ಅಭ್ಯುದಯ

ಇಳೆಯನೆಲ್ಲ ತುಂಬಿನಿಂತು ನಾಟ್ಯವಾಡುತಿರುವ ರೂಹೆ ! ಅಲ್ಲಿ-ಇಲ್ಲಿ ಎಲ್ಲೆಡೆಯಲಿ ಇದ್ದ ನಿನ್ನ ನಿಲುಕದೂಹೆ ! ಮನವ ಸೆಳೆದುಕೊಳ್ಳುವ ಶಕ್ತಿ ! ನಿನ್ನ ಮಿರುಗಮಿಂಚಿದೇನು ? ಬಣ್ಣ ಬಣ್ಣಗಳನ್ನು ತೋರ್‍ವ ನಿನ್ನ ಸಹಜ ಸೃಷ್ಟಿಯೇನು ?...

ಶ್ರಾವಣಸಮೀರ!

ಬಾ, ಶ್ರಾವಣ ಶುಭಸಮೀರ ಬಾರಾ! ಬಾರೈ ಶ್ರಾವಣ ಸಮೀರ, ಕಾಲನೊಲುಮೆಯೋಲೆಕಾರ, ಸುಖನಾಟಕ ಸೂತ್ರಧಾರ, ಬುವಿಯ ಬೇಟಗಾರಾ! ಬಾ, ಶ್ರಾವಣ ಶುಭಸಮೀರ ಬಾರಾ! ೧ ಪಡುಗಡಲಿಗೆ ತೆರೆಯು ಹೇರಿ, ಜಡಿಯು ಮುಗಿಲ ಕೆಳೆಯ ಸೇರಿ, ನಿಡುಮಲೆಗಳ...

ಪ್ರಾರ್‍ತನೆ

ಬ್ರಮ್ಮ! ನಿಂಗೆ ಜೋಡಿಸ್ತೀನಿ ಯೆಂಡ ಮುಟ್ಟಿದ್ ಕೈನ! ಬೂಮೀ ಉದ್ಕು ಬೊಗ್ಗಿಸ್ತೀನಿ ಯೆಂಡ ತುಂಬ್ಕೊಂಡ್ ಮೈನ! ೧ ಬುರ್ ಬುರ್ ನೊರೆ ಬಸಿಯೋವಂತ ಒಳ್ಳೆ ವುಳಿ ಯೆಂಡ ಕೊಡ್ತೀನ್ ನನ್ದು ಪ್ರಾರ್‍ತ್ನೆ ಕೇಳು ಸರಸೋತಮ್ಮನ್...

ಒಡಲು

ಒಡಲು-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ ಬಂದ ಹೆಣ್ಣಿನ ಹಾಗೆ. ಅವಳಣ್ಣ ತಮ್ಮದಿರು ತಮ್ಮದೆನುವೊಲು ಅವಳ ಆಸ್ತಿಪಾಸ್ತಿಯ ಬಳಿಸಿ ಬಿಂಕದೋರುವರು; ಅವಳೋ ಇವರ ಒಗೆತನವ ಕಿಳ್ಳಿಕೇತನು ಗೊಂಬೆ ಕುಣಿಸುವೊಲು ಕುಣಿಸುವಳು. ಸರಸದುರವಣಿಗೆ ಮೆರವಣಿಗೆ. ಕಣ್ಣೀರು ತ-...
ಸ್ವಾಗತಾಧ್ಯಕ್ಷರ ಭಾಷಣ

ಸ್ವಾಗತಾಧ್ಯಕ್ಷರ ಭಾಷಣ

ಅಪ್ಪಾ ಸಾಹೇಬರ ಭಾಷಣ (ಮಹಾರಾಷ್ಟ್ರ ಸಾಹಿತ್ಯ ಸಮ್ಮೇಲನ) ದಾದಾಸಾಹೇಬ, ತಾತ್ಯಾಸಾಹೇಬ, ಕಾಕಾಸಾಹೇಬ, ಬಾಪೂಸಾಹೇಬ ಅಣ್ಣಾಸಾಹೇಬ ಹಾಗೂ ಪ್ರತಿನಿಧಿ ಬಂಧುಭಗಿನಿಯರೆ, ಬೆಳಗಾವಿ ಶಹರದ ಮರಾಠಿ ಮಾತನಾಡುವವರ ಪರವಾಗಿ ಅತ್ಯಾನಂದದಿಂದ ಇಂದು ತಮ್ಮೆಲ್ಲರಿಗೆ ನಾನು ಸ್ವಾಗತ ಬಯಸುತ್ತೇನೆ....

ಕನ್ನದ ದಾರಿಯಲ್ಲಿ ಅನ್ನ ಬದಲಿಸಿದರೆ ಅಪಾಯ ತಪ್ಪಿತೇ?

ಏನೆಂಥ ದುರ್ಗತಿಯು ಬಂದೊದಗಿತಲಾ ಹೀನವೆನುತಾ ಮಧು ಫಲಕ ಬದಲಾಗಿ ತೃಣ ಧಾನ್ಯವನೆ ಸಿರಿಧ್ಯಾನವೆನುತಾರೋಗ್ಯವನು ಕನವರಿಸುತಲದದೇ ದಿನಪನುರಿಯನೇರಿಸುವ ದಿನಚರಿಯ ಮೋಹ ಮದ್ಯದೊಳಿರಲು - ವಿಜ್ಞಾನೇಶ್ವರಾ *****
ಪಾಪಿಯ ಪಾಡು – ೧೧

ಪಾಪಿಯ ಪಾಡು – ೧೧

ಈ ಸಮಯಕ್ಕೆ, ಮುಂದೆ ಕೋಸೆಟ್ಟಳ ಜೀವಮಾನದಲ್ಲಿ ವಿಶೇಷ ವಾಗಿ ಸಂಬಂಧಿಸುವ ಬಾಲಕನೊಬ್ಬನು ಪ್ಯಾರಿಸ್ ನಗರದಲ್ಲಿ ಬೆಳೆಯುತ್ತಿದ್ದನು. ಇವನ ಹೆಸರು ಮೋರಿಯಸ್ ಪಾಂಟ್ ಮರ್ಸಿ ಎಂದು. ಇವನು ಎಂ. ಜಿಲ್ಲೆ ನಾರ್ಮಂಡ್ ಎಂಬ ವೃದ್ಧನ ದೌಹಿತ್ರನು....

ಏಕೆ

ದೇವಾ ಎನ್ನ ಮನಕ್ಕೆ ರಕ್ಷಿಸು ಕಾಮಕ್ರೋಧ ಮತ್ಸರಗಳಿಂದ ದೇವಾ ಎನ್ನ ಮನಕ್ಕೆ ಶಿಕ್ಷಿಸು ಪುನಃ ಪುನಃ ಮಾಡುವ ತಪ್ಪುಗಳಿಂದ ಮನದಲಿ ಮೋಹ ಬಾರದಿರಲಿ ನಿತ್ಯ ಪ್ರಪಾತಕ್ಕೆ ತಳ್ಳುವುದು ಮನದಲಿ ಸ್ವಾರ್‍ಥ ಇಣಕದಿರಲಿ ನಿತ್ಯವೂ ರಕ್ಕಸದಿ...