ಎಲ್ಲಿ?

ತನ್ನೊಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳ್‌ ಸದೃಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳ್ತಳೆದು ಬಾಳ್ಗಳೆದುಂ ಬದುಕಿರ್ಪರಾವಗಂ- ಬೆಳ್ಳಿಯ ಬೆಟ್ಟಮಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ? ೪ *****

ಎದೆಯ ಬಡಿತ

‘ಲಬ್‌ಡಬ್ ಲಬ್‌ಡಬ್’ ಎನ್ನದೆ ಹೋದರು ನನ್ನಯ ಈ ಹೃದಯ ಕನ್ನಡ ಕನ್ನಡ ಎನ್ನತಲಿರುವುದು ಕೇಳೋ ಓ ಗೆಳೆಯ ಎದೆ ಸೀಳಿದರೂ ಅಕ್ಷರ ನಾಲ್ಕು ನನ್ನಲಿ ಇಲ್ವಂತೆ ಆದರೆ ಏನು? ಮೂರಕ್ಷರದ ಕನ್ನಡ ಇಹುದಂತೆ! ನನ್ನಯ...
ಲಾಳಾಸಾಬಿಯೂ ಕುರುಡಿಹಳ್ಳಿಯೂ…..

ಲಾಳಾಸಾಬಿಯೂ ಕುರುಡಿಹಳ್ಳಿಯೂ…..

ಕೆಳಹಟ್ಟಿವರೆಗೂ ಹೋಗಿ ದೂರದಲ್ಲೇ ನಿಂತು ಕೂಗಿ ಕರೆದು ಸತ್ತ ಆಕಳನ್ನು ಎತ್ತಿ ಹೊಯ್ಯಲು ಪರಿಪರಿಯಾಗಿ ಬೇಡಿಕೊಂಡರೂ ಹಣನೀಡುವುದಾಗಿ ಆಶೆ ಹುಟ್ಟಿಸಿದರೂ ಯಾರೋಬ್ಬರು ಬರಲು ನಿರಾಕರಿಸಿದಾಗ ಎಂತಹ ಕಾಲ ಬಂತಪ್ಪ’ ಎಂದು ನಿಟ್ಟುಸಿರಾದರು ಶೇಷಾಚಾರಿ. ಹಟ್ಟಿ...

ನೀ ಎಳೆ ಬಾಲೆ

ನೀ... ಎಳೆ ಬಾಲೆ ನೀರೆ ಎಳೆ ನಿಂಬಿನ್ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗದ್ಹಾಂಗೆ || ಜೋಗದಿ ನೀ ಜಲ ಧಾರೆಯ್ಹಾಂಗೆ ಅರುಣದ ನೀ ಅರುಣ ಕಿರಣದ್ಹಾಂಗೆ ಚಿಗುರಲ್ಲಿ ನೀ ಎಳೆ...

ಮುದುಕನ ಪ್ರಾರ್‍ಥನೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಮಿದುಳಿನಲ್ಲೇ ಜನರು ಮಾಡುವ ಎಲ್ಲ ವಿಚಾರ - ದಿಂದ ರಕ್ಷಿಸು ನನ್ನ ದೇವ; ಅಮರಗೀತೆಯ ಹಾಡುವಾತ ಅದನ್ನು ತನ್ನ ಮೂಳೆ ಮಜ್ಜೆಗಳಲ್ಲಿ ಬಗೆವ; ಈತ ಬಹಳ ವಿವೇಕಿ ಮುದುಕ...
ಕಾಡುತಾವ ನೆನಪುಗಳು – ೧೬

ಕಾಡುತಾವ ನೆನಪುಗಳು – ೧೬

ಚಿನ್ನೂ, ನನ್ನ ಬದುಕಿನಲ್ಲಿ ಎಲ್ಲಾ ಬಂದ ಘಟನೆಗಳು. ನಾನು ನೆನಸಿಕೊಂಡ ಹಾಗಾಗುತ್ತಿರಲಿಲ್ಲ. ಎಲ್ಲವೂ 'ಆಕಸ್ಮಿಕಗಳು' ಎಂಬಂತೆ ಬರುತ್ತಿದ್ದವು. ಆಘಾತ, ಅಪಘಾತಗಳನ್ನೇ ತರುತ್ತಿದ್ದವು. ಹೀಗಾಗಿ ನಾನು ಕನಸು ಕಾಣುವುದನ್ನೂ, 'ಹೀಗೆ ಆಗಬೇಕೆಂದು ಯೋಚಿಸುವುದನ್ನು ಬಿಟ್ಟುಬಿಟ್ಟಿದ್ದೆ. ಬದುಕು...

