
ಮೀರಮುನಷಿ ಅಶ್ವತ್ಥನಾರಾಯಣನ ಸಂಕೇತಕ್ಕನುಗುಣ ವಾಗಿ ದಾಮೋದರಪಂತರು ಎದ್ದು ನಿಂತು ವೇದವ್ಯಾಸನ ಮನವಿಯನ್ನು ಓದಲಾರಂಭಿಸಿದನು. ಹ್ಯಾಗೆಂದರೆ- “ಶ್ರೀಮದ್‌ರಾಜಾಧಿರಾಜಮಹ:ರಾಜ ವಸಂತನಗರದ ಭೂಪತಿಗಳ ಸಂಸ್ಥಾನಕ್ಕೆ ಕುಮುದಪುರದ ವೇದವ್ಯಾಸ ಉಪಾಧ್ಯನು ಅತಿ ...
ಚತುರೋವಾಯದಲ್ಲಿ ಘಟ್ಟಿಗನಾದ ಬಾಲಮುಕುಂದನು ತನ್ನ ಮನ ಸ್ಸಿನ ಬಯಕೆಯಂತೆಯೇ ದ್ವಿಜರೀರ್ವರ ಹಟವು ಪೂರ್ಣವಾದರೆ ಯತಿಯ ಮುಂದಿನ ಅವಸ್ಥೆಯು ಹ್ಯಾಗಾದರೇನೆಂಬ ತಾತ್ಕಾಲದ ಪರಿಗಣನದಿಂದ ಸೂಚಿಸಿದ ಉಪಾಯವು ಬುದ್ಧಿವಂತಿಗೆಯ ಲಕ್ಷಣವೆನ್ನಬಹುದು. ವೇದವ್ಯಾಸ ಉ...
ಬಾಲಮುಕುಂದಾಚಾರ್ಯನು ಸೂಚಿಸಿದ ಸಮಯಕ್ಕೆ ಭೀಮಾಚಾ ರ್ಯನು ವೇದವ್ಯಾಸ ಉಪಾಧ್ಯನನ್ನು ಕರೆದುಕೊಂಡು ಮಠಕ್ಕೆ ಬಂದನು ಹರಿಪದಾಂಬುಜತೀರ್ಥರು ಬಹು ನಿಧಾನಿಗಳು. ಪ್ರಣಿಪಾತಮಾಡಿ ನಿಂತು ಕೊಂಡ ವಿಪ್ರರೀರ್ವರನ್ನೂ ಸಮ್ಮುಖದಲ್ಲಿ ಕುಳ್ಳರಿಸಿಕೂಂಡು, ಯಾವ ಉದ್...
ಚಂಚಲನೇತ್ರರ ಮಠವಿರುವ ಕುಮುದಪರವು ಶ್ರೀಮದ್ವೀರ ನರ ಸಿಂಹರಾಯನ ವಸಂತನಗರವೆಂದು ವಾಡಿಕೆಯಾಗಿ ಕೆರೆಯಲ್ಪಡುವ ರಾಜ್ಯದ ಒಂದು ಪಟ್ಟಣವಾಗಿರುತ್ತದೆ. ಇದರಂತೆಯೇ ಇನ್ನೂ ಐದು ಪಟ್ಟಣಗಳು ಆ ನಗರಕ್ಕೆ ಇರುವುವು. ಅವುಗಳ ಹೆಸರುಗಳು:- ಅರಸನ ಅರಮನೆ ಇರುವ ನೃ...
ಅವಮರ್ಯಾದೆಯ ದೆಸೆಯಿಂದ ಸಂತಾಸಗ್ರಸ್ಮಳಾಗಿಗುವಾಗ ವಾಗ್ದೇ ವಿಗೆ ತಿಪ್ಪಾಶಾಸ್ತ್ರಿಯ ನೆನಪು ಬಂತು. ಅಹಾ! ಸಂತೋಷಪ್ರಾಪ್ತಿಸಿದಾಗ ಮರೆಯದೆ ಕರೆಸಿಕೊಂಡರೆ ಮುಂದಿನ ವೃದ್ಧಿಯ ಉಪಾಯವನ್ನೆಲ್ಲ ಹೇಳುವೆ ನೆಂದು ಅನುರಾಗ ಪೂರ್ವಕವಾಗಿ ವಾಗ್ದತ್ತಮಾಡಿದ ಆಪ್...
