Home / ಕವನ / ಅನುವಾದ

ಅನುವಾದ

ಅನುವಾದಿತ ಕವನಗಳು

ನನ್ನ ಶಬ್ದಗಳು ಗೋಧಿಯಾಗಿದ್ದಾಗ ನಾನು ನೆಲವಾಗಿದ್ದೆ. ಕೋಪವಾಗಿದ್ದಾಗ ನಾನು ಬಿರುಗಾಳಿಯಾಗಿದ್ದೆ. ಕಲ್ಲಾಗದಿದ್ದಾಗ ನಾನು ನದಿಯಾಗಿದ್ದೆ. ನನ್ನ ಶಬ್ದಗಳು ಜೇನಾದಾಗ ತುಟಿಗೆಲ್ಲ ನೊಣ ಮುತ್ತಿದವು. ***** ಮೂಲ: ಮಹಮೂದ್ ದರ್‍ವೇಶ್...

ರಿಕಾರ್ಡು ಬರೆದುಕೋ. ನಾನು ಅರಬ. ನನ್ನ ಕಾರ್ಡಿನ ನಂಬರು ಐವತ್ತುಸಾವಿರ. ಎಂಟು ಮಕ್ಕಳು. ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ. ಇದಕ್ಕೆ ಕೋಪ ಯಾಕೆ? ರಿಕಾರ್ಡು ಬರೆದುಕೋ. ನಾನು ಅರಬ ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ. ಎಂಟು ಮಕ್ಕಳು. ಅ...

ಏರಬೇಕೆ? ಹೇಗೆ? ಈ ಬೆಟ್ಟಗಳು ಮಂಜು ರಾಶಿಗಳಲ್ಲ. ಮಂಜು ಕವಿದ ಶಿಖರಗಳಲ್ಲಿ ಮೆಟ್ಟಿಲು ಇಲ್ಲ. ಅಲ್ಲಿರುವ ನಿನಗೆ ಇಲ್ಲಿರುವ ನಾನು ಕಳಿಸಿದ ದುಃಖದ ಸುದ್ದಿ: ಒಮ್ಮೊಮ್ಮೆ ಎದ್ದಾಗಲೂ ನೆತ್ತರೊಳಗಿನ ಪರ್ವತ ನನ್ನ ಕೆಳಕ್ಕದುಮಿ ‘ಇಲ್ಲ’ ಅನ್ನುತ್ತದೆ. ‘...

ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ, ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ… ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು. ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು. ಅಳುವುದಕ್ಕೂ ನಗ...

ಜೆರುಸಲೆಮ್ಮಿನ ಹೋಟೆಲಿನ ವೆರಾಂಡದಲ್ಲಿ ಕುಳಿತು ಹೀಗೆ ಬರೆಯುವುದೇ ‘ಮರುಭೂಮಿಯಿಂದ ಸಾಗರದತ್ತ ಸುಂದರ ದಿನಗಳು ಸಾಗಿ ಬರುತಿವೆ’? ಅಥವ ಹೀಗೆ ‘ಇಲ್ಲಿ ಈ ಜಾಗದಲ್ಲಿ ಕಾಣುತ್ತಿರುವ ಗುರುತು ನನ್ನ ಕಂಬನಿ ಬಿದ್ದು ಇಂಕು ಕಲಸಿ ಹೋದದ್ದರ ಗುರುತು’? ನೂರು...

ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ. ಯಾರೂ ಹೊಡೆಯಲು ಬರುವುದಿಲ್ಲ. ಶಪಿಸುವುದಿಲ್ಲ, ಬಯಸುವುದಿಲ್ಲ, ನನ್ನ ತೋಳಿಗೆ ಒರಗಿ ಅಳುವುದಿಲ್ಲ. ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ. ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ. ರೇಲ್ವೆ ಗಾರ್ಡಿ...

ಅನಾದಿಯ ವಯಸ್ಸಲ್ಲಿ ಒಮ್ಮೆ ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು. ಗೊತಿಲ್ಲ, ನನಗೆ ಗೊತಿಲ್ಲ ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ, ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ. ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ. ಬೀದಿಯ...

ಬಿಸಿಲಲ್ಲಿ ಮೂರ್‍ಛೆ ಬಿದ್ದಬೀಚು. ಸುಡು ಬಿಸಿಲಲ್ಲಿ ಹರಿಯುವ ಹಸಿರು ನದಿ. ಸೇತುವೆ. ಪಕ್ಕದಲ್ಲಿತೊಗಟೆ ಉದುರಿದ ಹಳದಿ ತಾಳೆ ಮರಗಳು. ಇನ್ನೂ ಚಳಿಗಾಲದ ನಿದ್ದೆಯ ಜೊಂಪಲ್ಲಿರುವ ಗುಡಿಸಲುಗಳು. ಅಪ್ಪಿ ಹಿಡಿದಿದ್ದ ದಿನಗಳು ಕಳೆದುಹೋದ ದಿನಗಳು ನನ್ನ ತ...

ದುಡ್ಡಿದ್ದರೆ ಉಂಗುರ ತಗೋ ಇಲ್ಲದಿದ್ದರೆ ತುಟಿಯ ತುದಿಯ ಮುತ್ತುಕೊಡು. ಏನೂ ತೋಚದಿದ್ದರೆ ನನ್ನೊಡನೆ ಬಾ. ಆಮೇಲೆ ಯಾಕೆಬಂದೆನೋ ಅನ್ನಬಾರದು, ಅಷ್ಟೆ. ಬೆಳಗಿನಲ್ಲಿ ಸೌದೆ ಆರಿಸುತ್ತೀ. ನಿನ್ನ ಕೈಯಲ್ಲಿ ಅವು ಹೂಗಳಾಗುತ್ತವೆ. ದಳ ಎತ್ತಿಕೊಳ್ಳುತ್ತಿದ್...

ಕೂಡಲೇ ಏನಾದರೂ ಮಾಡಬೇಕು… ಇದಿಷ್ಟು ನಮಗೆ ಗೊತ್ತು. ಅದಕ್ಕಿನ್ನೂ ಕಾಲ ಬಂದಿಲ್ಲ. ಈಗ ತಡವಾಗಿದೆ. ನಮಗೆ ಗೊತ್ತು. ನಾವು ತಕ್ಕಮಟ್ಟಿಗೆ ಅನುಕೂಲಸ್ಥರು ಹೀಗೇ ಬದುಕುತ್ತೇವೆ ಇದರಿಂದೆಲ್ಲಾ ಏನೂ ಫಲವಿಲ್ಲಾ, ನಮಗೆ ಗೊತ್ತು. ನಮಗೆ ಗೊತ್ತು, ತಪ್...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...