Home / Kannada

Browsing Tag: Kannada

ಒಕ್ಕಲಿಗರೆಲ್ಲ ಸೀಗೆ ಹುಣ್ಣಿಮೆ ಹಾಗೂ ಎಳ್ಳು ಅಮಾಸಿಗೆ ಹೊಲದ ಲಕ್ಷ್ಮಿಗೆ ನೈವೇದ್ಯ ಕೊಂಡೊಯ್ಯುತ್ತಾರೆ. ಹೊಲವುಳ್ಳವರು ಹೊಲವಿಲ್ಲದವರನ್ನು ತಮ್ಮೊಡನೆ ಹೊಲಕ್ಕೆ ಕರೆದೊಯ್ದು ಊಟಮಾಡಿಸಿ ಕಳಿಸುವರು. ಅಮಾಸಿಗೆ ಉಳ್ಳಿಕ್ಕೆ ಕರೆಯದವರಾರು” ಎಂಬ ...

ಗಂಡ: ಹೊಸದಾಗಿ ಮದುವೆ ಆದ ದಂಪತಿಗಳು ಸ್ವೇಚ್ಛೆಯಾಗಿ ಮಾತಾಡುತ್ತಾ ಇದ್ದರು. “ನೀನು ನನ್ನನ್ನು ಒಂದೇ ಸಲಕ್ಕೆ ಹೇಗೆ ಒಪ್ಪಿದೆ ಎಂದು ಕೇಳ ಬಹುದಾ?” ಹೆಂಡತಿ: “ಅಗತ್ಯವಾಗಿ ಕೇಳಿ. ಹೇಳಿ ಕೇಳಿ, ನಿಮ್ಮ ಅಪ್ಪ ಅಜ್ಜ ಎಲ್ಲರೂ ಹೊಟ...

ಗವ್ವನೆಯ ಅಮವಾಸೆಯ ಕಗ್ಗತ್ತಲು ಮಳೆಗಾಲದ ಕವದಿಹೊದ್ದು ಗಡದ್ದಾಗಿ ಮಲಗಿದ್ದು ಕನಸುಗಳೂ ಒಡೆಯದ ನಿಶ್ಶಬ್ದ ರಾತ್ರಿಗೆ ಸವಾಲು ಎನ್ನುವಂತೆಯೋ ಏನೋ ಕತ್ತಲಂಗಳಕೆ ಚಂದ್ರಲೇಪಿತ ಕಮಲೆ ಹುಟ್ಟಬೇಕೆ? ಎಳೆಗೂಸು ಎಸಳು ಇನ್ನೂ ಹೊಕ್ಕಳಬಳ್ಳಿ ಬಿಡಿಸಿಲ್ಲ ಕಣ್ಣ...

ಕನ್ನಡನಾಡಿನ ಕುಮಾರನ ಅಂತ್ಯ ಸಂಸ್ಕಾರನಾ ರಾಜಕಾರಣದಲ್ಲಿನ್ನೂ ಕೊಮಾರನಾದ (ಬಚ್ಚಾ) ಕುಮಾರಸ್ವಾಮಿ ಏಟು ಪಸಂದಾಗಿ ಮಾಡಿದ ಅಂಬೋದ್ನ ನೀವೆಲ್ಲಾ ಮನೆಯಾಗೇ ಕುಂತು ಟವಿನಾಗೆ ಗಾಬರಿಬಿದ್ದು ನೋಡಿ ಹೊಟ್ಟೆಗೆ ಹಾಲು ಹೊಯ್ಕೊಂಡಿದ್ದೀರಿ. ದೇಶದ ಪಾಪ್ಯುಲರ್ ...

ದಟ್ಟ ನಗರದ ಈ ಸ್ಪಷ್ಟ ಏಕಾಂತದಲ್ಲಿ ಈ ಹೋಟೆಲಿನ ಈ ಮೂಲೆಯಲ್ಲಿ ಈ ಟೇಬಲಿನ ಈ ಎರಡು ಪಕ್ಕಗಳಲ್ಲಿ ಕೂತಿರುವ ನಾವು ಈಗ ಯೋಚಿಸುತ್ತಿರುವುದು ಏನು ಪ್ರಿಯೆ ? ಅದು ಜಾಫ್ನಾ ಅಲ್ಲ ನಾಳಿನ ಭಾರತದ ಸ್ವಪ್ನವೂ ಅಲ್ಲ ಅದು ಶ್ರೀಲಂಕಾ ಅಲ್ಲ ಅದು ಗೋಯಂಕಾ ಅಲ್ಲ...

