Home / ಅರಿಕೆ

Browsing Tag: ಅರಿಕೆ

ಉದ್ಯೋಗಗಳಿರಬಹುದು ನೂರೊಂದು ಅದರೊಳೆಲ್ಲದಕು ಮೇಲಿದ್ದು ರಾಜನಪ್ಪೊಡದು ಬದುಕಿದೊಡೆ ಬದುಕಿಸುವ ಕೃಷಿಯಹುದು ಮದದೊಳೆಮ್ಮುದ್ಯೋಗವಧಿಕವೆನುತೆಲ್ಲರಧಿಕಾರ ದಾಧಿಕ್ಯದೊಳು ಮಧು ಮದಿರೆಯಾಗಿಹುದಲಾ – ವಿಜ್ಞಾನೇಶ್ವರಾ *****...

ಆಡುವುದು, ಪಾಡುವುದು, ಏನೆಲ್ಲ ಮಾಡುವುದು ಬಡವನಾದೊಡಂ ಬಿಡದೆ ತಾ ಜಾಣನೆನಿಸಿಕೊಳು ವೊಡೆಲ್ಲರಿಗು ನೂರೊಂದವಸರಗಳವಕಾಶಗಳಿ ರ್ದೊಡಂ ಕೈ ಕೆಸರುಣದ ಗುಂಪನೇ ಬಡ ಬಡಿಸಿ ತಜ್ಞರೆನುವಜ್ಞತೆ ಯಾಕೋ ರೈತಂಗೆ – ವಿಜ್ಞಾನೇಶ್ವರಾ *****...

ಏನ ಪೇಳಲಿಯಮ್ಮನ್ನದಾತನ ಸಿದ್ಧಿಯನು? ದಾನ ಸುದ್ದಿಯನು! ತಾನೇನ ಬೆಳೆದರು ಘನನು ತಾನೆಲ್ಲವನು ಬಗೆಬಗೆಯ ಕಂಪೆನಿಗಿಕ್ಕಿ ಕೊನೆಯೊಳೆತ್ತುವ ನೋಡಾ ರಿಕ್ತ ಹಸ್ತವನು ಶೂನ್ಯ ಸಂಪಾದನೆಯಾಧ್ಯಾತ್ಮ ಪ್ರತಿನಿಧಿ ಇವನು – ವಿಜ್ಞಾನೇಶ್ವರಾ *****...

ಕಾಲವೊಂದಿತ್ತಂದು ತಿಪ್ಪೇಶನೆಂಬೊಬ್ಬ ದೇವನಿರುತಿ ರಲು ಉತ್ತು ಬಿತ್ತಿ ಬೆಳೆವನ್ನದುದ್ಯೋಗದೊಳು ಎಲ್ಲರಿಗೂ ವಿಹಿತದಾಸಕ್ತಿ ಆದಾಯವಿರುತ್ತಿತ್ತು ಬಲ್ಲಿದರವರಿಗವರೇ ಮಾಲಿ, ಹಮಾಲಿ, ಜಾಡಮಾಲಿ ಮಾಲಿಕರಾಗಿರಲನ್ನದೊಳು ಅನುರಾಗವಡಗಿತ್ತು – ವಿಜ್ಞ...

ಆರೊ ಕೇಳಿದರೆನ್ನವದೆಲ್ಲ ಸರಿಯಾದೊಡಂ ಬರಿ ಸಾವಯವದೊಳಿಹುದೇ ಲಾಭವೆಂದೆನುತ ಬರವಿರದೆ ತಿನ್ನಲುಡಲು ದುಡಿದಲ್ಲಿ ದಣಿ ದಿರಲು, ದಿಂಬಿರದೆ ಸುಖ ನಿದ್ರೆ ಬರುತಿರಲು ಕ್ರೂರತನದೊಳೇನು ಸೂರೆಯೋ, ಧರೆಸೊರಗೆ – ವಿಜ್ಞಾನೇಶ್ವರಾ *****...

