
ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು ತಿಳಿದೊಡಂ ಕಳಿತಾಗದದು ಸಾವಯವ ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ ಕಳು ಮನವ ದಮನಿಸುತ ಮೈ ಬಳಲೆ ಬೆವರಿದರದುವೆ ಸಾವಯವ – ವಿಜ್ಞಾನೇಶ್ವರಾ *****...
ಸಾವಯವದೆಂದರದು ಬಲು ಸರಳ ಜೀವನ ತತ್ತ್ವವಿದನಾ ಪದವೆ ಎದೆ ತುಂಬಿ ಹೇಳಿದರು ಅವಯವಗಳುಪಯೋಗವನಧಿಕ ಗೊಳಿಸಿದರ ದುವೆ ಸಾವಯವವೆಂದೇನೆ ಕೇಳಿದರು ಬಲು ಧನದ ಕುರ್‍ಚಿ ತಾ ಮೆರೆಯುತಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...
ಬೇಕಿಹುದಾದೊಡಂ ಒಂದಷ್ಟು ಹಣ, ರಣ ಶೋಕಿ ವಾಹನ ದಾರಿಯನು ಮಾಡಲಿಕೆ ಬೇಕಿಲ್ಲವದು ಅನ್ನದರಿವಿಗೆ ಬಾಳ ದಾರಿಗೆ ಭುಕ್ತಿಯನ್ನವದು ಭುವಿಯಲ್ಲಿ ತಾನೆ ಬೆಳೆಯುವುದು ಯುಕ್ತಿಯೊಳದುವೆ ಸೆಳೆಯುವುದು ಹಸಿದವನ – ವಿಜ್ಞಾನೇಶ್ವರಾ *****...
ವನ, ಮನ, ಮನೆ, ಮಡದಿಯೊಂದಾದಂದು ಘನ ಕೃಷಿಗಿರದಾವ ಮನ್ನಣೆಯ ಕುಂದು ಧನದ ಮಿತಿಯನರಿತು ಅನ್ನದ ಗತಿಯ ನನುಸರಿಸಿ, ತನು ಮನದ ಬಯಕೆ ಯನು ಅವರಿಗವರೇ ಭರಿಸಿದರದು ಸಾವಯವ – ವಿಜ್ಞಾನೇಶ್ವರಾ *****...
ಅಂದಂದಿನನ್ನವಲ್ಲಲ್ಲೇ ಸಿಗುವಂತೆ ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ ಆತುರವು ಅವಸರವು ಅಳಿವಂತೆ ಅನ್ಯದೇಶದವಲಂಬನೆಯು ಕಡಿವಂತೆ ಆನಂದವಿರಲದುವೆ ಸಾವಯವ – ವಿಜ್ಞಾನೇಶ್ವರಾ *****...
ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ – ವಿಜ್ಞಾನೇಶ್ವ...
ಹಸುರ ಕೆಲಸಗಳೆಲ್ಲ ಜೀವಕು, ಬದುಕಿನುದ್ದಕು ಹಸಿದು ತಿನ್ನುತ, ಬೀಜ ಚೆಲ್ಲುತ, ಹೊಸತು ಬೆ ಳೆಸುತ, ತಂಪು ಕಾಯುವ ಲೇಸು ಜೀವನವೆಲ್ಲ ಜೀವಕು ಏಸು ಜೀವರ ಶ್ರಮದ ಹಸುರನು ಘಾಸಿಗೊಳಿಸದ ಕಸದ ಕೃಷಿಯನು, ಹಸದಿ ಸಾವಯವವೆನಲಕ್ಕು – ವಿಜ್ಞಾನೇಶ್ವರಾ *...
ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ – ವಿಜ್ಞಾನೇಶ್ವರಾ *****...
ತಿನ್ನಲಿಕೆ ಬಾಯಿ ಕೊಟ್ಟಂದು ದೇವ ತಾ ಸು ಮ್ಮನಿರಲಿಲ್ಲ ಕೊಟ್ಟಿಹನು ಕಣ್ಣು, ಕಿವಿ, ಮೂಗು ಅನ್ನದಿರವನು ಅರಸಿಯುಣ್ಣಲಿಕೆಲ್ಲವಯವವು ಚೆನ್ನತನದೊಳೆಮ್ಮ ಕೈಕಾಲು ಬಳಲಿದೊಡಾ ಅನ್ನವನು ಸಾನುರಾಗದಿ ಸಾವಯವವೆನಲಕ್ಕು – ವಿಜ್ಞಾನೇಶ್ವರಾ *****...
ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ – ವಿಜ್ಞಾನೇಶ್ವರಾ *****...














