
ಅವನು ಬರುತ್ತಾನೆ ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ...
ಬಾಲ್ಯದ ಬರಿಮೈ ತಿರುಗಾಟ ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು ಮೀಸಲ ಸೊಬಗು ನೋಡಿದವರು ಹಾಡಿದರು ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ ಮೈತುಂಬ ಮರ್ಯಾದೆಯುಟ್ಟು ಪ್ರಸನ್ನತೆ ಮುಡಿ...
ಕರ್ನಾಟಕಾಂಬೆಯ ಕನ್ನಡ ಮಾತೆಯೆ ಎಬ್ಬಿಸಮ್ಮ ತಾಯೆ ಎಬ್ಬೀಸೆ ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ ಹಿಂದಿನ ಕವಿಗಳ ಹಿಂದಿನ ಸಿರಿಗಳ ಬಾಯ್ತುಂಬ ಹೊಗಳುತ್ತ ಮಲಗಿಹರ ಇಂದಿನ ಪರಿಗಳ ಮುಂದಿನ ಗುರಿಗಳ ಕೈಯಿಂದ ಮಾಡದೆ ಕುಳಿತಿಹರ ಪಂಪ ರನ್ನ ಕು...
ಬೆಂಕಿಯುದರ ಹಡೆದ ತಂಪು ತೇಜ ಇವಳು ಯಾರ ತಪೋಮಣಿಯೋ! ಯಾವ ಆಟದ ಚೆಂಡೋ! ಗೋಲಿ ಗುಂಡೋ! ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ ಪ್ರಿಯನನೋಲೈಸಿ ಪ್ರಣಯಕೇಳಿಯಲನವ...







