ದರು. ಧರ್ಮದ ಆಚರಣೆಗಳನ್ನು ಶ್ರದ್ಧೆಯಿಂದಲೇ ಪಾಲಿಸುತ್ತಿದ್ದರು. ಅವೆಲ್ಲ ಅವರ ಮನೆಯ ಪರಿಧಿಗೆ ಸೀಮಿತಗೊಂಡಿದ್ದವು. ಹೊರಗೆ ಅವರೆಲ್ಲರೂ ಪರಸ್ಪರ ಪ್ರೀತಿಯಿಂದ ವ್ಯವಹರ...

ಪಂಚಮಿ ಹಬ್ಬಾ ಬಂದೀತು ಗೆಳತಿ ಇನ್ನಾರಿಗ್ಹೇಳಲಿ || ಪ|| ಅವಕ್ಕ ನಾರಿ ಜೋಕಾಲಿ ಏರಿ ಕೈಬೀಸಿ ಕರಿಯಾಲೀ || ೧ || ಅರಳಿಟ್ಟು ತಂಬಿಟ್ಟು ನಾಗಪ್ಪಗ್ಹಾಲ ಹೊಯ್ಯಲಿ ಅಣ್ಣನಪಾಲು ತಮ್ಮನಪಾಲು ಅಕ್ಕನಪಾಲು ಮುತ್ತಾಗಲಿ || ೨ || ಮಾವನಪಾಲು ಮೈದುನಪಾಲು ಗಂಡ...

ಕನ್ನಡ ಸಮುದಾಯದ ಬಹುಮುಖೀ ಕನಸಾಗಿದ್ದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸಂಪನ್ನಗೊಂಡು ವಾರ ಕಳೆದಿದೆ. ಆಳುತ್ತಿರುವ ಸರ್ಕಾರವಂತೂ ಇದನ್ನೊಂದು ಅಭೂತ ಪೂರ್ವಸಾಧನೆಯೆಂದು ಬಿಂಬಿಸಲು ಮತ್ತು ಅದನ್ನು ನಂಬಿಸಲು ಮತ್ತೆ ಮತ್ತೆ ಜಾಹೀರಾತು ನೀಡಿ ಜನಸಮುದಾ...

ನನ್ನ ಹೇಣ್ತೆ ನನ್ನ ಹೇಣ್ತೆ ನಿನ್ನ ಹೆಸರೇನ್ಹೇಳಲಿ ಗುಣವಂತೆ || ಪ || ಘನ ಪ್ರೀತಿಲೆ ಈ ತನುತ್ರಯದೊಳು ದಿನ ಅನುಗೂಡುನು ಬಾ ಗುಣವಂತೆ ||ಅ.ಪ.|| ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ ಸದನಕ ಸೊಸಿಯಾದಿ ನನ್ನ ಹೇಣ್ತೆ ಮುದದಿಂದ ಮೋಹಿಸಿ ಮದುವ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....