ಹನುಮಂತ ಹಾರಿದ ಲಂಕಾ ಸುಟ್ಟು ಬಿಟ್ಟಾನೋ ಬಿಡು ನಿನ್ನ ಬಿಂಕಾ ||ಪ|| ರಾಮ ರಘುಪತಿ ಭಕ್ತಾ ಒಂದು ನಿಮಿಷದೊಳಗೆ ತಂದುಕೊಟ್ಟಾನೋ ಸೀತಾ ಹೌಹೌದು ರಾಮರವದೂತಾ ||೧|| ರಾಮ ಲಕ್ಷ್ಮಣರ ಮಾತು ಮಾರುತಿಗೆ ಹೇಳಿದ್ದು ಗೊತ್ತಿಲ್ಲದಾಯ್ತು...
ಹೌದೆ ನಮ್ಮವ್ವ ನೀನು ಹೌದೆ ಹೌದೆ ಭವದ ಗೊನಿ ಕೊಯ್ದೆ ಮುಕ್ತಿಯ ಮುನಿಗೊಯ್ದೆ ನಮ್ಮವ್ವ ನೀನು ಹೌದೆ ||೧|| ಹಿಡಿದೆ ಧರ್ಮದ ಮಾರ್ಗ ಹಿಡಿದು ಕರ್ಮದ ಬೇರು ಕಡೆದೆ ನಮ್ಮವ್ವಾ ನೀನು ಹೌದೆ ||೨||...
ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ ಕಂದನೆಂದು ಸಲಹು ಇಂದು ||ಪ|| ಮಂಗಲಾಂಗಿ ಕುಂಡಲಾಭರಣಿ ಪುಂಡ ದೈತ್ಯರನ ಖಂಡಿಸಿ...
ಮಾನಾಪಮಾನ ನಿನ್ನವಮ್ಮಾ ಎನಗೇನು ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು ||ಪ|| ಸದಾ ನಿನ್ನ ಧ್ಯಾನದೊಳಿರಲು ಮದಾ ಬಂದಿತೆಂಬುವರಿವರು ಕದನವ ಮಾಡುವರಿವರು ನಿಧಾನವ ತಿಳಿಯದೆಯವರು ಇದು ನಿನ್ನ ಮನಸ್ಸಿಗೆ ಮೃದುವಾದರೊಳಿತಮ್ಮಾ ||೧|| ನಿನ್ನ ಚಿಂತೆಯೊಳಿರಲು...