Home / Govind Pai

Browsing Tag: Govind Pai

ಭೂಪಾಳಿ-ಝಂಪೆ ನೋಡು ನೋಡೆಲೊ ದೇವ! ಗತಿವಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧|| ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ ಕ್ರ...

ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧|| ...

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ “Farewell”ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು) ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು! ಮಬ್...

(ಲಾಹೋರಿನ ಡಾ ಶೇಖ್‌ ಮಹಮ್ಮದ್‌ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ ಹೃದ...

(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು) ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೊರೆವೆನೊರೆವ ಕಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! ೪ ಹೊನ್ನಿನ...

ನನ್ನವೀ ನುಡಿಗಳಿರ! ಕಾಲದಲೆಗಳಲಿ ನಿಮ್ಮನುರಿಹಣತೆಯಂತಿದೊ ತೇಲಬಿಡುವೆ, ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ, ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ. ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ ದನಿತುಮಂ ಪೊರಮಡಿಸಿದುಲಿನಕ್ಕಿಯಮ್ಮ ಸಂಜೆಯೊಳವಂ ...

1...456

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....