ದೀಕ್ಷಾ ಗೀತೆ

ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ...

ನವೆಂಬರ್ ಕನ್ನಡ

ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ... ನಿರಭಿಮಾನ ಬಗ್ಗಡವೋ ಬಗ್ಗಡ! ಅಲ್ಲಿ ನೋಡು ಕನ್ನಡ...

ನನ್ನ ಪ್ರಾಣ ಕನ್ನಡ

ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ...

ವಿಪರ್‍ಯಾಸ

‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗದ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕಾ.ವೆಂ.ಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿ‌ಋಷಿ ಕಲಿಗಳ ವಿಶ್ವಕೆ ತಂದಿಹ ನಮ್ಮ ನುಡಿ...

ಕನ್ನಡಿಗರು ನಾವು

ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು!...

ಕೋರಿಕೆ

ಮರೆಯದಿರಣ್ಣ ಕನ್ನಡವ; ಜನ್ಮಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ...

ಧಾರವಾಡದ ತಾಯೆ

ಧಾರವಾಡ ತಾಯೆ ನಿನ್ನದೆಂತ ಮಾಯೆ! ಚಿತ್ತ ತಣಿಸುವ ಸತ್ಯ ಸಾರುವ ತತ್ತ್ವಲೇಪದ ಕಾವ್ಯ ಕರ್ಮಕೆ ಮಡಿಲು ಆದ ತಾಯೆ-ಆಹ ನಿನ್ನದೆಂತ ಮಾಯೆ! ಲೋಕ ಮೆಚ್ಚುವ ಸತ್ವ ಮಿಂಚುವ ಆದಿ ಪಂಪ ಆ ಕುವರವ್ಯಾಸರ ನಿನ್ನ...

ಗಾಲಿಗಳು

ಎಷ್ಟೇ ಭಾಷೆಗಳಿರಲೀ ನೆಲದಲಿ ಕನ್ನಡ ರಥಕವು ಗಾಲಿಗಳು ಕರ್ನಾಟಕದ ಪ್ರಗತಿಯ ಪಥದಲಿ ಗೌರವಾನ್ವಿತ ಪಾತ್ರಗಳು ಕಾವೇರೀ ಜಲ ಕುಡಿಯುತ ತಣಿಯಲಿ ನಮ್ಮೀ ಭಾಷಾ ಸೋದರರು ಆಗಿಹ ಅನ್ಯಾಯವ ಅರಿಯುತಲಿ ದುಡಿಯಲಿ ನ್ಯಾಯಕೆ ಬಾಂಧವರು ಕನ್ನಡದನ್ನವ...

ಕಪ್ಪು-ಇತಿಹಾಸ

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ ಕಪ್ಪು-ಇತಿಹಾಸ ಸಂಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ ಇದರಲ್ಲಿ...

ಕನ್ನಡ ನಾಡಿನ ಹಿರಿಮೆ

ಕನ್ನಡ ನಾಡು ಚಿನ್ನದ ಬೀಡು ಪಾವನವೀ ನಾಡು | ಎಲ್ಲು ಚೆಲುವಿನ ಸಿರಿ ನೋಡು ಕನ್ನಡ ನಾಡು ಕಿನ್ನರ ಬೀಡು ರೂಪಸಿಯರ ನಾಡು | ಸಿಂಹ ವಾಣಿಗಳಾ ನೋಡು ಕನ್ನಡ ನಾಡು ಹಸಿರಿನ ಬೀಡು...