ಭಾವೋನ್ಮಾದ
ಕಣ್ಣುಹನಿ ಹನಿಸಿ ಭಾವ ಬಿತ್ತರಿಸಿತ್ತು ಹೃದಯ ಗಣಿ ತೆರೆದು ಜೀವ ಭಾವ ಬೆಳಗಿತ್ತು *****
ಬಾಲ್ಯದಲ್ಲಿ, ಆಟಪಾಠ ಯೌವ್ವನದಲ್ಲಿ, ಓಟ ನೋಟ ವೃದ್ಧಾಪ್ಯದಲ್ಲಿ, ಗೋಳಾಟ ಸಾವಿನಲ್ಲಿ ಸೆಣಸಾಟ ಇದು ಬಾಳಿನ ಕಥೆಯ ಓಟ ****

ಜಗವ ಗೆಲುವೆನೆಂದೊರಟ ವೀರಗೆ ಮರುಭೂಮಿಲಿ ಬೇಕಾದ್ದು ಕಿರೀಟ ಕುರ್ಚಿಯಲ್ಲ ದೇಶಕೋಶವಲ್ಲ ಒಂದು ಬೊಗಸೆ ನೀರು ಒಂದು ಬೊಗಸೆ ನೀರು || *****
ಬಾಲ್ಯ… ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ… ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ… ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ […]