Home / Tirumalesh KV

Browsing Tag: Tirumalesh KV

ಊರಿಗೆ ಬಂದಾರೆ ಚೆಲುವೆಯರು ಪಲ್ಲಂಗದಲವರ ಕುಳ್ಳಿರಿಸಿ ತನ್ನಿ ನಾಕು ಜನ ಅವರ ಮುಂದಕ್ಕೆ ಬನ್ನಿ ನಾಕು ಜನ ಅವರ ಹಿಂದಕ್ಕೆ ಬನ್ನಿ ಪಲ್ಲಂಗದಲ್ಲವರ ಎತ್ತಿಕೊಂಡು ಬನ್ನಿ ಊರಿಗೆ ಬಂದಾರ ಚೆಲುವೆಯರು ಲಾವಂಚದ ಬೀಸಣಿಗೆ ಬೀಳ್ಕೊಂಡು ತನ್ನಿ ನಾಕು ಜನ ಅವರ ...

ಭಗವಿದ್ದಿತು ಭಗವಂತನಿದ್ದನು ಫ್ರಾಯ್ಡನು ಬರುವ ವರೆಗೆ ಕಾಮವಿದ್ದಿತು ಪ್ರೇಮವಿದ್ದಿತು ರೋಮಾಂಚನವು ಇದ್ದಿತು. ಹೆಣ್ಣುಗಂಡುಗಳಿದ್ದರು ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು ಅಂಗನೆಯರಿದ್ದರು ಅನಂಗನು ಇದ್ದನು ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು ಲಿ...

ಉಂಡುಂಡು ಮಲಗೋ ನಂಜುಂಡ ಅಯ್ಯ ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ ಉಂಡುಂಡು ಮಲಗಯ್ಯ ನಂಜುಂಡ ಅಯ್ಯ ನೀ ದುಂಡಾಗೆ ಮಲಗೊ ತಿಂದು ಮಲಗೋ ನಂಜುಂಡ ಅಯ್ಯ ಒಗ್ಗರಣೆ ಅವಲಕ್ಕಿ ಕಲಸಿದ ಮಂಡಕ್ಕಿ ಎಳ್ಳುಂಡೆ ಗುಳ್ಳುಂಡ...

ಕಿರುನಗೆ ಹೂನಗೆ ಮುಗುಳುನಗೆ ಕನ್ನೆಯರ ಕೆನ್ನೆಗುಳಿ ನಗೆ ಪುಟ್ಟ ಮಕ್ಕಳ ಕಚಗುಳಿಯ ನಗೆ ಸ್ವಾಗತ ನಿಮಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ಕಡೆಗಣ್ಣನಗೆ ತುಟಿಯಂಚಿನ ನಗೆ ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ದುಃಖ...

ಕಷ್ಟ ದೈವವೆ ನನ್ನಿಷ್ಟ ದೈವವೆಂದು ಬದುಕ ಸ್ವೀಕರಿಸಿಕೊಂಡೆ ಬದುಕು ಅನಿಷ್ಟಗಳ ಸರಮಾಲೆಯಾಯಿತು ಬೆಳೆ ನಷ್ಟವಾಯಿತು ಕಳೆ ತುಂಬಿ ಹೋಯಿತು ಬರ ಬಂತು ಮಳೆ ಬಂತು ನನ್ನಿಳೆಯಲೆಲ್ಲವೂ ನಾಶವಾಯಿತು ದುಡಿತಕೆ ಮೈಯೊಗ್ಗಿತು ಬೆನ್ನು ಬಗ್ಗಿತು ಕೈ ಬಡ್ಡಾಯಿತು ...

ಅಹಂ ಬ್ರಹ್ಮ ಈ ಬ್ರಹ್ಮನಿಗೆಂಥ ಹಸಿವು ಇದು ಹಿಂಗಿಸಲಾರದ ಹಸಿವು ಅನ್ನದ ಹಸಿವೀ ಬ್ರಹ್ಮನಿಗೆ ಅನ್ನ ದೊರೆತೊಡೆ ನೀರಿನ ಹಸಿವು ನೀರು ದೊರೆತೊಡೆ ಕಾಮದ ಹಸಿವು ಕಾಮ ದೊರೆತೊಡೆ ಪ್ರೇಮದ ಹಸಿವು ಅಹಂ ಬ್ರಹ್ಮ ಜ್ಞಾನದ ಹಸಿವೀ ಬ್ರಹ್ಮನಿಗೆ ಜ್ಞಾನ ದೊರೆತೊ...

ಈ ಗಿಣಿಯೆ ಆ ಗಿಣಿಯೆ ಯೇ ಗಿಣಿಯೆ ಕಡು ಕೆಂಪಿನ ಕೊಕ್ಕಿದೆಯೆ ಹರಳಿನ ಕಣ್ಣಿದೆಯೆ ಆಚೀಚೆಗೆ ಹೊರಳಿದೆಯೆ ಕೊಂಕುವ ದುಂಡನೆ ಕತ್ತಿದೆಯೆ ಈ ಗಿಣಿಯೆ ಆ ಗಿಣಿಯೆ ಯೆ ಗಿಣಿಯೆ ಎಲ್ಲೆಲ್ಲೂ ಗಿಣಿಯೆ ಚಿನ್ನದ ಕಣಿಯೆ ಈ ಕೋಗಿಲೆ ಆ ಕೋಗಿಲೆ ಯೇ ಕೋಗಿಲೆ ಎಲೆಮರೆ...

ಇದು ಎಂಥ ಶಿಶಿರ! ಇದು ಎಂಥ ಶಿಶಿರ! ಹಕ್ಕಿಗಳ ಸದ್ದಿಲ್ಲ ಮರಗಳಲಿ ಎಲೆಯಿಲ್ಲ ಹಿಮ ಹೊದ್ದು ಮಲಗಿದೆ ಸರ್‍ವತ್ರ ಭೂಮಿ ಬೀದಿಯಲಿ ಜನವಿಲ್ಲ ಮಾತೆ ಕೇಳಿಸುವುದಿಲ್ಲ ನಗೆಯಿಲ್ಲ ಸದ್ದಿಲ್ಲ ಎಲ್ಲೆಲ್ಲೂ ಮೌನ ಉತ್ತರ ಧ್ರುವದಿಂದ ಬೀಸಿ ಬಂದಂಥ ಗಾಳಿ ಕೊರೆಯು...

ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು ಒಂದೇ ಎನಿಸುವುದೇ ಕುಳಿರ್‍ಗಾಳಿಯಲಿ ಹೊದ್ದಿಕೆ ಎರಡ್ಮೂರಿದ್ದರು ಒಂದೇ ಕತ...

ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ ಬುದ್ಧ ರಾಹುಲ ಬುದ್ಧ ಗೌತಮ ಬ...

1...45678...63

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...