
ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ [ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು] ಅಕ್ಕಮಹಾದೇವಿಯ ವಚನ. ನ...
ಎನಗೆ ಮನೆ ಇಲ್ಲ ಎನಗೆ ಧನವಿಲ್ಲ ಮಾಡುವುದೇನು ನೀಡುವುದೇನು ಮನೆ ಧನ ಸಕಲಸಂಪದಭ್ಯುದಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು ಎನ್ನೊಡಲ ಹೊರೆವನಾಗಿ ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ [ತಪ್ಪಲಕ್ಕಿ-ಚೆಲ್ಲಿ ಬಿದ್ದ ಅಕ್ಕಿ] ಆಯ್ದಕ್...
ಊರ್ವಸಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ ಹಂದಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ ಹುಡು ಹುಡು ಎಂದಟ್ಟುವರಲ್ಲದೆ ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರ...
ಉಂಬವರೆಲ್ಲ ಒಂದೇ ಪರಿಯೇ ತಮ್ಮ ತಮ್ಮ ಬಾಯಿಚ್ಛೆಯಲ್ಲದೆ ಇಕ್ಕುವರಂದಕ್ಕೆ ಉಂಡಡೆ ತನಗೇ ಸಿಕ್ಕೆಂದೆ ಮಾರೇಶ್ವರಾ [ಸಿಕ್ಕೆಂದೆ-ತೊಡಕು ಎಂದೆ] ಮಾರೇಶ್ವರೊಡೆಯನ ವಚನ. ಎಲ್ಲರೂ ಒಂದೇ ಬಗೆಯಲ್ಲಿ ಉಣ್ಣುತ್ತಾರೇನು? ಇಲ್ಲ. ಅವರವರ ಬಾಯಿಯ ಇಚ್ಛೆ ಏನನ್ನು,...
ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ ಅರಿದರಿದು ಬಿಲುಗಾರನಹೆಯೋ ಎಸೆದಿಬ್ಬರು ಒಂದನೀ ಹರು ಗಡ ಇದು ಹೊಸತು ಚೋದ್ಯವೀ ಸರಳ ಪರಿ ನೋಡಾ ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು ನಾವಿಬ್ಬರೊಂದಾಗೆ ಬಿಲ್ಲಾಳಹೆ ಎಸೆಯಲೋ ಕಾಮ [ಚೋದ್ಯ-ಆಶ್ಚರ್ಯ, ಹರು – ತೆಗೆದು...
ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು ಎನ್ನ ನಿಂದಲ್ಲಿ ನಿಲಲೀಯದು ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾ...
ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ ಮನದಿಚ್ಛೆಯನರಿವ ಸಖಿಯರಿಲ್ಲ ಇನ್ನೇವೆನವ್ವಾ ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ ದಿನ ವೃಥಾ ಹೋಯಿತ್ತಾಗಿ ಯೌವನ ಬೀಸರವಾಗದ ಮುನ್ನ ಪಿನಾಕಿಯ ನೆರಹ...
ಇದಿರೆನ್ನ ಹಳಿವವರು ಮತಿಯ ಬೆಳಗುವರು ಮನದ ಕಾಳಿಕೆಯ ಕಳೆವವರೆನ್ನ ನಂಟರು ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ ಹೇಯೋಪಾದಿಯ ತೋರುವವರು ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು ಸಕಳೇಶ್ವರದೇವರ ತೋರುವರೊಳರು ಇಲ್ಲಿಯೆ [ಕಾಳಿಕೆ-ಕಲ್ಮಶ, ತೋರುವರೊಳರು...
ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ [ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ...
ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂ...















