ಹನಿಗವನ ಉಮರನ ಒಸಗೆ – ೯ ಡಿ ವಿ ಗುಂಡಪ್ಪ March 19, 2024January 28, 2024 ದೊರೆತನವದೆಷ್ಟು ಸೊಗವೆನ್ನುತಿರುವರು ಪಲರು; ಸೊಗವು ಪರಲೋಕದೊಳಗೆನ್ನುವರು ಕೆಲರು; ಕೈಯ ರೊಕ್ಕವ ಕೊಂಡು ಕಡದ ಲೆಕ್ಕವನಳಿಸು; ಕೇಳು ದೂರದ ಮೃತ್ಯು ಭೇರಿಯಬ್ಬರವ. ***** Read More
ಹನಿಗವನ ಉಮರನ ಒಸಗೆ – ೮ ಡಿ ವಿ ಗುಂಡಪ್ಪ March 12, 2024January 28, 2024 ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. ***** Read More
ಹನಿಗವನ ಉಮರನ ಒಸಗೆ – ೭ ಡಿ ವಿ ಗುಂಡಪ್ಪ March 5, 2024January 28, 2024 ಏಳು, ಬಾರೆನ್ನೊಡನೆ ನಾಡಗಡಿಯುತ್ತಲಿಗೆ- ಹುಲುಸುಹೊಲ ಮರಳಕಾಡೆರಡುಮೊಡವೆರೆದು, ಸುಲ್ತಾನ್ ಗುಲಾಮರೆಂದರ ಮರೆಯಿಪಾ ಬಳಿಗೆ ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ನೆ. ***** Read More
ಹನಿಗವನ ಉಮರನ ಒಸಗೆ – ೬ ಡಿ ವಿ ಗುಂಡಪ್ಪ February 27, 2024January 28, 2024 ಬಾ, ತುಂಬು ಬಟ್ಟಲನು; ಮಧುಮಾಸದಗ್ನಿಯಲಿ ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು; ಆಯುವೆಂಬಾ ಪಕ್ಕಿ ಪಾರ್ವ ದೂರವು ಕಿರಿದು; ಪಾರುತಿಹುದದು ನೋಡು; ಬಾ, ಮನಸುಮಾಡು. ***** Read More
ಹನಿಗವನ ಉಮರನ ಒಸಗೆ – ೫ ಡಿ ವಿ ಗುಂಡಪ್ಪ February 20, 2024January 28, 2024 ಮಾಂದಳಿರ ಸವಿಯುಂಡು ಮೈಮರೆತ ಬುಲ್ಬುಲನು ಚೆಲು ಗುಲಾಬಿಯ ನನೆಯನರಳಿಸಲೆಂದು ನಗು ನಗುತೆ ಕುಣಿದಾಡಿ ಪಾಡುತಿಹನಾಲೈಸು: ಕಳ್ಲು ಚೆಂಗಳ್ಲು, ಸವಿಗಳ್ಲು ಕಳ್ಳೆನುತೆ. ***** Read More
ಹನಿಗವನ ಉಮರನ ಒಸಗೆ – ೪ ಡಿ ವಿ ಗುಂಡಪ್ಪ February 13, 2024December 26, 2023 ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ; ಜಾನಿಗಳ ಜೀವವೇಕಾಂತವೆಳಸುತಿದೆ; ಕೊಳದ ಕೆಲದಲಿ ತಳಿರ ಮರಲ ಸೊಂಪನರುತಿದೆ; ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ. ***** Read More
ಹನಿಗವನ ಉಮರನ ಒಸಗೆ – ೩ ಡಿ ವಿ ಗುಂಡಪ್ಪ February 6, 2024December 26, 2023 ಕನಸೊಂದ ಮುಂಜಾವದಲಿ ಕಂಡೆನೇನೆಂಬೆ ನರವಟಿಗೆಯಿಂದ ಸದ್ದೊಂದಾದುದಿಂತು : "ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ ನಿಮ್ಮೊಡಲ ಜೀವರಸವಿಮರದೀಮುನ್ನ." ***** Read More
ಹನಿಗವನ ಉಮರನ ಒಸಗೆ – ೨ ಡಿ ವಿ ಗುಂಡಪ್ಪ January 30, 2024December 26, 2023 ಮೂಡಲತ್ತಣ ಬೇಡನಿದೊ! ಸಾರಿ ಬಂದೀಗ, ನೋಡು, ಸುಲ್ತಾನನರಮನೆಯ ಗೋಪುರಕೆ ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ; ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ. ***** Read More
ಹನಿಗವನ ಉಮರನ ಒಸಗೆ – ೧ ಡಿ ವಿ ಗುಂಡಪ್ಪ January 2, 2024December 26, 2023 ಏಳೆನ್ನ ಮನದನ್ನೆ! ನೋಡು, ಪೊಳ್ತರೆ ಬಂದು ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು; ನಿದ್ದೆ ಸಾಕಿನ್ನೀಗ ಮುದ್ದಣುಗಿ ಬಾರ. ***** Read More