ವಾಗ್ದೇವಿ – ೮

ವಾಗ್ದೇವಿ – ೮

ಪುರಾಣ ಪುಸ್ತಕವನ್ನು ಕಟ್ಚಿ ರೋಷದಿಂದ ಹೊರಟುಹೋದ ವೇದ ವ್ಯಾಸ ಉಪಾಧ್ಯನು ಮನೆಗೆ ತಲ್ಪಿದಾಗ ಗಂಡನ ಮುಖದ ಸ್ಥಿತಿಯಿಂದ ಏನೋ ವೈಷಮ್ಯ ನಡೆದಿರಬೇಕೆಂಬ ಅನುಮಾನದಿಂದ ಅವನ ಪತ್ನಿ ಸುಶೀಲಾಬಾಯಿಯು ಸಮಯವರಿತು ಖಿನ್ನತೆಯ ಕಾರಣವನ್ನು ತಿಳಿದಳು. ಆಹಾ! ಗ್ರಹಗತಿಯ ದೋಷವೇ! ಹಿಂದೆ ಎಷ್ಟೋ ಕಾಲದಿಂದ ನಡೆದು ಬಂದು, ಮುಂದೆ ಕೈಕಾಲು ಬೀಳುವವರೆಗೂ ನಡಕೊಂಡು ಬರಲಿಕ್ಕಿದ್ದ ಉಪಜೀವನಕ್ಕೆ ಒಮ್ಮೆಗೆ ಹಾನಿ ಬಂದುಹೋಯಿತಲ್ಲಾ! ಬಡವನ ಸಿಟ್ಟು ದವಡೆಗೆ ಕೇಡು ಎಂಬ ಗಾದೆಯಾಯಿತು. ಶ್ರೀಪಾದಂಗಳವರಿಗೆ ಈಗ ಕರುಣ ಹುಟ್ಟುವಂತೆ ಹೇಳಿಕೊಳ್ಳಬಹುದೆಂದರೆ ವಲ್ಲಭನು ಸ್ವೇಚ್ಛೆಯಿಂದ ಉದ್ಯೋಗವನ್ನು ಬಿಟ್ಟುಬಂದಿರುವನಷ್ಟೆ? ನೀನಾಗಿ ಬಿಟ್ಟುಹೋದ ಉದ್ಧೋಗ ನೀನೇ ಅಪೇಕ್ಷಿಸುವದಕ್ಕೆ ನಾಚುವದಿಲ್ಲವೇ? ಎಂಬ ಪ್ರತ್ನುತ್ತರ ಶ್ರೀಪಾದಂಗಳವರ ಬಾಯಿಯಿಂದ ಹೊರಟರೆ ಕೃಷ್ಣವದನ ಮಾಡಿಕೊಂಡು ಮರಳಬೇಕಾಗುವದು. ಸುಮ್ಮನಿದ್ದರೆ ಅನ್ನದ ಮಡಕೆಯು ಅಟ್ಟಕ್ಕೇರು ವದು ಪುಣ್ಯಾತ್ಮನಿನ್ನೊಬ್ಬನಿಗೆ ಪುರಾಣ ಹೇಳುವ ಕೆಲಸ ನೇಮಕವಾಗು ವದು. ಇಂಥಾ ಉಭಯ ಸಂಕಟದಲ್ಲಿ ಬೀಳುವದಾಯಿತಲ್ಲಾ! ಎಂಬ ವ್ಯಸನ ಆ ಪತಿವ್ರತಿಗೆ ತಾಗಿತು.

