
ತುಂಬಿದ ಮನೆಯ ಹೊಕ್ಕರೆ ದೊಂದಳವಾಯಿತ್ತು. ಈ ಸಂದಳಿಗಾರದೆ, ತುಂಬಿದ ಮನೆಯ ಕಿಚ್ಚನಿಕ್ಕಿದರೆ, ನಿಶ್ಚಿಂತವಾಯಿತ್ತು. ಬಟ್ಟಬರಿಯ ಮನೆಯೊಳಗೆ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಬಟ್ಟಬಯಲಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿದು, ಮರ ಒಣಗಿತ್ತು. ಉಲುಹು ನಿಂದಿತ್ತು. ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿ...
ನೆನೆದಿಹೆನೆಂದರೆ, ಏನ ನೆನೆವೆನಯ್ಯ! ಮನ ಮಂಕಾಯಿತ್ತು. ತನು ಬಯಲಾಯಿತ್ತು. ಕಾಯ ಕರಗಿತ್ತು. ದೇಹ ಹಮ್ಮಳಿಯಿತ್ತು. ತಾನು ತಾನಾಗಿ, ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಮರನನೇರಿದೆ. ಬೇರ ಸವರಿದೆ. ಕೊನೆಯ ತರಿದೆ. ಬುಡವ ಕೆಡಹಿದೆ. ನಿರಾಲಂಬವಾಗಿ ನಿಮ್ಮ ಬೆಳಗನೆ ನೋಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗವ ಬಿಟ್ಟು, ನಡಿದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟ ಕೂಟ ಜಗದಾಟ ಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯ ಅಪ್ಪಣಪ್ರಿಯ ...
ಸಾಯದ ಮುಂದೆ ಸತ್ತ ಹಾಗೆ ಇರುವರು. ಆರಿಗೆ ವಶವಲ್ಲ, ನಮ್ಮ ಶರಣರಿಗಲ್ಲದೆ. ಅದು ಹೇಗೆಂದರೆ, ಹಗಲಿರುಳೆಂಬ ಹಂಬಲ ಹರಿದರು. ಜಗದಾಟವ ಮರೆದರು. ಆಡದ ಲೀಲೆಯನೆ ಆಡಿದರು. ಆರು ಕಾಣದ ಘನವನೆ ಕಂಡರು. ಮಹಾ ಬೆಳಗಿನಲಿ ಲೋಲಾಡಿ ಸುಖಿಯಾದೆನೈಯ್ಯ ನಮ್ಮ ಅಪ್ಪಣ...
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದಂಗೆ. ಚಿತ್ತಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತುತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನಾದ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯ ಅಪ...
ಸಾಕೈಯ್ಯ ಲೋಕದ ಹಂಗು ಹರಿಯಿತ್ತು. ತನುವಿನಾಸೆ ಬಿಟ್ಟಿತ್ತು. ಮನದ ಸಂಚಲ ನಿಂದಿತ್ತು. ನುಡಿಯ ಗಡಣ ಹಿಂಗಿತ್ತು. ಘನವ ಬೆರೆಯಿತ್ತು. ಬೆಳಗ ಕೂಡಿತ್ತು. ಬಯಲೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಕರಣವ ಸುಟ್ಟಿ. ಕಂದಲ ನೋಡಿದೆ. ಮರನ ಮುರಿದೆ. ಬಣ್ಣವ ಹರಿದೆ. ಬಿನ್ನಗಣ್ಣು ಕೆಟ್ಟಿತ್ತು. ಜ್ಞಾನಗಣ್ಣಿಲಿ ನಿಮ್ಮನೆ ನೋಡಿ ಕೂಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...