ಪೆದ್ದನಾರಂಭ ಗೊಬ್ಬರದೊಳೆಂದೆಂಬ ಪ್ರ ಸಿದ್ಧ ಹಳ್ಳಿ ಮಾತುಂಟಾದೊಡಂ ಜಾಣರೆಲ್ಲರು ಪ್ರ ಬುದ್ಧವೆಂದೆನುತಾ ಪೇಟೆ ಸೇರುತಲಾ ಗೊಬ್ಬರಕೆ ಕೃದ್ಧ ರೂಪವ ಕೊಟ್ಟು ಪೇಳ್ವರಲಾ ಗದ್ದೆ ಗಿದನೆಸೆಯ ಪೆದ್ದ ತಾ ಬುದ್ಧನಪ್ಪನೆಂದೆನುತಾ – ವಿಜ್ಞಾನೇಶ್ವರಾ *...

ಕಾಲವೊಂದಿತ್ತಂದೆಲ್ಲರಲು ಕೃಷಿಯೊಡಗೂಡಿ ಕಲಿಕೆ ನಲಿಕೆ ಬಯಕೆಗಳೆಲ್ಲವುಂ ಸಾವಯವವಾಗಿರಲದನು ಬ ದಲಿಸಲೆಷ್ಟು ತಜ್ಞರು ಶ್ರಮಿಸಿದರೋ ಬಲ್ಲವರು ಇಲ್ಲ ಕಾಲ ಬದಲಿಹುದಿಂದೆಲ್ಲ ಕೃತಕ ಶಾಲೆಯೊಳು ವಿಷಕೃಷಿ ಜ್ವಾಲೆಯೊಳು ಬಿದ್ದಿಹರವರ ಬಿಡಿಸುವ ಬಲ್ಲಿದರೆ ಇಲ...

ಆರೋಗ್ಯದಸ್ಮಿತೆಗೆ ನೂರೊಂದು ತರ ವೈದ್ಯ ಇರುತಿಹುದು ವ್ಯಕ್ತಿ – ರೋಗ ಭೇದಕೊಂದೊಂದು ಮದ್ದು ಮೂರಡಿಗೊಂದು ಮಣ್ಣಿನಾ ಗುಣವಿರಲು ಸೂತ್ರವೊಂ ದರೊಳೆಲ್ಲರಿಗು ವರ ಕೃಷಿಯನರುಹಲಳವಿಲ್ಲ ಊರ ಬರವೆಂತು ನೀಗುವುದು ಪರ ಊರ ಮಳೆಗೆ – ವಿಜ್ಞಾನೇಶ...

ಸಂಭ್ರಮದಿ ಪೇಳುವರು ಅವರಿವರಿಂದು ಸಾವಯವಕೊಂದು ಮಾನ್ಯತೆ ಬಂದಿಹುದೆಂದು ಸಂತೆಯೊಳು ವ್ಯಾಪಾರ ನಡೆಯುತಿರೆ ಮುಂದು ಸೂಕ್ಷ್ಮದೊಳವಲೋಕಿಸಲರಿವ ಸತ್ಯವೆ ಬೇರೊಂದು ಸ್ವಾರ್ಥ ಸದ್ದಿನ ಪೇಟೆಯುಳಿಸಲು ದಾಳವಿದೆಂದು – ವಿಜ್ಞಾನೇಶ್ವರಾ *****...

ಸರಕಾರಿ ನೌಕರರು, ಹೊಸತಾಗಿ ಸೇರಿಹರು ಕಿರಿ ಕಿರಿಯಿದ್ಯಾಕೆಂದು ಲಂಚಕೊಗ್ಗಿಕೊಳ್ಳುವಂದದಲಿ ತರಕಾರಿ ಸಾವಯವವೆಂದು ಮೊದಲೊಳಂದವರು ಬರಬರುತೆ ಅರ್ಥ ಪಂಡಿತರಾಗುತಿಹರಿಲ್ಲಿ ಬರಿ ವ್ಯರ್ಥವೆಲ್ಲ ಪರಿಸರದ ಭಾಷಣವು ಬರದಲ್ಲಿ – ವಿಜ್ಞಾನೇಶ್ವರಾ ****...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...