ಸಿಟ್ಟು ತಣಿದ ಮೇಲೆ ವೇದವ್ಯಾಸ ಉಪಾಧ್ಯನು ಹುಚ್ಛುತನದಿಂದ ಅನ್ನವನ್ನು ಕಳಕೊಂಡು ನಾಚಿಕೆಗೆ ಗುರಿಯಾದೆನೆಂಬ ಅನುತಾಪದಲ್ಲಿ ಬಿದ್ದನು. ಶತಪ್ರಯತ್ನ ಮಾಡಿ ಆ ಉದ್ಯೋಗವನ್ನು ಪುನಃ ಪಡೆಯಬೇಕೆಂಬ ಹಟವು ವೇದವ್ಯಾಸ ಉಪಾಧ್ಯಗೆ ಅಂಟಿಕೊಂಡಿತು. ಆದರೆ ಮುಂದಿನ ಸಾಧನೆಯನ್ನು ನಡೆಸುವ ಅಂದವನ್ನು ತಿಳಿಯದೆ, ತನ್ನಂತೆ ಚಿಂತೆಯಲ್ಲಿರುವ ಪ್ರೀತಿಯ ವಲ್ಲಭೆಯನ್ನು ಕೇಳಿದನು. ಅವಳು ಸ್ಪಲ್ಪ ಹೊತ್ತು ಆಲೋಚಿಸಿ, ವೆಂಕಟಪತಿ ಆಚಾರ್ಯರನ್ನು ಹಿಡಿದರೆ ಕೆಲಸ ಕೈಗೂಡವದೆಂದು ಸೂಚಿಸಿ ದಳು. ಕಾಂತೆಯ ಸೂಚನೆಯನ್ನನುಸರಿಸಿ, ಆ ಬಡ ಬ್ರಾಹ್ಮಣನು ವೆಂಕಟ ಪತಿ ಆಚಾರ್ಯನ ಮನೆಯ ಕಡೆಗೆ ಹೋದನು. ಆದರೆ ಅವನು ಎಲ್ಲಿಗೋ ಹೊರಟು ಹೋಗಿರುವನೆಂದು ತಿಳಿದು ಅಲ್ಲಿಂದ ಹೊರಬಿದ್ದನು.

ಚಿಂತೆಯೂ ಅವಸರವೂ ನಾಚಿಕೆಯೂ ಆತ್ಮಧಿಕವಾದರೆ ಬುದ್ಧಿಯ ಬಲವೇ ಕುಂದಿಹೋಗಿ ಯಾವ ಸಮಯದಲ್ಲಿ ಯಾವ ಕೃತ್ಯವನ್ನು ಮಾಡ ಬೇಕೆಂಬ ಜ್ಞಾನಶೂನ್ಯವಾಗಿ ಮನಸ್ಸಿನಲ್ಲಿ ವಿಕಲ್ಪವೂ ಚಂಚಲವೂ ಭಯವೂ ನೆಲೆಗೊಂಡು, ಕಾರ್ಯಸಾಧನೆಗೆ ವಿಘ್ನವುಂಟಾಗುವ ಅವಸ್ಥೆಯು ವೇದ ವ್ಯಾಸ ಉಪಾಧ್ಯನಂತೆ ಕಂಗೆಟ್ಟ ಜನರಿಗೆ ಬರುವದುಂಟು, ಈ ದೆಸೆಯಿಂದ ವಿವೇಕವೈಕಲ್ಯ ಹೊಂದಿದ ಆ ಬಡವನು ಸಮಯ ಕಳೆದರೆ ತನ್ನ ಉದ್ಯೋ ಗಕ್ಕೆ ಇನ್ನೊಬ್ಬನು ನೇಮಕವಾಗಿ ತನ್ನ ಪ್ರಯತ್ನ ವ್ಯರ್ಧನಾಗುವದೆಂಬ ಹೆದರಿಕೆಯಿಂದ ನೆಟ್ಟಿಗೆ ಮಠಕ್ಕೆ ಹೋಗಿ ಚಂಚಲನೇತ್ರರಿಗೆ ವಂದಿಸಿ ನಿಂತು ಕೊಂಡನು. ಮತ್ತು ಸರ್ವ ಅಪರಾಧಗಳನ್ನು ಕಮಿಸಿ, ತನ್ನ ಬಡತನದ ಕಡೆಗೆ ಲಕ್ಷ್ಯವಿಟ್ಟು ಜೀವನೋಪಾಯವನ್ನು ಪುನಃ ಅನುಗ್ರಹಿಸಬೇಕೆಂದು ವಿನಯದಿಂದ ಬೇಡಿಕೊಂಡನು.

