Home / Jaanakitanayaananda

Browsing Tag: Jaanakitanayaananda

ನೀ ಮನಸುಮಾಡಿದರೆ ಮಹದೇನು? ನಿನ್ನೀ ಜಗದಿ ಅಸಾಧ್ಯ ಇಹುದೇನು|| ನೀ ಮನಸುಮಾಡಿದರೆ ಮೂಗನು ಹಾಡುವನು| ನೀ ಮನಸು ಮಾಡಿದರೆ ಹೆಳವನು ಓಡುವನು| ನೀ ಮನಸು ಮಾಡಿದರೆ ಕುರುಡನೀಜಗವ ನೋಡಿ ಸಂಭ್ರಮಿಸುವನು|| ನೀ ಮನಸು ಮಾಡಿದರೆ ಕೊರಡು ಕೊನರುವುದು| ನೀ ಮನಸು...

ನಿನ್ನ ದಯೆಯಿಂದಲೇ ನಾ ನಿನ್ನೀ ಜಗದಲಿ ಕಣ್ಣ ತೆರೆದಿರುವೆ| ನಿನ್ನ ಕೃಪೆಯಿಂದಲೇ ನಾನಿಲ್ಲಿ ನರನಾಗಿ ಜನ್ಮ ತಳೆದಿರುವೆ| ಏನು ಪುಣ್ಯವೊಕಾಣೆ ಎನ್ನ ತಾಯಿತಂದೆಯ ಮೇಲಾಣೆ ನಾ ಧನ್ಯನಾಗಿರುವೆ| ನಿನಗೆ ಸದಾ‌ಋಣಿಯಾಗಿರುವೆ|| ನನ್ನೆಲ್ಲಾ ಇಷ್ಟಾರ್ಥಗಳ ನನ...

ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು,...

ವಧು ಪರೀಕ್ಷೆ ನಡೆದಿದೆ ಜಾತಕ ಫಲಗಳೆಲ್ಲ ಕೂಡಿ| ಹಿರಿಯರೆಲ್ಲರೂ ಒಂದೆಡೆ ಸೇರಿ ಕನ್ಯೆಯೋರ್ವಳ ಸಂಸಾರ ದೀಕ್ಷೆಗೆ|| ಗುಣ ಗಣಗಳನ್ನೆಲ್ಲಾ ಗಣನೆ ಮಾಡಿ ಎರಡು ಜಾತಕಗಳ ತಾಳೆ ನೋಡಿ| ತುಂಬು ಸೌಹಾರ್ದತೆಯಿಂದ ಕನ್ಯೆ ಇವಳ ಮನಸ ಅರಿಯೆ ಮೆಲು ದನಿಯಲಿ ಪ್ರಶ...

ಮರೆಯ ಬೇಡ ಮನುಜ ನೀನು ಮಾನವೀಯತೆ| ಮೆರೆಯಬೇಡ ಮನುಜ ನೀನು ಮದವೇರಿದ ಪ್ರಾಣಿಯಂತೆ| ಮನುಷ್ಯಗಲ್ಲದೆ ಮಾನವತೆಯಮೌಲ್ಯ ಪ್ರಾಣಿಗಳಿಗೆ ಶೋಭೆ ತರುವುದೇ|| ಅಧಿಕಾರ ದರ್ಪ ಯಾರ ಬಳಿ ಶಾಶ್ವತವಾಗಿ ನಿಂತಿದೆ| ಯಾರಬಳಿ ಲಕ್ಷ್ಮಿ ಸದಾ ಇರುವಳೆಂದು ಭ್ರಮಿಸುವೆ|...

