
ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. *****...
ಗುಲಾಬಿ ಮುಡಿದಿದ್ದಾಳೆ ನನ್ನ ಗೆಳತಿ ನೆನಪಿನ ಮುಳ್ಳು ಕಿತ್ತು ವಾಸ್ತವದ ಹೊರೆಯ ಹೊತ್ತು *****...
ರೊಟ್ಟಿ ಕಲಿಯಬೇಕಿರುವ ಮೊದಲ ಪಾಠ ‘ಹಸಿವಗೇನು ಬೇಕು?’ ಎಂಬುದು. ಮತ್ತು ಕೊನೆಯ ಪಾಠವೂ ಅದೇ. *****...
ಅದು ಪ್ರೀತಿಯಲ್ಲ ಸಲುಗೆಯೂ ಅಲ್ಲ ಆದರೂ ಅವಳು ಅವನನ್ನು ಆರಾಧಿಸುತ್ತಾಳೆ; ಹೆಸರಿಡದ ಸಂಬಂಧದ ಹುಡುಕಾಟದಲ್ಲಿ… *****...
ಸುಡುಸುಡುವ ಆಕ್ರೋಶ ಒಳಗೇ ಅದುಮಿಟ್ಟು ಎಂದಿಗೂ ಹಡೆಯದ ರೊಟ್ಟಿಯ ಬಸಿರು. ದಿಟ ಕಂಡರೂ ಕಣ್ಣುಮುಚ್ಚಿ ಸದ್ದಿಲ್ಲದೇ ಒಳಗೇ ಬೆಚ್ಚಿ ಏನೂ ಕಂಡಿಲ್ಲವೆಂಬ ಕಪಟ ನಾಟಕವಾಡುತ್ತದೆ ಹಸಿವು. *****...
ನಿನ್ನ ಗೈರು ಹಾಜರಿ ಮನದ ಗುಜರಿಯಲ್ಲಿ ಗೆದ್ದಲು ತಿನ್ನುತ್ತ ಬಿದ್ದಿದ್ದ ನೆನಪಿನ ಬುತ್ತಿ ಹೆಕ್ಕಿ ತಂದಿದೆ *****...