“ನಿನ್ನ ಬಡತನದ ಪರಿಮಾಣಕ್ಕೆ ಮೀರುವ ಅಹಂಕಾರವೂ ಸಿಟ್ಟೂ ನಿನ್ನ ವೃದ್ಧಿಯ ಶತ್ರುಗಳು. ಈ ಶತ್ರುಗಳನ್ನು ಜಯಿಸಲಿಕ್ಕೆ ನಿರುದ್ಯೋಗ ಮತ್ತು ಅನ್ನ ಪ್ರಮುಷ್ಟತೆಯೇ ಮುಖ್ಯವಾದ ಆಯುಧಗಳು. ನಮ್ಮ ವಚನವು ಸತ್ಯವೋ ಹ್ಯಾಗೆಂದು ನೀನು ಕೆಲವು ದಿವಸ ಪರೀಕ್ಷೆಮಾಡಿ ನೋಡಿದರೆ ಗೊತ್ತಾಗುವುದು. ನಮ್ಮ ಮಠದಲ್ಲಿ ನಿನಗೆ ಇರುತ್ತಿದ್ದ ಸಣ್ಣ ಉದ್ಯೋಗವನ್ನು ನೀನಾಗಿಯೇ ಬಿಟ್ಟು ಹೋದಿಯಲ್ಲ. ಬಾಯಿಯಿಂದ ಬಿಸಾಡಿದ ಎಂಜಲನ್ನವನ್ನು ಪುನಃ ಬಯಸುವಿಯಾ? ನೀನು ಕಡು ಮೂರ್ಖನೇ ಸರಿ. ನಮ್ಮ ಮಠದಲ್ಲಿ ಇರಲಿಕ್ಕೆ ಯೋಗ್ಯನಲ್ಲ. ನಮ್ಮ ಕಣ್ಣ ಮುಂದೆ ನಿಲ್ಲದೆ ಬೇಗನೇ ತೊಲಗು” ಎಂದು ಶ್ರೀಪಾದಂಗಳವರು ಕಟ್ಟಾಜ್ಞೆ ಮಾಡಿದರು.

ವೇದವ್ಯಾಸ ಉಪಾಧ್ಯನ ಮುಖ ಕಪ್ಪಾಯಿತು, ಕಣ್ಣಲ್ಲಿ ನೀರು ಬಂತು. ಅವಸರದಿಂದ ಅಪಜಯವಾಯಿಕೆಂಬ ತಿಳುವಳಿಕೆಯು ಹುಟ್ಟಿತು. ಹಾಗೆಯೇ ಅವನು ಮಠದಿಂದ ಹೊರಟು, ಪುನಃ ವೆಂಕಟಪತಿ ಆಚಾರ್ಯನನ್ನು ಹುಡುಕಾಡುತ್ತಾ ಹೋದಾಗಲೂ ಆಚಾರ್ಯನು ಮನೆಯಲ್ಲಿ ಸಿಕ್ಕಲಿಲ್ಲ. ಯಾವಲ್ಲಿ ಹೋದನೆಂಬ ನಿರೀಕ್ಷೆಯಿಂದ ಕಾದು ಕೂತು ಸಾಕಾಯಿತು. ಮನೆಯಿಂದ ಹೊರಟ ಮುಹೂರ್ತವೇ ಒಳ್ಳೆದಲ್ಲವಾದ ಕಾರಣ ಅಪಜಯ ವಾಯಿತು. ಇನ್ನೊನ್ಮು ನೋಡೋಣ, ಈಗ ಮನೆಗೆ ಹೋಗುವದೇ ಒಳ್ಳೆ ತೆಂದು ಬಂದುಬಿಟ್ಟನು.