ಯೌವನದ ಕನಸುಗಳ, ದೇಹ ಸಿರಿಯ ಹಸಿರು ಕಾಮುಕರಿಗೆ ಮಾರಿ ಬೇಯುತಿಹ ಭಾಗ್ಯಹೀನ ಮಾನಿನಿಯರಿಗೆ ಬದುಕಿನ ಬೆಳಕಾಗಿ ಬಾಳಕುಡಿಯ ನೆರಳಾಗಿ ದೇವದಾಸಿ ವೇಶ್ಯೆ ಹೃದಯಹೀನರ ಹಣೆಪಟ್ಟಿಯ ಸಮಾಜದ ಮೌಡ್ಯ ಬಂಧನದ ಆಚಾರ-ರೂಢಿಗಳ ಸಂಕೋಲೆಯ ಬಿಡಿಸಿ ಅಪ್ಪುಗೆಯ ಬಾಹುಗಳ...

ಒಬ್ಬ ಒಕ್ಕಲಿಗನಿಗೆ ತಿಮ್ಮಣ್ಣನೆಂಬ ಒಬ್ಬ ಮಗ. ಬಿಂಬಾಲಿ ಎಂಬ ಮಗಳು ಇದ್ದರು. ಆ ಅಣ್ಣತಂಗಿಯರು ತಮ್ಮ ತೋಟದಲ್ಲಿ ಗೊಂಡೆ ಹೂವಿನ ಗಿಡಗಳನ್ನು ಎರಡು ಸಾಲಿನಲ್ಲಿ ಬೆಳೆಸಿದ್ದರು. ಅಣ್ಣನು ನೆಟ್ಟಗಿಡಗಳಲ್ಲಿ ಹೆಣ್ಣು ಹೂಗಳು, ತಂಗಿಯು ನೆಟ್ಟ ಗಿಡಗಳಲ್ಲಿ...

ಕಂಡಕ್ಟರ್ ಬಸ್ಸಿನಲ್ಲಿ ಚಿಲ್ಲರೆಗಾಗಿ ಪರದಾಡುತ್ತಾ ಪ್ರಯಾಣಿಕರಿಗೆ ಚಿಲ್ಲರೆ ಕೊಟ್ಟು ಸಹಕರಿಸಲು ಕೇಳಿಕೊಳ್ಳುತ್ತಿದ್ದ. ಒಂದು ದಿನ ತರ್ಕಾರಿ ತರುವ ಸಲುವಾಗಿ ಪೇಟೆಗೆ ಹೋದ ತರ್ಕಾರಿ ಮಾರುವವಳು `ಚಿಲ್ಲರೆ ಕೊಡಿ’ ಎಂದಳು. `ಚಿಲ್ಲರೆ’...

ನಾವು ಮತ್ತೆ ಮತ್ತೆ ಕೆಲವು ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು ಅವು ನಾಯಿಗಳನ್ನು ಸಾಕಿಕೊಂಡಂತೆ ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ ನಾವು ಮತ್ತೆ ಮತ್ತೆ ಉತ್ತರಗಳನ್ನು ಬಿಟ್ಟುಕೊಡಲೇಬಾರದು ಅವು ಮೀನುಗಳಂತೆ ಪುಳಕ್ಕನೆ ಜಾರಿ ಕಣ್ಮರೆ ಸು...

ಗೋಕಾಕ್ ಚಳುವಳಿ ಅಂತ ಒಂದು ದೊಡ್ಡ ಗದ್ದಲವೆ ನೆಡೀತು ೨೫ ವರ್ಷದ ಹಿಂದೆ ನೆಪ್ಪದೇನ್ರಿ? ಆಗಿನ ಜಮಾನ್ದಾಗೆ ಬೆಂಗಳೂರ್ನಾಗೆ ಎಲ್ಲಿ ನೋಡಿದ್ರೂ ತಮಿಳರ ಸ್ಲಮ್ಮು ಇಸಮ್ಮುಗಳೇ ತುಂಬ್ಕೊಂಡಿದ್ವು. ಬೆಂಗಳೂರ್ನಾಗೆ ಕಾಲಿಕ್ಕಿದ ತಕ್ಷಣ ಕೇಳ್ತಿದ್ದೇ ‘ಎಂಗೆ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...