
ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ ವಶವಾಗಿ ರೋಷಕ್ಕೆ ಈಡಾಗಿ ಎ...
ಏನದು ಪ್ರೇಮ… ಅಪೂರ್ವವಾದ ವಸ್ತುವೆ ಅಪರಿಮಿತವಾದ ಚೈತನ್ಯವೆ ಅಸದೃಶ ಅನುಭೂತಿಯೆ? ಏನದು ಪ್ರೇಮ… ಜಾಜ್ವಲ್ಯಮಾನ ಬೆಳಕೆ ಪರಮ ಪರಿಮಳದ ಹೂವೆ? ಪ್ರೇಮಕ್ಕೆ ಸಪ್ತವರ್ಣವಂತೆ ಮಕರಂದಕಿಂತಲೂ ಸಿಹಿಯಂತೆ ನಿಜವೇನು? ಪ್ರೇಮಕ್ಕೆ ನಕ್ಷತ್ರ ಖಚಿ...
ಬುಡವಿಲ್ಲದಿರೆ ಮರ ಫಲ ನೀಡುವುದೇನು? ತಳವಿಲ್ಲದಿರೆ ಶಿರ ಬಲ ಪಡೆವುದೇನು ? ಕೆಸರ ಬಸಿರಲ್ಲಿ ಕಮಲ ಉಸಿರಾಡಿದರೆ ಕುಂದೇನು? ಕಟ್ಟಕಡೆಯವ ದೀಪವಾಗಿ ದಾರಿ ತೋರಿದೊಡೆ ತಪ್ಪೇನು? ಅಡಿ ಮುಡಿಯೆಂಬ ಭೇದ ಲಿಂಗಕ್ಕೆ ಸಮ್ಮತವೇನು? ಕಿರಿ-ಹಿರಿದೆನ್ನದೆ ಎಲ್ಲ&...
ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ ಯಾಕೆ, ಯಾಕೆ ಕಾಣಬೇಕು? ಚಿತೆಯಿಂದ ಎದ್ದು ...
ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು- ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿ ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು! ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ ಸುರಿದ ಮಳೆಯ...
ಒಬ್ಬ ಮನುಷ್ಯ ಹಸಿವೆಯಂದ ಎಷ್ಟು ನರಳಬಹುದೋ ಅಷ್ಟು ದಾರುಣವಾಗಿ ಅವನು ನರಳಿದ್ದ. ಒಂದು ತುಂಡು ರೊಟ್ಟಿಗಾಗಿ ಎಷ್ಟು ಹೋರಾಡಬಹುದೋ ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ. ಅವನ ಒಡಲಾಗ್ನಿ ಯಾರನ್ನೂ ಸುಡಲಿಲ್ಲ. ದುಃಖ ದುಮ್ಮಾನಗಳಿಂದ ಒಬ್ಬ ಮನುಷ್ಯ ಎಷ...














