ಆರೊ ದುಡಿದರೆ ಇನ್ನಾರಿಗೋ ಆರೋಗ್ಯ ಸಿಕ್ಕೀತೇ?

ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ - ವಿಜ್ಞಾನೇಶ್ವರಾ *****

ವಿಜ್ಞಾನವೆಂದೊಡೆಂತು? ಜ್ಞಾನ ಮಾರ್ಗ ಸಾವಯವವಾಗದೆ?

ವೈಜ್ಞಾನಿಕವೆಂದೇನೇನೋ ಮಾಳ್ಪರಲಾ ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ ನಿಜದೊಳೇನು ಮಾಡದ ಸಾವಯವದೊಳಿಕ್ಕು ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ - ವಿಜ್ಞಾನೇಶ್ವರಾ *****

ಇಂಥ ವೇಗದೋಟದಲ್ಲಿ ನೋಟ ಸಾಧ್ಯವಾ?

ಹಿಂದಿರಲಿಲ್ಲ ಸಾವಯವವೆಂಬೊಂದು ಪಂಥ ಅಂದೆಲ್ಲವುಂ ಸ್ವಂತ ದುಡಿಮೆಯ ಹಂತ ಎಂತಕೀ ಕಠಿಣ ಬದುಕೆನುತಿಂದು ಪ್ರಗತಿ ಪಥ ಸಂಭ್ರಾಂತ ವೇಗದೊಳೆಲ್ಲ ಮರೆಯಾದೊಡಂ ಕಂಡೆನೆನುವರಲಾ ಕೊಂಡಕೂಳನೆ ಸಾವಯವವೆಂದೆನುತ - ವಿಜ್ಞಾನೇಶ್ವರಾ *****

ಉದ್ದದೀ ಜೀವನಕೆ ಒಂದು ಉಸಿರು ಸಾಕಾ?

ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ - ವಿಜ್ಞಾನೇಶ್ವರಾ *****

ಸಹನೆ ಸಾಧನೆಗಳಿಲ್ಲದೆ ಸಾವಯವವೆಂತು?

ಸಾವಯವವೆಂದೊಡದು ಪರ್‍ಯಾಯನಾಮ ಸಹನೆಯೊಡಗೂಡಿ ತತ್ತ್ವ ಸಾಧನೆಗೆ ಸಹನೆಯದು ಗೆಲು ಮನದ ಮರ್ಮ ಸಾಧನೆಯು ತನುವಿನಾಶ್ರಿತ ಧರ್ಮ ಸಾರ್ಥಕವು ತನುಮನಗಳೊಂದಾದ ಕರ್ಮ - ವಿಜ್ಞಾನೇಶ್ವರಾ *****

ಲೋಕ ತಾನೆ ತಾನಾಗಿರಲು ನಾವು ಮಾಡುವುದೇನು?

ಬೇಕಿಲ್ಲವೆಂದು ಹಸುರೆಲ್ಲ ಕೀಳುವುದು ಕಳೆಯೆಂದು ಹಾಕುವುದೇನೆಲ್ಲ ಗೊಬ್ಬರ ಬೆಳೆಯಿಳುವರಿ ಸಾಲದೆಂದು ರೊಕ್ಕ ಸೇದಲು ಬಾವಿ ನೀರಿಗೆ ಬೋರು ಕೊರೆವುದೊಂದಾದ ಮೇಲೊಂದು ಪ್ರಕೃತಿಯೊಳೇನಿಹುದು? ಎಲ್ಲವನ್ನು ನಾವೆ ಮಾಡಿದೆವೆಂದು ಬಾಯ್ ಕೆರೆದರದುವೆ ಭಾರಿ ಕೃಷಿಯೆಂದನಿಸಿಹುದಿಂದು - ವಿಜ್ಞಾನೇಶ್ವರಾ...

ಗಸ್ತು ಪಹರೆಯೊಳಿನ್ನೆಷ್ಟು ದಿನ ಜೀವನವೋ?

ಋತು ಧರುಮದೊಳೆಲ್ಲ ಬಿತ್ತುಗಳಲ್ಲಲ್ಲೇ ಸತುವದೊಳುಕ್ಕಿ ಬೆಳೆಯಲು ಬೇಕು ತತುವದಾ ಮಾತುಗಳೆತ್ತಲೋ ಪೊರಳಿರಲು ಬಿತ್ತಿನಾ ಗುಣ ಬತ್ತಿ ವೈದ್ಯ, ಪೋಲೀಸ ರತಿ ಪಹರೆಯೊಳಿರ್ಪೆಮ್ಮ ಜೀವನದಂತಾಯ್ತು - ವಿಜ್ಞಾನೇಶ್ವರಾ *****

ನಾವು ನಮ್ಮ ಕಾಣದೆ ಕೃಷಿಯೆಂತು?

ದೇವರನತ್ತಿತ್ತಲರಸುತ್ತ ಎತ್ತ ಫೋದರುಂ ಅವನಂತಿಮದೊಳೆಮ್ಮ ಮನದ ಮೌನದೊ ಳವತರಿಪಂತೆಮ್ಮ ಕೃಷಿ ಕಾಣ್ಕೆಗ ಳವರವರ ಚಿಂತನ ಮಂಥನವನಾಧರಿಸಿ ನವ ರೂಪದೊಳುದಿಸಿದರದು ಸಾವಯವ - ವಿಜ್ಞಾನೇಶ್ವರಾ *****

ಕಾಣಲೆಂದು ನಿಂದಲ್ಲೇ ನಿಂದರೇನು ಬಂತು?

ಕೃಷಿಯೊಳ್ ಕಡು ವಿಷವ ಕಡೆಗಣಿಸಿ ಕಡುಸೊಪ್ಪನರೆದರದೊಂದು ಕಿರು ಹಂತ ಕರೆ ಕರೆದು ನಾ ಸಹಜ, ಶೂನ್ಯ, ಸಾವಯವ ಕೃಷಿ ಬೆಟ್ಟವೇರಿಹೆನೆಂದರದು ಕಾಲ ಹರಣ ಕಡು ಕಷ್ಟದೆತ್ತರದ ಹಂತಗಳನ್ನಿಹುದು ನೋಡಾ - ವಿಜ್ಞಾನೇಶ್ವರಾ *****

ಅಂತೆ ಹೇಳಿದರೇನು ಸಾವಯವವೆಂದು?

ಅಧಿಕವೆನೆ ಪೇಳುವರೆಲ್ಲ ತಾ ಸಾವಯವವೆಂದು ಆಮಿಷದಿ ಸಾವಯವವೆಂದೊಂದು ಗೊಬ್ಬರ ತಂದು ಆತುರದಿ ಕೊಂಡುಣುತ ಮನೆಯ ರುಚಿ ಸಾಲದೆಂದು ಅಧಿಕ ಫಸಲದೇನೆ ಬಂದರು ಸಾಲವೇರ್‍ವುದು ಮುಂದು ಅನ್ನ ಗೊಬ್ಬರವದಲು ಬದಲಿನ ಕಾಲದಾಟವಲಾ ಸಾವಯವ -ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys