ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್

ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.

ಇನಿಯನೊಲುಮೆಯ ಹುಚ್ಚು

ಇನಿಯನೊಲುಮೆಯ ಹುಚ್ಚು ಕುದಿಯಲ್ಲಿ ಸಿಕ್ಕಿ ಏನಾದೆನೇ ಸಖಿ ಏನಾದೆನೇ! ತೀರದಾಸೆಯ ಬೆಂಕಿ- ಯುರಿಯಲ್ಲಿ ಉಕ್ಕಿ ಪಾತ್ರೆಯಾಚೆಗೆ ಸುರಿದ ಹಾಲಾದೆನೇ! ಮರಳು ಕನಸಿನ ಕೀಲು ಕುದುರೆ ಬೆನ್ನೇರಿ ಏನಾದೆನೇ […]

ಯಾರೋ ಬಂದರು ಹಾರಿ

ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ – ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ […]

ಎಲ್ಲಿ ಹೋದ ನಲ್ಲ?

ಎಲ್ಲಿಹೋದ ನಲ್ಲ? ಚಿತ್ತವ ಚೆಲ್ಲಿ ಹೋದನಲ್ಲ ಮೊಲ್ಲೆ ವನದಲಿ ಮೆಲ್ಲಗೆ ಗಾಳಿ ಸಿಳ್ಳು ಹಾಕಿತಲ್ಲ! ಹರಿಯುವ ಹೂಳಯಲ್ಲಿ – ಫಕ್ಕನೆ ಸುಳಿಯು ಮೂಡಿತಲ್ಲೆ ಜಲ ತುಂಬುವ ಮುಂಚೆ […]

ಎಲ್ಲಿ ಪ್ರಿಯಕರ ಹೇಳಿ

ಎಲ್ಲಿ ಪ್ರಿಯಕರ ಹೇಳಿ ಯಾರಾದರೂ ಬಾರನೇತಕೆ ಬಳಿಗೆ ಕ್ಷಣವಾದರೂ? ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ, ಹಗಲು ಬೆರೆಯಿತು ಘೋರ ಇರುಳಿನಲ್ಲಿ ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ – ನೋಟ […]

ಹೋಗಲೇಬೇಕು ನಾನೀಗಲೇ

ಹೋಗಲೇಬೇಕು ನಾನೀಗಲೇ ಬಾಡುತಿದೆ ಮಲ್ಲಿಗೆ ಆಗಲೇ ಸಮಯವೊ ಜಾರುತಿದೆ ಮೆಲ್ಲಗೆ-ನಿಲ್ಲದೆ ಹೋಗಲೇಬೇಕು ನಾನೀಗಲೇ ಕಿಡಿತಾಗಿ ಯೌವನದ ಧೂಪ ಹೊಗೆಯಾಡಿದೆ ಎಲ್ಲೆಲ್ಲು ಪರಿಮಳದ ಬಳ್ಳಿಗಳ ಚೆಲ್ಲಿದೆ. ಈ ಎಲ್ಲ […]

ಪ್ರೀತಿಯ ಕನಸೆಲ್ಲ ಕರಗಿಹೋಯಿತೆ ಕೊನೆಗೂ?

ಪ್ರೀತಿಯ ಕನಸೆಲ್ಲ ಕರಗಿ ಹೋಯಿತೆ ಕೊನೆಗೂ ಸೋತುಹೋಯಿತೆ ಜೀವ ಮೂಕವಾಯಿತೆ ಭಾವ ತೂಕ ತಪ್ಪಿತೆ ಬದುಕಿಗೆ? ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ ನೀರಿನ ತೆರೆಯಲ್ಲಿ ಸರಿದಂಥ […]