
ನರರ ಬಿಡೆನು, ಸುರರ ಹಾಡೆನು. ಕರಣಂಗಳ ಹರಿಯಬಿಡೆನು. ಕಾಮನ ಬಲಿಗೆ ಸಿಲ್ಕೆನು. ಮರವೆಗೊಳಗಾಗೆನು. ಪ್ರಣವ ಪಂಚಾಕ್ಷರಿಯನೆ ಜಪಿಸಿಹೆನೆಂದು ತನುವ ಮರೆದು ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್...
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮನ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂಬರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ...
ತನು ನಷ್ಟವಾದರೇನಯ್ಯ, ಮನ ನಷ್ಟವಾಗದನ್ನಕ್ಕ? ವಾಕ್ಕು ನಷ್ಟವಾದರೇನಯ್ಯ, ಬೇಕುಬೇಡೆಂಬುದನಳಿಯದನ್ನಕ್ಕ? ಅಂಗ ಸುಖ ನಷ್ಟವಾದಡೇನಯ್ಯ, ಕಂಗಳ ಪಟಲ ಹರಿಯದನ್ನಕ್ಕ? ಮನ ಮುಗ್ಧವಾದಡೇನಯ್ಯ, ಅಹಂಮೆಂಬುದ ಬಿಡದನ್ನಕ್ಕ? ಇವೆಲ್ಲರೊಳಗಿರ್ದವೆಲ್ಲ ನೆನಿಸಿಕೊಂ...
ಕೈಲಾಸ ಮರ್ತ್ಯಲೋಕವೆಂಬರು. ಕೈಲಾಸವೆಂದರೇನೋ? ಮರ್ತ್ಯವೆಂದರೇನೋ? ಅಲ್ಲಿಯು ನಡೆಯು ಒಂದೆ, ಇಲ್ಲಿಯು ನಡೆಯು ಒಂದೆ. ಅಲ್ಲಿಯ ನುಡಿಯು ಒಂದೆ, ಇಲ್ಲಿಯ ನುಡಿಯು ಒಂದೆ ಕಾಣಿರಯ್ಯ ಎಂಬರು. ಕೈಲಾಸದವರೆ ದೇವರ್ಕಳೆಂಬರು. ಮರ್ತ್ಯಲೋಕದವರೆ ಮಹಾಗಣಂಗಳೆಂಬರು...
ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯ. ನಿಮ್ಮ ನಂಬಿದ ಸದ್ಭಕ್ತಮಹೇಶ್ವರರು ಭವಬಂಧನವನೆ ಹಿಂಗಿ ಮರಣ ಬಾಧೆಯನೆ ಗೆದ್ದು, ಕರಣಿಂಗಳ ಸುಟ್ಟು, ಅರಿವ ಮನವ ನಿಲಿಸಿ, ಆನಲ ಪವನ ಗುಣವರತು, ಜನನಮರಣ ವಿರಹಿತವಾದ ಶರಣರ ಭವಭಾರಿಗಳೆತ್ತ ಬ...
ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ ಕರ್ತೃವೆಂದರಿದ ಕಾರಣದಿಂದ, ತತ್ವವೆಂಬುದನರಿದು ಮನವ ನಿಶ್ಚಿಂತವ ಮಾಡಿ, ನಿಜಸುಖದಲ್ಲಿ ನಿಂದು, ಕತ್ತಲೆಯ ಹರಿಯಿಸಿ, ತಮವ ಹಿಂಗಿಸಿ, ವ್ಯಾಕುಲವನಳಿದು, ನಿರಾಕುಳದಲ್ಲಿ ನಿಂದು, ಬೇಕುಬೇಡೆಂಬುಭಯವಳಿದು, ಲೋಕದ ...
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ ಎಂಬ ಅಣ್ಣಗಳಿರಾ ನೀವು ಕೇಳಿರೊ, ಹೇಳಿಹೆನು. ಕಾಮವಿಲ್ಲದವಂಗೆ ಕಳವಳ ಉಂಟೆ? ಕ್ರೋಧವಿಲ್ಲದವಂಗೆ ರೋಷ ಉಂಟೆ? ಲೋಭವಿಲ್ಲದವಂಗೆ ಆಸೆಯುಂಟೆ? ಮೋಹವಿಲ್ಲದವಂಗೆ ಪಾಶ ಉಂಟೆ? ಮದ...
ಆಸೆಯುಳ್ಳನ್ನಕ್ಕ ರೋಷ ಬಿಡದು. ಕಾಮವುಳ್ಳನ್ನಕ್ಕ ಕಳವಳ ಬಿಡದು. ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು. ಭಾವವುಳ್ಳನ್ನಕ್ಕ ಬಯಕೆ ಸವೆಯದು. ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿರ್ದ್ದು ಹಿಂದನರಿದೆನೆಂಬ ಸಂದೇಹಿಗಳಿರಾ ನೀವು ಕೇ...
ವ್ಯಾಪಾರವ ಬಿಟ್ಟು, ತಾಪತ್ರಯವನೆ ಹಿಂಗಿ. ಲೋಕದ ಹಂಗನೆ ಹರಿದು, ಬೇಕು ಬೇಡೆಂಬುದನೆ ನೂಕಿ, ತಾ ಸುವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ನಿಮ್ಮ ಪಾದವಿಡಿದು, ಮನ ನಿರ್ಮಳವಾಯಿತು. ನನ್ನ ತನು ಶುದ್ಧವಾಯಿತು. ಕಾಯ ಗುಣವಳಿಯಿತು. ಕರಣಗುಣ ಸುಟ್ಟು ಭಾವಳಿದು ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು, ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...