ಕಮ್ಮಟ

ಇದು ನನ್ನ ಕಮ್ಮಟವು. ರಾಜಮುದ್ರೆಯನೊತ್ತಿ ಹಣವನೋಡಾಡಿಸುವುದಲ್ಲ. ಆಡಳಿತಗಳ ವ್ಯವಹಾರವನ್ನು ನಿಯಂತ್ರಿಸುತ ದಿಗ್ದೇಶಗಳ- ನೊಲಿಸ ಬಯಸುವುದಿಲ್ಲ ಕಲ್ಲು ಬಂಡೆಯ ಕೆತ್ತಿ ಬೋಳಗುಮ್ಮಟಗಳನು ಬಾಳ ಬಯಲಿನಲೆತ್ತಿ ನಿಲ್ಲಿಸುವ ಸಾಮರ್‍ಥ್ಯವಿದಕಿಲ್ಲ ತಾರೆಗಳ ಕೋಟಿ ಹೊನ್ನನು ತಂದು ಆಗಸದ ಮೇರೆಗಳ...

ಶಿವಸಮಾಗಮ

ಕಂಡೆ ಕಂಡೆನು ನಿನ್ನ ಕಂಡೆನು ಕಡೆಗೆ ಉಳಿದು ಕೊಂಡೆನು ನಿನ್ನ ಕಂಡಾ ಮೇಲೆ ಕಾಣಲು ಏನು ಇಲ್ಲಾ ಎಂದೆನು ನೀನು ಎಲ್ಲಾ ಎಂದೆನು ಮುಗಿಲ ಮೇಘಾ ಕರಗಿ ಜಾರಿತು ಪ್ರೇಮ ವರ್‍ಷಾ ಸುರಿಯಿತು ನಿನ್ನ...
ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು

ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು

ಕನ್ನಡದಲ್ಲಿ ಪರ್‍ಯಾಯ ಎನ್ನುವುದು ಸದಾ ಜೀವಂತವಿರುವ ಪ್ರಕ್ರಿಯೆ. ಯಾಜಮಾನ್ಯದ ಪರಿಕಲ್ಪನೆಯಲ್ಲಿ ವಿವರಿಸಲ್ಪಡುವ ಸಂಗತಿಗಳಿಗೆ ಪರ್‍ಯಾಯ ಎನ್ನುವುದು ಒದಗಿ ಬರುವ ಪದವೇ ಆಗಿದೆ. ಕನ್ನಡದ ಮಟ್ಟಿಗೆ ಸದಾ ಯಜಮಾನ-ದಾಸತ್ವದ ಬಾಧೆಗಳು ಇದ್ದವು ಎನ್ನುವುದೊಂದೇ ಇದರ ಅರ್‍ಥವಲ್ಲ....

ಕಣ್ಣು

ಮೊಕ್ಕ್ ಎಳ್ಡು ಕಣ್ಣಾದ್ರೆ ಮನಸೀಗೆ ಒಂದೆ! ಮನಸೀನ್ ಒಂದರ್ ಮುಂದೆ ಎಳ್ಡೂನೆ ಬಂದೆ! ಇಲ್ದಿದ್ರೂ, ಚೆಂದೆ! ಲೋಕಾನ್ ವುಟ್ಟಿಸ್ತಿದ್ರೆ ಮನಸೀನ್ ಒಂದ್ ಕಣ್ಣು ಲೋಕಾನ್ ಆಳ್‌ಮಾಡ್ತೈತೆ ಒರಗಿನ ಎಲ್ಡ್ ಕಣ್ಣು! ಮೊಕದಾಗಿನ್ ವುಣ್ಣು! ೧...