ಹೆಂಡತಿಯು ಗಂಡನ ಮುಖದ ಮೇಲೆ ವ್ಯಾಪಿಸಿದ ಅಪಜಯ ಪ್ರದರ್ಶಕವರ್ಣವನ್ನು ನೋಡಿ, ಸ್ವಲ್ಪಹೊತ್ತು ಮಾತಾಡದೆ ಸುಮ್ಮನಾದಳು. ವೇದವ್ಯಾಸ ಉಪಾಧ್ಯನು ನಿಟ್ಟುಸಿರುಬಿಡುತ್ತಾ, ಜಗಲಿಯ ಮೇಲೆ ಕೂತು, ಚಿಂತಾಕ್ರಾಂತನಾಗಿರುವುದನ್ನು ಈಕ್ಷಿಸುವ ಅವನ ವಲ್ಲಭೆಯು ಮೃದುಸ್ವರ ದಿಂದ ಗಂಡನನ್ನು ಮಾತನಾಡಿಸಿ, ನಡೆದ ವೃತ್ತಾಂತವನ್ನು ಕೇಳಿದ ಬಳಿಕ ತಾನಿಬ್ಬರೂ ಅದೃಷ್ಟಹೀನರಾದ ದೆಸೆಯಿಂದ ಪ್ರಾಪ್ತವಾದ ದುರವಸ್ಥೆಯ ಕುರಿತು ದುಃಖಪಟ್ಟು ಪ್ರಯೋಜನವಿಲ್ಲ. ಸೃಷ್ಟಿಯಲ್ಲಿ ಸರ್ವಜೀವಿಗಳನ್ನು ಆಹಾರಪಾನಾದಿಗಳಿಂದ ಪಾಲಿಸುವ ಪರಮಾತ್ಮನು ಅವನನ್ನು ನಿರಂತರ ಭಕ್ತಿಯಿಂದ ಧ್ಯಾನಿಸುವವರ್ಯಾರನ್ನೂ ಮರೆಯುವದಿಲ್ಲ. ಅವನನ್ನೇ ಎಡೆಬಿಡದೆ ಪೂಜನಾದಿ ಉಪಚಾರಗಳಿಂದ ಸಂತೋಷಸಡಿಸಿ, ಅವನನ್ನು ದಯವನ್ನು ಗಳಿಸುವ ಸುಮಾರ್ಗವನ್ನು ಸೂಚಿಸಿದಾಗ ತನ್ನ ಅರ್ಧಾಂಗಿಯ ಸೂಚನೆ ಯನ್ನು ಅನುವರ್ತಿಸಿ, ವೇದವ್ಯಾಸ ಉಪಾಧ್ಯನು ಅಂದಿನಿಂದ ನಿತ್ಯವೂ ದೇವರ ಧ್ಯಾನವನ್ನು ಮಾಡುವುದರಲ್ಲಿ ನಿರತನಾದನು.

ವೇದವ್ಯಾಸ ಉಪಾಧ್ಯನು ಪುರಾಣಹೇಳುವ ವೃತ್ತಿಯನ್ನು ಬಿಟ್ಟು ಹೋದನೆಂಬ ವಾರ್ತೆಯು ಊರಲ್ಲೆಲ್ಲ ಹಬ್ಬಿ, ಅವನ ಉದ್ಯೋಗ ತನಗಾಗ ಬೇಕು, ತನಗಾಗಬೇಕೆಂದು ಹಲವು ಯೋಗ್ಯ ಉಮೇದ್ವಾರರು ಶ್ರೀಪಾದಂಗ ಳವರ ಆಪ್ತರನ್ನು ಆಶ್ರಯಿಸಲಿಕ್ಕೆ ಪ್ರಾರಂಭಿಸಿದರು. ಕೆಲವರು ಮಧ್ಯಸ್ಥರನ್ನು ಆರಿಸದೆ ತಾವಾಗಿಯೇ ಶ್ರೀಪಾದಂಗಳ ಭೇಟಯನ್ನು ಮಾಡಿ, ತಮ್ಮ ಆಶೆ ಯನ್ನು ತಿಳಿಸಿದಾಗ, ಈಗ ಅವಸರಮಾಡಬೇಡಿ; ಚನ್ನಾಗಿ ಆಲೋಚನೆ ಮಾಡಿ ತಕ್ಕ ಪುರಾಣಿಕನನ್ನು ಆರಿಸಲಿಕ್ಕೆ ಸಮಯ ಬೇಕಾಗಿದೆ. ಆ ಉದ್ಯೋ ಗದಮೇಲೆ ಅಪೇಕ್ಷೆಯಿರುವವರ ಮನವಿಗಳನ್ನೆಲ್ಲಾ ನಿಧಾನವಾಗಿ ಮನ ಸ್ಸಿಗೆ ತಕ್ಕೊಂಡು ಉತ್ತರ ಕೊಡುವದಾಗಿಯೂ ನಿಷ್ಕರ್ಷೆಯಾಯಿತು. ತನ್ಮಧ್ಯ ಪ್ರರಾಣಪಠಣವು ಲೋಪವಾಗದ ಹಾಗೆ ಮಠದಲ್ಲಿ ಇರುವ ಪ್ರಾಜ್ಞ ರೊಳಗೆ ಮುದ್ದಣ್ಣಾಚಾರ್ಯನನ್ನು ತತ್ಕಾಲಕ್ಕೆ ಮಾತ್ರ ನೇಮಿಸೋ ಣಾಯಿತು.

