Home / ಸಣ್ಣ ಕಥೆ

Browsing Tag: ಸಣ್ಣ ಕಥೆ

ಉಂಡು ಆಡುತ್ತಿದ್ದ ಮಗ, ಗೌರಮ್ಮನ ಮುದ್ದು ಮಗ, ಶಾಂತಪ್ಪನ ಕಿರೇಮಗ ಏಕಾ‌ಏಕಿ ಪರಾರಿ, ಎಲ್ಲಿ ಹೋದನ್ರೀ ನಮ್ಮ ಹುಡುಗ? ಎಲ್ಲಿ ಹೋದನ್ರೀ ನಮ್ಮ ಹುಡುಗ? ಇದೇ ಪ್ರಶ್ನೆ; ಇದೇ ಸಂಕಟ; ಇದೇ ಗೋಳು. ಶಾಂತವೀರಪ್ಪನಿಗೆ ಗಂಟಿತ್ತು. ಎತ್ತಿಕೊಂಡು ಹೋಗುವ ವಯಸ...

ಇಸರಪ್ಪನನ್ನು ಅಯ್ಯಾ ಅವರು ಬರಹೇಳಿದ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹೀಗೆ ಆ ಪುಟ್ಟ ಊರಲ್ಲಿ ಬಹಳ ಬೇಗ ಎಲ್ಲರಿಗೂ ತಿಳಿದು ಹೋಯಿತು. ನಾಲ್ಕು ದಿನಾ ರಜಾ ಹಾಕಿ ಊರಿಗೆ ಹೋಗಿ ಆಗ ತಾನೆ ನೇರವಾಗಿ ಕಾಲೇಜಿಗೆ ಬಂದ ಮಲ್ಲಪ್...

ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಚೀಟಿ ಪಡೆದು ಮೂರು ಪೀಠಗಳ ಆಸನದಲ್ಲ...

ಇಂದು ಕಛೇರಿಗೆ ಹಾಜರಾಗುವ ಮೊದಲ ದಿನ, ಈವತ್ತಿನಿಂದ ಸರ್ಕಾರಿ ನೌಕರನಾಗುವ ಸೌಭಾಗ್ಯ. ಇನ್ನು ೫೮ ವರ್ಷಗಳವರೆಗೆ ನಿಶ್ಚಿಂತೆ. ಅಂದರೆ ಚಿಂತೆಗಳೇ ಇಲ್ಲವೆಂದಲ್ಲ. ವಯಸ್ಸಾದ ಅಮ್ಮ – ಅಪ್ಪ, ಬೆಳೆದು ನಿಂತ ತಂಗಿಯರು ಬೇರೆ. ಅಮ್ಮ ನಿತ್ಯರೋಗಿ, ಆ...

ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ ಗೆಳೆಯ ಬಸವರಾಜ್ ಬಿರಾದರ್‌ನ ಲಗ್ನಕ್ಕಾಗಿ ಕೆಂಭಾವಿಗೆ ಬಂದಿದ್ದ...

ಬೆಂಗಳೂರಿನ ಪಶ್ಚಿಮಕ್ಕೆ – ಒಂದೆಡೆ ಬಯಲು, ಅಲ್ಲಲ್ಲಿ ಒಂದೊಂದು ಮರ. ಉಬ್ಬಿದ ಬಯಲುಗಳು ಅಲ್ಲಿ ಇಲ್ಲಿ ಇಳಿದು ಓರೆಯಾಗಿ ಕೂಡುವೆಡೆಗಳಲ್ಲಿ ಹಸುರು ಮೆರೆದಿದೆ. ತೆಂಗಿನ ಮರಗಳು, ಇತರಮರಗಳು, ಅವುಗಳ ನಡುವೆ ಸಣ್ಣ ಪುಟ್ಟ ಹಳ್ಳಿಗಳು, ಕೆಂಪು ಹೆ...

ಆ ಕೇಸಿನ ತೀರ್ಪನ್ನು ಜಜ್ಜು ಸಾಹೇಬರು ನಾಳೆ ನೀಡಬೇಕು. ಸಾಹೇಬರಿಗೆ ಎಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿರಲಿಲ್ಲ. ಮನೆಯಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿದ್ದರೆ ಇವರು ಮಹಡಿ ಮೇಲಿನ ತಮ್ಮ ಅಧ್ಯಯನ ಕೊಠಡಿಯಲ್ಲಿ ಕತ್ತಲಲ್ಲಿ ಬುದ್ಧನಂತೆ ಕೂತಿದ...

ಈ ಊರಿಗೆ ನೀವು ಅಪ್ಪಿತಪ್ಪಿ ಬಂದೀರಿ. ಯಾವುದೋ ಗುಂಗನಾಗ ಬರಬರಾನ ದಾರಿಗಡ್ಡ ಚಾಚಿದ ಜಾಲಿ ಕಂಟಿ ನಿಮ್ಮ ಅಂಗಿ ಪರಚಿ ಬರಮಾಡಿಕೊಂಡಿತು. ಗಕ್ಕನ ನಿಂತು ಜಗ್ಗಿದ್ದನ್ನ ಬಿಡಿಸೋ ಪಜೀತಿ ನೋಡಿದ ಮಂದಿ ಹುಳ್ಳುಳ್ಳಗ ನಗಾಕ ಹತ್ತಿದ್ದರು. ಅದೂ ಅಲ್ದಾ ನೀವು...

ಆಸ್ಪತ್ರೆ ಸವಾಗಾರ್‍ದಾಗೆ ನಿಂಗಿ ಮಲಗವ್ಳೆ. ಅವಳ್ನ ಕುಯ್ದು ಅದೇನೋ ಪರೀಕ್ಷೆ ಮಾಡಿ ಮತ್ತೆ ಹೊಲಿಗೆ ಹಾಕಿ ಕೊಡ್ತಾರಂತಪ್ಪ. ಅಲ್ಲಿಗಂಟ ಮಣ್ಣು ಮಾಡಂಗಿಲ್ಲ. ಇದನ್ನೆಲ್ಲಾ ಯೋಳಾಕೆ ಹೊಂಟಿರೋದು ನಿನ್ಗೆನಪ್ಪ ನಿನ್ಗೆ. ಮಟಮಟ ಮಧ್ಯಾನದಾಗೆ ಪೊಲೀಸಿನೋರು...

ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ ಮಾತನಾಡಲು ಬರುತ್ತಿತ್ತು....

12345...7

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...