Home / ಕವನ / ಅನುವಾದ

ಅನುವಾದ

ಅನುವಾದಿತ ಕವನಗಳು

ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ. ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ : ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ, ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು, ನಾಲ್ಕು ತಿಂಗಳು ಹಳೆಯ ವಾರಪತ್ರಿಕೆ, ಕಾಫಿ ಗಸಿ ಇದ್ದ ಎರಡ...

ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ ಮಲಗಿದ್ದ ನಗರಗಳು, ರಕ್ಷಣೆಗೆ ಗಮನಕೊಡದೆ ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು. ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ : ಕಛೇರಿಯ ಗೋಪುರದಲ...

ನಾವು ಇದನ್ನೂ ಹೇಳಬೇಕೆಂದು ನಿಜ ಒತ್ತಾಯ ಮಾಡುತ್ತದೆ : ‘ಬದುಕು ಸಾಗುತ್ತದೆ.’ ಕ್ಯಾನೆ, ಬೊರೊಡಿನೋಗಳಲ್ಲಿ ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ ಬದುಕು ಸಾಗುತ್ತದೆ. ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ ಒಂದು ಪೆಟ್ರೋಲ್ ಬಂಕಿದೆ, ಬಿಲಾಹೊರಾದ ಪಾರ್ಕ...

ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ. ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ. ನಮ್ಮ ಹುಲಿಗಳು ಹಾಲು ಕುಡಿಯುತ್ತವೆ ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ ನಮ್ಮ ತಿಮಿಂಗಿಲಗಳು ನೀರೊಳಗೆ ಬಚ್ಚಿಟ್ಟುಕೊಳ್ಳುತ್ತವೆ ನಮ್ಮ ...

ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಹೀಗೆ, ‘ರಾತ್ರಿ ಚೂರು ಚೂರಾಗಿದೆ, ದೂರದಲ್ಲಿ ನಕ್ಪತ್ರ ಮಿನುಗಿದೆ’. ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ. ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಅವಳನ್ನು ಪ್ರೀತಿಸಿದೆ. ಒ...

ಪ್ರೀತಿ ಮುಗಿದು ಬಹುಕಾಲವಾದ ಮೇಲೆ : ಕೆಲವು ಬಾರಿ ಬೀದಿಯಲ್ಲಿ ಎದುರಾಗುತ್ತಾರೆ ಕೆಲವು ಬಾರಿ ಕನಸಿನಲ್ಲಿ. ಬೀದಿಯಲ್ಲಿ ಕಂಡಾಗ ಕನಸಿನಂತೆ ಇರುತ್ತದೆ. ಕನಸಿನಲ್ಲಿ ಕಂಡಾಗ ಬೀದಿಯಂತೆ ಇರುತ್ತಾರೆ, ಅರ್ಧಕ್ಕರ್ಧ ಮನೆಗಳು ಖಾಲಿ ಇರುವ ಬೀದಿಗಳು ಕತ್ತಲ...

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ? ಸಾವಿರ ದಿನವೋ ಒಂದು ದಿನವೋ? ಒಂದು ವಾರವೋ ಒಂದಷ್ಟು ಶತಮಾನವೋ? ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ? ‘ಅನಂತ ಕಾಲ’ ಅಂದರೆ ಎಷ್ಟುಕಾಲ? ಈ ಯೋಚನೆಗಳಲ್ಲಿ ಮುಳುಗಿ ಉತ್ತರ ಹುಡುಕಲು ಹೊರಟೆ. ಹೋಗಿ ಮ...

ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ, ನಿಜವಾಗಿ ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ. ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ ನಾನು ಜಾಣನಂತೆ ಕಾಣ...

ದುಃಖ – ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ರೂಪಕವಲ್ಲ ಕವಿತೆಯಲ್ಲ ಸುಮ್ಮನೆ ಇರುವ ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ದುಃಖ ಸುಮ್ಮನೆ ಅಲ್ಲಿರುವ ಬೆಚ್ಚನೆ ಎದೆ ಸುಮ್ಮನೆ ಅಲ್ಲಿರುವ ರಾತ್ರಿ ದುಃಖ ಮಾತಿನಿಂದ ದೂರವಾಗಿ ಎದೆಯಿಂದ ದೂರ...

ಸಂಗೀತ ಮತ್ತೆ ಬದುಕಿ ಬಂದಂತೆ… ಲೋಕದಾಚೆಯಿಂದ ಇಲ್ಲಿಗೆ ತಂದವರು, ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ ಕೈ ಹಿಡಿದು ನಡೆಸಿದವರು ಯಾರು? ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ ಮಾಯವಾದ ಒಂದು ಕ್ಷಣವೊಂದು ಮತ್ತೆ ಹಿಂದಿರುಗಿದಂತೆ...

1...2425262728...30

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....