Home / ಕವನ / ಕವಿತೆ

ಕವಿತೆ

ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ ಸ್ಪಂದಿಸು, ಕಾಲಡಿಯಲ್ಲಿಯೇ ವಿಜ್...

ನಮ್ಮ ಮನೆಯ ಮುಂದಿನ ಚಂದ್ರನಂಥಾ ಸೋಡಿಯಂ ವಿದ್ಯುತ್ ಲಾಂದ್ರ ಇದ್ದಕ್ಕಿದ್ದಂತೆ ವೋಲ್ಟೇಜ್ ಹೀರಿ ನಿಜವಾದ ಚಂದ್ರನಾಗಲು ಹೋಗಿ ಬಡ್ ಎಂದು ಒಡೆದು ಚಪ್ಪನ್ ಚೂರಾಯಿತು.  ಪಾಪ ಅದು ಚಂದ್ರನಾಗಲಿಲ್ಲ, ಆದರೇನಂತೆ ಅದರ ಗಾಜ ಚೂರುಗಳು ಬೀದಿಯಲ್ಲಿ ಚಲ್ಲಾಪಿ...

೧ ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ ಅದರಿದರ ಮಿದುಳು ಯಾವುದೋ ನಾನು ಕಾಣೆ ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ, ರೈಲು...

“ಕಣ್ಣುಗಳು ಮಾರಾಟಕ್ಕಿವೆ ಹೃದಯ ಮಾರಾಟಕ್ಕಿದೆ ಕೈ ಕಾಲು ಕಿಡ್ನಿ ರಕ್ತ ಎಲ್ಲ ಮಾರಾಟಕ್ಕಿವೆ” ಹೇಳಿ ಅವುಗಳೆಲ್ಲದರಿಂದ ಉದ್ಭುವಿಸುವ ಭಾವನೆಗಳೂ ಮಾರಾಟಕ್ಕಿವೆಯೆ? ಪ್ರಯೋಗಶಾಲೆ, ಶೀತಾಗಾರಗಳೆಲ್ಲ ಕೊಡು ಕೊಳ್ಳುವವರ ಸಂತೆಗಳು ಹಾ! ಇವೆ...

ಹಿಂದೊಮ್ಮೆ ಬುದ್ಧ ತನ್ನೊಲವ ಶಿಷ್ಯನ ಕೂಡ ಮಾತನಾಡುತಲಿರಲು ಸೃಷ್ಟಿಸ್ಥಿತಿಲಯ ವಿಷಯ, ಆನಂದ ಪ್ರಶ್ನಿಸಿದ “ಗುರುದೇವ, ಹೃದಯದಲಿ ತೊಡಕುತಿದೆ-ಸಂದೇಹ-ಕೇಳುವೊಡೆ-ಹೇಳುವೆನು!” ಬುದ್ಧದೇವನು ಆಗ ಚಂದ್ರಮನ ಎಳೆನಗುವ   ೫ ನಕ್ಕು ಪೇಳಿದನಿಂ...

ಸೂರ್ಯ ದಿನ ಇಡೀ ಕಾಯ್ಸಿದ್ದನ್ನೆಲ್ಲ ತಂಪಾಗಿಸೋದು ಎಷ್ಟು ಕಷ್ಟದ ಕೆಲ್ಸ ಯಾರಿಗಾದ್ರೂ ಗೊತ್ತಾ. ಏನೋ ತಿಂಗಳಿಗೊಂದು ಅಮಾವಾಸ್ಯೆ ನಾನು ರಜ ಹಾಕಿದ್ರೆ ಅದಕ್ಯಾಕ್ರಿ ತಕರಾರು ಸೂರ್ಯನಿಗೆ ರಜವೂ ಬೇಕಿಲ್ಲ. ಮಜವೂ ಗೊತ್ತಿಲ್ಲ ಯಾಕೇಂದ್ರೆ ಯಾವಾಗಲೂ ಹೊತ...

ವೇದಭೂಮಿಯೊಳಿಹ ಕಡುಸಾಹಸದ ನೆಲೆಗೆ ಮಿ ತಿಯಿಲ್ಲ, ಕೊನೆಯಿಲ್ಲ;  ಪುರುಷ ಸ್ತ್ರೀಯರುವೆಂದು ನೀತಿಯಲಿ ಧೈರ್ಯದಲಿ ಛಲದಲ್ಲಿ ಧರ್ಮ ಭೂ ಮಿದುರೊಳೀ ಭೇದವಿಹುದಿಲ್ಲ;  ವಿಶ್ವವಿದನಂ ತ; ಅನಾದಿಕಾಲದಿಂ ಈ ಕ್ಷೇತ್ರ ಶೌರ್ಯ ಸ- ದನವದು; ಕಡು ಹೇಡಿಗಳಾ ಬೀಡು ...

ನಮ್ಮ ಬಾಜೂಮನಿ ಮುದುಕಿ ಯಾವತ್ತೂ ತನ್ನ ಮಗಗಽ ಒಟಾ ಒಟಾ ಮಾಡಕೊಂತ ಹೇಽಳ್ತಿತ್ತು. ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ ಆದರೆ ಈ ಮಗ ಮುಖದ ಮ್ಯಾಲ ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌ ತುಂಬಿಕೊಂಡ ಮತ್ತ ಮ್ಯಾಲ ಕುಡದ ಕೆಕ್ಕರಿಸಿಕೊಂ...

ಅದರ ಮಾತಿನ್ನೇಕೆ?  ಆದುದಾಗಿಯೆ ಹೋಯ್ತು! ಬಯಸಿದುದು ದೊರೆತಿಲ್ಲ-ದೊರೆತಿಹುದು ಬೇಕಿಲ್ಲ! ಆಸೆಗಳೂ ಮೋಸಗಳೂ-ಬಯಕೆ ಬಾಡಿಯೆಹೋಯ್ತು! ಇದುವೆ ಜೀವನದಾಟ-ಮಂಜು ನಂಜಿನದೆಲ್ಲ! ನಾಬೆಳೆಸಿ, ನಿನ್ನೊಲವನೊಲಿಸಲಿಕೆ ದಿನದಿನವು ಹೂಗಳನು ಪೇರಿಸಿದೆ ರಾಸಿಯಲಿ!-...

ಮೂಡುವನು ರವಿ ಮೂಡುವನು.  ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳವನು ನೆತ್ತರು ಮಾಡುವನು. ಅವನು ಬರಬೇಕಾದರೂ ಕೆಂಪು ರಾಣಾರಂಪ ಹೋಗಬೇಕಾದರೂ ಕೆಂಪು ರಾಣಾರಂಪ. ನನಗೆ ಜಗಳವೂ ಇಲ್ಲ, ಕೆಂಪು ರಾಣಾರಂಪ ಯಾವುದೂ ಇಲ್ಲ. ಬರುವಾಗಲೂ ತಂಪು ಹೋಗುವಾಗಲೂ ತಂ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...