ವಾಗ್ದೇವಿಯ ತಂದೆತಾಯಿಗಳು ಮಗಳ ದೆಸೆಯಿಂದ ಅತ್ಯಾನಂದವನ್ನು ಅನುಭವಿಸುವ ಉತ್ತಮ ಸ್ಥಿತಿಗೆ ಬಂದರು. ಅದೇನು ಆಶ್ಚರ್ಯ? ಉಣ್ಣಲಿಕ್ಕೆ ತಿನ್ನಲಿಕ್ಕೆ ಏನೂ ಕಡಿಮೆಯುಂಟೇ? ಅವರಿಗೆ ಯೋಚನೆ ಯಾವದಾದರೂ ಇರಲಿಕ್ಕೆ ಕಾರಣವೇ ಇಲ್ಲ. ಮೃಷ್ಟಾನ್ನಭೋಜನದಿಂದ ಮೈ ...
ಹೃದಯದಲ್ಲಿ ವಾಗ್ದೇವಿಯ ಬಿಂಬವನ್ನು ಪ್ರತಿಷ್ಠಿಸಿಕೊಂಡು, ಚಂಚಲ ನೇತ್ರರು ದೇವರ ಪೂಜೆಯನ್ನು ತೀರಿಸಿದರು. ಆಜ್ಞೆಗನುಗುಣನಾಗಿ ವಾಗ್ದೇವಿಯು ಬಳಗದೊಡನೆ ತೀರ್ಥಪ್ರಸಾದಕ್ಕೆ ಸಕಾಲದಲ್ಲಿ ಬಂದೊದಗಿ ದಳು. ತೀರ್ಥಪ್ರಸಾದವಾಯಿತು. ರಾತ್ರಿಯೂಟದ ಏರ್ಪಾಟುಮ...
ವಾಗ್ದೇವಿಯ ಮನೆಯಿಂದ ಚಂಚಲನೇತ್ರರ ಮಠಕ್ಕೆ ಹೆಚ್ಚು ದೂರ ವಿರಲಿಲ್ಲ. ಹೆಚ್ಚು ಕಡಿಮೆ ಒಂದುವರೆ ಹರದಾರಿಯೆನ್ನಬಹುದು. ಚಂಚಲ ನೇತ್ರರು ವಾಗ್ದೇವಿಯ ಬರುವಿಕೆಯನ್ನು ಕಾಯುತ್ತಾ, ಒಮ್ಮೆ ಆ ಗವಾಕ್ಷದಿಂದ ಒಮ್ಮೆ ಈ ಗವಾಕ್ಷದಿಂದ ಬೀದಿಕಡೆಗೆ ನೋಡುತ್ತಾ, ...
“ಅಮ್ಮಾ! ವೆಂಕಟಪತಿ ಆಚಾರ್ಯರು ಡೊಳ್ಳಾಡಿಸಿಕೊಂಡು ಬರುತ್ತಾರೆ, ಏನೆಲ್ಲ ಚವಡಿಮಾಡಿ ಶ್ರೀಪಾದಂಗಳವರ ಮನಸ್ಸೇ ತಿರುಗಿಸಿಬಿಟ್ಟಿರೋ ಎಂಬ ಸಂಶಯ ವ್ಯರ್ಥವಾಗಿ ತಾಳಿದೆವಲ್ಲ” ಎಂದು. ವಾಗ್ದೇವಿಯು ಹೇಳುವ ದನ್ನು ಕೇಳ ಭಾಗೀರಧಿಯು ಬಾಗಲಲ್ಲ ನಿಂತು...
ಪುರಾಣ ಪುಸ್ತಕವನ್ನು ಕಟ್ಚಿ ರೋಷದಿಂದ ಹೊರಟುಹೋದ ವೇದ ವ್ಯಾಸ ಉಪಾಧ್ಯನು ಮನೆಗೆ ತಲ್ಪಿದಾಗ ಗಂಡನ ಮುಖದ ಸ್ಥಿತಿಯಿಂದ ಏನೋ ವೈಷಮ್ಯ ನಡೆದಿರಬೇಕೆಂಬ ಅನುಮಾನದಿಂದ ಅವನ ಪತ್ನಿ ಸುಶೀಲಾಬಾಯಿಯು ಸಮಯವರಿತು ಖಿನ್ನತೆಯ ಕಾರಣವನ್ನು ತಿಳಿದಳು. ಆಹಾ! ಗ್ರಹ...















