ಪೆದ್ದನಾರಂಭ ಗೊಬ್ಬರದೊಳೆಂದೆಂಬ ಪ್ರ
ಸಿದ್ಧ ಹಳ್ಳಿ ಮಾತುಂಟಾದೊಡಂ ಜಾಣರೆಲ್ಲರು ಪ್ರ
ಬುದ್ಧವೆಂದೆನುತಾ ಪೇಟೆ ಸೇರುತಲಾ ಗೊಬ್ಬರಕೆ
ಕೃದ್ಧ ರೂಪವ ಕೊಟ್ಟು ಪೇಳ್ವರಲಾ ಗದ್ದೆ
ಗಿದನೆಸೆಯ ಪೆದ್ದ ತಾ ಬುದ್ಧನಪ್ಪನೆಂದೆನುತಾ – ವಿಜ್ಞಾನೇಶ್ವರಾ
*****