ಲಿಂಗಮ್ಮನ ವಚನಗಳು – ೬

ನಿಮ್ಮ ಪಾದವಿಡಿದು, ಮನ ನಿರ್ಮಳವಾಯಿತು. ನನ್ನ ತನು ಶುದ್ಧವಾಯಿತು. ಕಾಯ ಗುಣವಳಿಯಿತು. ಕರಣಗುಣ ಸುಟ್ಟು ಭಾವಳಿದು ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು, ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

೨೬-೧-೫೦

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ, ಮರಕತ ದ್ವೀಪದಮನೆಗೆ. ದಣಿಗೂ ದಣಿವು! ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ! ತಲೆಯ ಮೇಲಿನ...

‘ಸೂಟ್‌ಕೇಸ್ ಸ್ಟೆಟಲಾನಾ’

ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ) ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ) ನೂರಾರು ಮಕ್ಕಳ ಗರ್ಭ ಧರಿಸುವ ಸಡಗರ ವರ್ಷವಿಡೀ bedrest ಮೇಲಂತಸ್ತಿನ shelf ದಿಂದೆದ್ದು ಮೈ ಕೊಡವಿಕೊಂಡು ರಜೆ ಬಂದನೆಂದು ಬಸಿರಾಗಲು ಇಳಿದು ಬರುತ್ತಾಳೆ....

ಚಂದ್ರ ಸ್ಪೀಡಾಗಿ ಒಡ್ತಾ ಇದ್ದ

ಹಗಲಿಡೀ ಹಾಳು ಮನುಷ್ಯರನ್ನು ಸುಧಾರಿಸಿ ಸುಸ್ತಾದ ಭೂಮಿ ರಾತ್ರಿ ಮತ್ತೆ ಚಂದ್ರ ಬಂದು ಕಾಡದಂತೆ ತಡೆಯೋದಕ್ಕೆ ಮೋಡಗಳ ಕಾವಲು ಹಾಕಿ ಹೋಗಿ ಮಲಗಿದ್ದಳು ಮುತ್ತಿಗೆ ಹಾಕಿದ ಮೋಡಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಚಂದ್ರ ಆಕಾಶದ ತುಂಬಾ ಸ್ಪೀಡಾಗಿ...

ಎಲ್ಲಿ ಮಾಯವಾದ

ಹದಿನೈದು ದಿನದಿಂದ ಕೊರಗಿ ಕೊರಗಿ ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ ಎಲ್ಲಿ ಮಂಗಮಾಯವಾದ? ತಾರೆಗಳಿಗೆ ದಿಗಿಲು ಪಾಪ ಹೋಗಿ ಹುಡುಕೋಣ ಅಂದರೆ ಅಮವಾಸ್ಯೆ ಕತ್ತಲು. *****

ಬಂಡಾಯ

ಪ್ರಿಯ ಸಖಿ, ಯಾವ ತಂಟೆ ತಕರಾರುಗಳಿಲ್ಲದೇ ಎಲ್ಲವನ್ನೂ ಒಪ್ಪಿಕೊಂಡು ಸದ್ದಿಲ್ಲದೇ ಜೀವನವನ್ನು ಸಾಗಿಸುವವರು ಹಲವಾರು ಮಂದಿ. ಆದರೆ ತಮ್ಮ ಸಿದ್ಧಾಂತಗಳಿಗಾಗಿ, ವ್ಯವಸ್ಥೆಯೆದುರು ಸದಾ ಬಂಡೆದ್ದು ಹೋರಾಟವನ್ನೇ ಬದುಕಾಗಿಸಿಕೊಂಡವರು ಕೆಲಮಂದಿ. ಆದರೆ ಕವಿ ಗೋಪಾಲಕೃಷ್ಣ ಅಡಿಗರು...

ಚಿಂತೆಗೆ ಕಣ್ಣತೆತ್ತವಳೆ!!

ಚಿಂತೆಗೆ ಕಣ್ಣ ತೆತ್ತವಳೆ,  ಚಿಲುಕದಮೇಲೆ ಮುಂಗೈಯನೂರಿ ನಿಂತವಳೆ, ಬಿಂದಿಗೆ ಹೊರದೆ ಸೋತವಳೆ, ಸಣ್ಣಗೆ ಒಳಗೆ ಚಿಂತೆ, ಏತರ ಚಿಂತೆ, ನಿನಗೆ? ಚಿಂತೆಗೆ ಕಣ್ಣ ತೆತ್ತವಳೆ, ತುರುಬಿನ ತುದಿಗೆ ಒಂದೆ ಹೂವನು ಮುಡಿದವಳೆ, ಒಂದೊಂದೆ ಬಳೆಯ...

ಭಾವ ಜೀವ

ಭೋರ್ಗರೆದು ಬರಸೆಳೆದು ಬಿರುಸಿನಲಿ ಚಿಮ್ಮೆಸೆದು ಗಿರಗಿರನೆ ಸುರುಳಿಯಲಿ ಸೊರಗಿಸುವ ಸುಳಿಗಳಲಿ ಸಿಕ್ಕಿದಂತೊಮ್ಮೊಮ್ಮೆ ಹೃದಯ ಬಲು ತಪಿಸುವುದು! ನಭಕೇರಿ ಕೆಳಗುರುಳಿ ಭಾವಗಳ ಕಡಲಿನಲಿ ಮಿಂದು ಮೈ ಬೆಂಡಾಗಿ ಬಸವಳಿದು ಬೀಳುವುದು! ಮರು ನಿಮಿಷ ಮೆಲ್ಲೆಲರು ಮೃದು...

ಸ್ವತಂತ್ರ ಭಾರತ (ಆಗಸ್ಟ್ ೧೫-೧೯೪೭)

ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ|| ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ|| ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ, ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ; ತನ್ನ ತಾನು...

ಲಿಂಗಮ್ಮನ ವಚನಗಳು – ೫

ನೆನವುತ್ತಿದೆ ಮನ. ದುರ್ವಾಸನೆಗೆ ಹರಿವುತ್ತಿದೆ. ಕೊನೆಕೊಂಬೆಗೆ ಎಳೆವುತ್ತಿದೆ. ಕಟ್ಟಿಗೆ ನಿಲ್ಲದು- ಬಿಟ್ಟರೆ ಹೋಗದು. ತನ್ನ ಇಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲ್ಲಿಸಿ, ಬಚ್ಚಬರಿಯ ಬೆಳಗಿನೊಳಗೆ ಓಲಾಡುವ ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯ ಅಪ್ಪಣಪ್ರಿಯ...