ಯಾರು ಏನೆಂದರೇನು? ನಿಲ್ಲದೀ ಬಾಳ ದೋಣಿ| ಕಡಲಾದರೇನು ನದಿಯಾದರೇನು| ಸಾಗುವುದೇ ಇದರ ಪರಮ ಗುರಿಯಾಗಿರಲು || ಕಡಲಾದರೆ ಅನಂತ ದೂರ ಸಾಗುವೆ ನದಿಯಾದರೆ ಅನೇಕ ಊರ ಸೊಬಗ ನೋಡುವೆ| ಕಡಲಲಿ ಎದುರಾಗುವ ಅಬ್ಬರದಲೆಗಳ ದಾಟಿ ಸಾಗುವೆ| ನದಿಯಲಿ ತೊರೆಯ ಹರಿವಲಿ...

ನಕ್ಕು ಬಿಡು ಒಮ್ಮೆ ಗುಳಿಬೀಳಲಿ ಕೆನ್ನೆ| ಸರಿಯಲ್ಲ ಈ ಮೌನ ನಿನಗೆ ನನ್ನ ಮಾತೇ ಮರೆತು ಹೋಗಿದೆ ನನಗೆ| ಮನೆ ಮನದ ತುಂಬೆಲ್ಲ ಹರಿಯುತಿದೆ ಬರಿಯ ಮೌನ… ನನಗೀಗ ನಿನ್ನ ಮೌನದೇ ವ್ಯಸನ|| ಮರೆತುಬಿಡು ಎಲ್ಲಾ, ನನ್ನೆಲ್ಲಾ ಒರಟುತನ| ಅಪ್ಪಿಕೋ ನನ್ನ...

ದೀನ ನಾನೆಂದೆನ್ನ ಕಡೆಗಣಿಸದಿರು ತಂದೆ| ನಾ ದೀನನೆಂದರೆ ಎನ್ನತಂದೆ ನೀ ದೀನನೆಂದೆನಿಸಿದಂತೆ| ಬೇಡ ನನಗೆ ನನ್ನಿಂದ ನೀ ದೀನನೆಂದೆನಿಸಿಕೊಳ್ಳುವುದು|| ಮೂರು ಲೋಕದ ಒಡೆಯ ನೀನಾಗಿ, ಅವುಗಳಿಗೆಲ್ಲಾ ದೊರೆಯು ನೀನಾದರೆ| ದೊರೆ ಮಗನಲ್ಲವೇ ನಾನು? ನನ್ನ ದೀ...

ನಡೆಯು ಕನ್ನಡ ನುಡಿಯು ಕನ್ನಡವಾಗಲಿ| ನಡೆನುಡಿಗಳೊಂದಾಗಿ ಕನ್ನಡತನವು ಬೆಳಗಲಿ|| ಕನ್ನಡವು ಜಗಜಗಿಸಿ ಕನ್ನಡವು ವಿಜೃಂಭಿಸಲಿ| ಕನ್ನಡದ ಕಹಳೆಯು ಎಲ್ಲೆಡೆಯು ಮೊಳಗಿ ಕನ್ನಡಾಂಬೆಯ ವಿಜಯ ಪತಾಕೆ ಹಾರಡಲಿ|| ಕನ್ನಡ ಮಾತುಗಳು ಮುತ್ತಿನಂತಹ ಹರಳುಗಳು| ಕನ್...

ನಿದ್ದೆ ಒಂದು ಪುಟ್ಟಸಾವು ದಣಿದ ಜೀವಕದುವೆ ಚಿಕ್ಕ ಬಿಡುವು| ದಿನದ ಎಲ್ಲಾ ಭಾರವ ಇಳಿಸಿ ತನು ತೂಗುಯ್ಯಾಲೆಯದೆಯಲಿ ತೇಲಿ ಮನಕೆ ನೀಡುತಿದೆ ನಲಿವು|| ಎಷ್ಟು ಕಠಿಣ ದಿನದ ಬದುಕು| ತುಂಬಲು ತುತ್ತಿನ ಚೀಲವ ದಿನಾ ಹೊಸತ ಹುಡುಕು| ಸೂರ್ಯನುದಸಿದ ಕ್ಷಣದಿಂ...

1...678910...17

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...