ಮುದ್ದಣ್ಣಾಚಾರ್ಯನು ಸಂಸ್ಕೃತದಲ್ಲಿ ಚೆನ್ನಾಗಿ ಪರಿಶ್ರಮ ಉಳ್ಳವನೇ. ತಕ್ಕಮಟ್ಟಿಗೆ ಅಹಂಕಾರದಲ್ಲಿಯೂ ಕಡಿಮೆಯವನಲ್ಲ. ನಡುಪ್ರಾಯದವ ನಾಗಿ ಒಳ್ಳೇ ರೂಪವಂತನೂ ಹೌದು, ಆದರೆ ಸ್ವಲ್ಪ ಉಗ್ಗುಮಾತಿನವನಾಗಿ ಸರ್ವಜನರ ಹಾಸ್ಯಕ್ಕೆ ಗುರಿಯಾಗುವ ದುರದೃಷ್ಟವಂತನು. ಈ ಅವಗುಣ ಹ್ಯಾಗೂ ಇರಲಿ. ವಾಗ್ದೇವಿಯ ಕುರಿತು ತಾನು ಮನಸ್ಸಿನಲ್ಲಿ ಮಾಡಿರುವ ಸಂಕಲ್ಪವು ಈಡೇರುವ ಪರಿಯಂತರ ಬೇರೆ ಯಾವ ಕಾರ್ಯಕ್ಕೂ ಮನಸ್ಸು ಹತ್ತಲಿಕ್ಕೆ ಸಮ್ಮತಿಸದಿರುವ ಕಾರಣದಿಂದ ಯತಿಗಳು ಬೇರೆ ವಿಷಯಗಳ ತೀರ್ಮಾನವನ್ನು ಮುಂದರಿಸಿಟ್ಟರು. ವೆಂಕಟಪತಿ ಆಚಾರ್ಯನು ವಾಗ್ದೇವಿ ಯನ್ನು ಮಠಕ್ಕೆ ಕರತರುವ ದೊಡ್ಡ ಕಾರ್ಯದಲ್ಲಿ ಅಮರಿರುನ ಕಾರಣದಿಂದ ಅವನನ್ನು ಕೇಳದೆ ಯಾರೊಬ್ಬನನ್ನು ಪುರಾಣಿಕನಾಗಿ ಸ್ಥಿರವಾಗಿ ನೇಮಿಸ ಲಿಕ್ಕೆ ಮನ ಒಡಂಬಡದೆ ಶ್ರೀಪಾದಂಗಳವರು ಮಾಡಿದ ನೇಮಕವು ಪುರಾಣ ಕೇಳಲಿಕ್ಕೆ ಒಟ್ಟು ಕೂಡುವ ಜನಸ್ತೋಮಕ್ಕೆ ವಿನೋದಕಾರಕವಾಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕಾರ
Next post ಯಾರಿವನೋ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys