
ನಾನು ಹಾಡಹಗಲೇ ರಾಜಾರೋಷಾಗಿ ಆಕಾಶದಲ್ಲಿ ತಿರುಗಾಡಿದ್ದನ್ನು ನೀವೇ ಎಷ್ಟೋ ಸಾರಿ ನೋಡೀದೀರೋ ಇಲ್ಲವೋ ಸತ್ಯ ಹೇಳಿ. ಸೂರ್ಯ. ಸೂರ್ಯ. ಸೂರ್ಯ ಇವನೊಬ್ಬನೇ ಅಂತ ದೊಡ್ಡದಾಗಿ ಹೇಳ್ತೀರಲ್ಲ ಒಂದು ದಿನವಾದರೂ ರಾತ್ರಿ ಹೊತ್ತಿನಲ್ಲಿ ಆಕಾಶದಲ್ಲಿ ಕಾಲಿಡೋ ಧೈ...
ಸಾಹಿತ್ಯ ಸಾಗರದ ದಡದಿ ನಿಲ್ಲುತಲಂದು ನೋಡಿದೆನು ಆಸೆಯಿಂ ಅಲೆಗಳೆಡೆಗೆ ಒಳಗೆ ಹುಡುಗಿಹ ಮುತ್ತುರತ್ನಗಳನೊಯ್ಯುವೆನೆ ಕನ್ನಡಮ್ಮನ ಅಡಿಗೆ ಮಾಲೆಯಾಗಿಡಲು! ದೂರದಿಂ ಕುಣಿಯುತ್ತ ಹತ್ತಿರಕೆ ಬಂದಿತಲೆ, ನೋಡುತಲೆ ಧೀಗೆಟ್ಟೆ ರೌದ್ರರೂಪ! ಸಾಗರದಿ ಮುಳುಗುತ್...
ಅಕೊ ಮೂಡ ಬಯಲಿನಲಿ ಬೆಳ್ನೆರೆಯ ಚೆಲ್ಲಿಹರು ಅದೋ ಮೂಡ ಬಾನಿನಲಿ ರವಿ ಕಾರುತಿಹನು! ಭುವಿಯೆಲ್ಲ ಬೆಳಕಿನಾ ಮುನ್ನೀರಂತಾದುದು; ಗಿರಿಯೆಲ್ಲ ನಗುವಂತೆ ತಲೆಯೆತ್ತಿ ನೋಡುವುದು. ಚಂದಿರನ ಓಡಿಸಿತು ಇಬ್ಬನಿಯ ಮಳೆಯು; ಬಿಳಿವಣ್ಣು ತಾರಕೆಯ ಹಕ್ಕಿಗಳು ಕುಟುಕ...
ಮದ ಮತ್ಸರ ಬಿಡದು. ಮನದ ಕನಲು ನಿಲ್ಲದು. ಒಡಲ ಗುಣ ಹಿಂಗದು. ಇವ ಮೂರನು ಬಿಡದೆ ನಡಿಸುವನ್ನಕ್ಕ, ಘನವ ಕಾಣಬಾರದು. ಘನವ ಕಾಂಬುದಕ್ಕೆ, ಮದಮತ್ಸರವನೆ ಬಿಟ್ಟು, ಮನದ ಕನಲ ನಿಲಿಸಿ, ಒಡಲ ಗುಣವನೆ ಹಿಂಗಿಸಿ, ತಾ ಮೃಡರೂಪಾದಲ್ಲದೆ, ಘನವ ಕಾಣಬಾರದೆಂದರು ನ...
ನೂರು ಅಶ್ವಮೇಧ ಯಜ್ಞ ಮಾಡಿದರೆ ಯಾರು ಬೇಕಾದರೂ ಆಗಬಹುದು ಇಂದ್ರ ಹೌದೊ ಅಲ್ಲವೊ? ಆದರೆ ಸಾವಿರ ಯಜ್ಞ ಮಾಡಿದರೂ ಯಾರೂ ಚಂದ್ರ ಆಗೋದು ಸಾಧ್ಯವಿಲ್ಲ ಗೊತ್ತು ತಾನೇ? ಸೂರ್ಯ ಅವನೊಬ್ಬನೇ ಇರಬಹುದು ಆದರೆ ಚಂದ್ರ ನಾನೊಬ್ಬನೆ. ಸೂರ್ಯನಿಗೂ ಚಂದ್ರ ಆಗೋದು ...
ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು; ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ ಸಿಂಗಾರ ಕಾಣದ ಹೆರಳು; ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ ಹದಿನಾರು ವರುಷದ ನೆರಳು; ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ ಹುಚ್ಚುಹೊಳ...
ಕರೆಕರೆದು ಬರುವೆನೊ ಬಂದೆನೊ ಇದೊ ಬಂದೆ, ಕರ್ಣಾಟ ಸಾಗರ ಸೇರಽಲು; ತಿಳಿನೀರ ತಳವನ್ನು ಸೇರಲು! ||ಕರೆ|| ಕೊಡಗಿನ ಮಲೆನಾಡ ಶಿಖರದೊಳುದಯಿಸಿ ಹರಿಹರಿದೆ ಕನ್ನಡ ರಾಜ್ಯದೊಳ್; ಕವಿರಸದ ಹನಿಯಾಗಿ ಸೇರಽಲು! ಕಾಂತಿಯೊ ಇದು ಒಂದು ಕ್ರಾಂತಿಗೆ ಸಮನಾಗಿ ಕರ್...
ಯುಗಯುಗಗಳೇಕಾಂತ ಗೀತಹಾಡುತನಂತ ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ! ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ ಅರ್ಪಿಸಿದೆ. ನೀನೊಪ್ಪಿ ಒಲವ ಬಾಳಿಸಿದೆ! ನಾನು ಕವಿ-ನೀ ಕಾವ್ಯ ನಾ ಬರೆದ ಗೀತಗಳು ನಿನ್ನ ಒಲವಿನ ನೂರು ಸೊಗಸು ನೆರಳು. ನೀ ಬೆಳೆಸಿ...
ಮಚ್ಚಬೇಡ. ಮರಳಿ ನರಕಕ್ಕೆರಗಿ, ಕರ್ಮಕ್ಕೆ ಗುರಿಯಾಗಬೇಡ. ನಿಶ್ಚಿಂತನಾಗಿ ನಿಜದಲ್ಲಿ ಚಿತ್ತವ ಸುಯಿಧಾನವ ಮಾಡಿ, ಲಿಂಗದಲ್ಲಿ ಮನ ಅಚ್ಚೊತ್ತಿದಂತಿರಿಸಿ, ಕತ್ತಲೆಯನೆಕಳೆದು, ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚನ್...













