
ಪರಸ್ಪರ ರೊಟ್ಟಿ ಹಸಿವುಗಳ ಅಂತರಂಗ ಅನಾವರಣಗೊಳದೇ ಅಪರೂಪದ ಸಮರಸವಿಲ್ಲ. ಮುಕ್ತಗೊಳದೇ ಅರಿವಿಲ್ಲ. ನದಿ ಮೌನವಾಗಿ ಹರಿಯುತ್ತದೆ ಎರಡೂ ದಡಗಳು ಸುಮ್ಮನೆ ಬಿದ್ದುಕೊಂಡಿರುತ್ತವೆ. *****...
ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು… ಅವಳದು ಖಾಲಿ ಜೇಬು *****...
ಹಸಿವು ಮಾತನಾಡುವಾಗ ರೊಟ್ಟಿ ಮೌನವಾಗಿದ್ದು ರೊಟ್ಟಿ ಮಾತನಾಡುವಾಗ ಹಸಿವು ಮೌನವಾಗಿದ್ದರೆ ಮಾತಿಗೂ ಮೌನಕ್ಕೂ ಬೆಲೆ ಪರಸ್ಪರ ಒಟ್ಟಾಗಿ ಗುದ್ದಾಡಿದರೆ ಮಾತು ಮೌನಗಳೇ ಅರ್ಥಹೀನ. *****...
ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ *****...
ಹಸಿವಿಗೆ ವಾಸ್ತವದ ಒಂದೇ ಮುಖ ರೊಟ್ಟಿಗೆ ಕನಸುಗಳ ಸಾವಿರಾರು ಮುಖ. ಅದಕ್ಕೇ ಹಸಿವೆಗೆ ರೊಟ್ಟಿ ಕಂಡರೆ ಒಳಗೇ ಭಯ. *****...













