ಅಸಂಖ್ಯ ಕೋನಗಳಿಂದ ವಜ್ರದಂತೆ ಹೊಳೆಯುವ ಆಕಾಶಕಾಯದಲ್ಲಿ ಸೂರ್ಯನಷ್ಟೇ ದೊಡ್ಡದಾದ ವಜ್ರದ ನಕ್ಷತ್ರವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ. ಭೂಮಿಯಿಂದ ೧೭ ಬೆಳಕಿನ ವರ್ಷಗಳ ದೂರದಲ್ಲಿನ ಸೆಂಟಾರಸ್ ರಾಶಿಯಲ್ಲಿ ಈ ನಕ್ಷತ್ರವಿದೆ. ಇದರ ವ್ಯಾಸ ...

ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ ಮೊದಲ ಮಾದರಿ ‘...

ಪ್ರೀತಿಯ ಗೆಳೆಯಾ, ಈಗ ಈ ಹೊತ್ತು ಜಗತ್ತಿನ ಕಥೆಗಾರರೆಲ್ಲಾ ಕವಿಗಳೆಲ್ಲ ಏನು ಮಾಡುತ್ತಿರಬಹುದು, ಎಂಬ ಒಂದು ಆಲೋಚನೆ ತಲೆಯಲ್ಲಿ ಬಂತು. ಕೆಲವರು ಹೆಂಡತಿ ಮಕ್ಕಳನ್ನು ಕರೆದು ಮಾರ್ಕೆಟ್, ಗುಡಿ, ಶಾಪಿಂಗ್ ಹೋಟೆಲ್ ಅಂತ ಸುತ್ತುತ್ತಿರಬಹುದು. ಕೆಲವರು ...

ನೀವೊಂದು ಪುಸ್ತಕದಂಗಡಿ ನಡೆಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಅಲ್ಲಿ ಅಟ್ಟಳಿಕೆಗಳಲ್ಲಿ ಪುಸ್ತಕಗಳನ್ನು ಕ್ರಮಪ್ರಕಾರವಾಗಿ ಜೋಡಿಸಿಟ್ಟಿದ್ದೀರಿ-ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಮಾಜ ವಿಜ್ಞಾನ ಇತ್ಯಾದಿಯಾಗಿ, ಒಂದೊಂದು ವಿಭಾಗದಲ್ಲೂ ಅಕ್ಷರಾ...

ಶಂಕರ್ : “ಮೇಡಂ ಈ ಸೋಪಿನ ಪುಡಿ ಬಳಸುವುದರಿಂದ ಬಟ್ಟೆ ಬೆಳ್ಳಗಾಗುತ್ತೆ.” ಶೀಲಾ : “ಹಾಗಾದ್ರೆ ಬೇಡ ಬಿಡಿ” ಶಂಕರ್ : “ಯಾಕೆ?” ಶೀಲಾ : “ನಮ್ಮ ಮನೆಯವರ ಕರಿ ಕೋಟು ಬೆಳ್ಳಗಾದರೆ ಅವರು ಕೋರ್ಟಿಗೆ ...

ಸೆಪ್ಟೆಂಬರ್‍ ೧೭, ೧೪೯೨, ಹಡಗಿನ ಸಿಬ್ಬಂದಿ ದಿಗ್ಭ್ರಾಂತಗೊಂಡರು. ಅವರ ೯೪ ಅಡಿ ಉದ್ದ ‘ನಿನಾ’ ಹಡಗು ವಿಚಿತ್ರ ಸುಳಿವಿನ ನೀರಿನಲ್ಲಿ ನಿಂತುಬಿಟ್ಟಿತು. ಕ್ರಿಸ್ಟೋಫರ್‍ ಕೊಲಂಬಸ್ ಬಹುಶಃ ಈ ಸ್ಥಳವನ್ನು ಪ್ರಪ್ರಥಮವಾಗಿ ದಾಖಲಿಸಿದ್ದ. “ಅತಿಯಾ...

ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಜಾತಿ ಸಂಬಂಧೀ ಸಂಗತಿಗಳು ಬೀದಿಗೆ ಬಂದು ಬಾಯಿ ಮಾಡುತ್ತಿವೆ. ಜಾತಿ ಎನ್ನುವುದು ಕೆಲವರಿಗೆ ಅಭಿಮಾನದ, ಇನ್ನು ಕೆಲವರಿಗೆ ಅವಮಾನ ವಿಷಯವಾಗಿ ಪರಿಣಮಿಸಿದ ಇಂಡಿಯಾ ವಿಷವರ್ತುಲದಲ್ಲಿ ಜಾತಿಯು ಸಾಮಾಜಿಕ...

ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು ಬಣ್ಣವನ್ನು ಕಳಂಕವೆಂಬಂತೆ ಕಾಣುವ ನಮ್ಮ ದೇಶವನ್ನು ಒಳಗೊಂಡಂತೆ ಜಗತ್ತಿನ ಸ್ವಾ...

ಮಲೇಷಿಯಾದ ರಾಜಧಾನಿ ಕೌಲಲಂಪುರದಲ್ಲಿ ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದೆ. ಈ ಸುದ್ದಿ ಜಗತ್ತಿನನಾದ್ಯಂತ ಹರಡಿತು. ಇದೇ ಕೌಲಲಂಪುರದಲ್ಲಿ ೧೯೯೭ ರಲ್ಲಿ ಜಗತ್ತಿನ ಅತ್ಯಂತ ಎತ್ತರವಾದ ಕಟ್ಟಡವನ್ನು ನಿರ್ಮಿಸಿದ ಖ್ಯಾತಿ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...