ನರರ ಬಿಡೆನು,
ಸುರರ ಹಾಡೆನು.
ಕರಣಂಗಳ ಹರಿಯಬಿಡೆನು.
ಕಾಮನ ಬಲಿಗೆ ಸಿಲ್ಕೆನು.
ಮರವೆಗೊಳಗಾಗೆನು.
ಪ್ರಣವ ಪಂಚಾಕ್ಷರಿಯನೆ
ಜಪಿಸಿಹೆನೆಂದು ತನುವ
ಮರೆದು ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