
ಏರಿತು ಗಗನಕೆ ನಮ್ಮ ಧ್ವಜ! ಭಾರತ ಭಾಗ್ಯ ರವಿಯ ತೇಜ ! ೧ ಮರವೆಯಿಂದ ಜನಮನ ಜಾಗರಿಸಿ, ಪರದಾಸ್ಯದ ಜಾಲದ ಭಯ ಹರಿಸಿ, ಹುರುಳ ಹುರುಪನೀ ಬಾಳಲಿ ಬೆರಸಿ, ಏರಿತು ಗಗನಕೆ ನಮ್ಮ ಧ್ವಜ- ಭಾರತ ಶಕ್ತಿಯ ವೀರಭುಜ ! ೨ ‘ಎಲ್ಲಿದೆ ಬಂಧನ ಬಲದಾಕ್ರಮಣ ? ಎಲ್ಲಿದೆ...
ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು ತೋಣ್ಣೂರು ಗ್ರಾಮದಲ್ಲಿ ಹಸಿರು ಸೀರೆಯ ಮೇಲೆ ಹಳದಿಯರಮಣಿ ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ ಕರೆಯುತಿದೆ ನೋಡ ಬನ್ನಿ ಸುಂದರ ವನಪುಷ್ಪರಾಶಿಗಳ ನಡುವೆ ಮಣಿ ಮುತ್ತುಗಳೆ ...
ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ ಮನ ತನ್ನ ನುಂಗಿದೆ ...
ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು. ಎಲ್ಲ ಹೃದಯವ ಹೊಕ್ಕು – ಅಳೆದು ...
ಉಷೆಯ ಕಾಲ ಸೋಂಕಿನಿಂದ ಬಾನು ತಳಿತಿದೆ; ನಿಶೆಯ ಮಡಿಲನುಳಿದು ಜಗವು ಜೀವಗೊಳುತಿದೆ; ಕತ್ತಲಂಜುತೋಡುತಿಹುದು, ಬೆಳಕು ತಿರೆಯ ತುಂಬುತಿಹುದು; ನಾಡು ಮೇಡು ಕಾಡೊಳೆಲ್ಲು ಸೊಗವು ಮೂಡಿ ಬರುತಿದೆ. ತರುಗಳಿನಗೆ ಮಂಜುಹನಿಗ- ಳರ್‍ಘ್ಯ ಹಿಡಿದಿವೆ; ಅಲರ ಸುರಿ...
ಶಂಡೀಗಿ ಕಡೆದಾರಲ್ಲ; ದೊಡ್ಡ ಶರಣ್ಯಾರು ನೆರದಾರಲ್ಲ| ಒಡ್ಡಿ ಬಾಜೆಂತ್ರೀಲಿ ಪುರವಂತನಾಡಸ್ತ ಐಸೀರಿಲೊಂಟ್ಹಾರಲ್ಲ ||೧|| ಹಡದೀಯ ಹಾಸ್ಯಾರಲ್ಲ| ಮ್ಯಾಲ ಮದುಮಕ್ಕಳ ನಡಿಸ್ಯಾರಲ್ಲ| ಖನ್ನಿ ಪಾರ್‍ವತಿದೇವಿಗಿ ಎಣ್ಣಿ ಪತ್ತಽಲುಡಿಸಿ ಸೋಬಾನ ಪಾಡ್ಯಾರಲ್ಲ ...













