ಮಾನವೀಯತೆ

ಮಾನವೀಯತೆ, ಏನಾಗಿದೆ ನಿನಗೆ? ಹೀಗೇಕೆ ನಡುಬೀದಿಯಲಿ ಮೌನವಾಗಿ ಮಲಗಿರುವೆ, ಸತ್ಯಕ್ಕೆ ಜಯವೆಂಬ ನಿನ್ನ ವಾಕ್ಯ ಏನಾಯಿತಿಂದು? ನಿನ್ನ ಸಂಗಾತಿಗಳೆಲ್ಲ ಇಂದು ಯಾಕೆ ಪಕ್ಷಾಂತರ ಮಾಡಿದರು? ಈ ಕೊರಗಿನಲ್ಲಿಯೇ ನೀನು ಸ್ವರಗಿ ಹೋಗುತ್ತಲಿರುವೆಯಾ? ನೆಲದಲಿ ಹುಗಿದು...

ಆಕ್ರೋಶ

ಆ ಒಡೆಯನ ಹೊಲದಾಗ ಮೂಳೆ ಮುರಿಯೋತನಕ, ಪುಡಿಪುಡಿಯಾಗೋ ತನಕ ನಾ ದುಡದೀನಿ. ಹರಕ ಮುರಕ ಝೋಪಡ್ಯಾಗ ನಾ ದಿನಾ ಕಳದೀನಿ, ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ, ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ, ಹೊಟ್ಟಿ...

ಗಾಂಧಿಗೊಂದು ಪ್ರಶ್ನೆ

ಗಾಂಧಿ. ಸತ್ತು ಹೋಗಿರುವ ಗಾಂಧಿ ನೀನೂ ಒಬ್ಬ ಮನುಷ್ಯ ಭೇದ ಭಾವವ ಅಳಿಸಲು ಹರಿಜನೋದ್ಧಾರದ ಮಾತುಗಳನ್ನುದುರಿಸಿದ ಗಾಂಧಿ; ತುಂಡು ಲಂಗೋಟಿಯ ಉಟ್ಟು ಆಸರೆಗಾಗಿ ಕೈಯಲ್ಲಿ ಕೋಲು ಹಿಡಿದ ಗಾಂಧಿ. ಆಸಮತೆಯ ಅಗ್ನಿಗೆ ಆಹುತಿಯರಾಗಿರುವೆವು ನಾವು...

ಮಿಂಚು

ನನ್ನೊಡಲ ತುಂಬ ನೋವಿನ ಧ್ವನಿಗಳು, ಚೀತ್ಕಾರಗಳು. ಉಸಿರುಗಟ್ಟಿ ಸಾಯುತ್ತಿರುವ ಹತಾಶ ಕನಸುಗಳು ಹೆಡೆಬಿಚ್ಚಿ ಹೊಗೆಯಾಡುವ ಬುಸುಗುಡುವ ಬಯಕೆಗಳು, ಬಾಡಿ ಮುದುಡಿ - ಕಮರಿ ಕರಕಾರಿ ಭಸ್ಮವಾದ ಚಿಗುರುಗಳು - ನಿನ್ನ ಕಾಲಡಿ ಸಿಕ್ಕು -...

ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ. ಹಗಲು ಸರಿದು ಕರಾಳ ರಾತ್ರಿಯಲ್ಲಿ ನಕ್ಷತ್ರಗಳ ಕಣ್ಣುಮುಚ್ಚಾಲೆ. ಆಕಾಶ ನೋಡುತ್ತ ಅಳುತ್ತಿರುವ ನಾಯಿಗಳು ದಟ್ಟ ದರಿದ್ರರ ಕೊಂಪೆ ಗುಡಿಸಲುಗಳು ಸಿಡಿದೇ ಕರೇ ಕ್ಷೀಣ ಧ್ವನಿಯಲ್ಲಿ ಗುಣುಗುಟ್ಟುತ್ತಿವೆ, ಸಾಲದಿರುವ ಸಂಬಳ ಏರುತ್ತಿರುವ ದರಗಳ...

ಕೆಂಪು ದೀಪದ ಕೆಳಗೆ

ಹನ್ನೆರಡು ವರ್ಷದವಳಿದ್ದಾಗ, ನನ್ನ ಮದುವೆ ಆಯಿತು. ದಿನಾಲೂ ಆರು ಗಂಟೆಗೆ ಎದ್ದು ಕೂಳು ಕುದಿಸಿ, ಸೂರ್ಯ ಕಣ್ಣು ತೆರೆಯುವ ಮೊದಲೇ ಭತ್ತ ಕೊಯ್ಯಲು ಹೋಗುತ್ತಿದ್ದೆ. ಸಂಜೆ ತಂದ ಕೂಲಿಯೆಲ್ಲ ಗಂಡ ಕಿತ್ತುಕೊಳ್ಳುತ್ತಿದ್ದ. ಕುಡಿದು ಬಂದು...

ಆಶಾಬೀ

ಜೀವನದಲ್ಲಿ ಕೇವಲ ಹಸಿವು, ನೋವುಂಡು ಬೆಳೆದವಳು ಆಶಾಬೀ. ಹಸಿವಿನ ಕ್ರೂರ ಕೂಗನ್ನು ಕೇಳಲಾರದೇ ಒಂದು ದಿನ ತನ್ನೆರಡು ಹಸಳೆಗಳೊಡನೆ ನೀರಿನ ಪಾಲಾದಳು. ಆದರೆ, ಸಾವು ವಿಚಿತ್ರ. ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ. ತನ್ನ ಕರುಳ ಕುಡಿಗಳ...

ನೆಲ್ಸನ್ ಮಂಡೇಲ

ನರಬಕ್ಷಕ ರಾಕ್ಷಸರು ಬಿಳಿ ಮುಖದ ಗುಳ್ಳೆನರಿಗಳು ಸಿಡಿಲಮರಿಗೆ ಆಹ್ವಾನಿಸಿದವು. ಸೆರೆಮನೆಯ ಗೋಡೆಗಳು ಸಿಡಿವಂತೆ ಮಾಡಿದರು. ಬಂದಿಖಾನೆಯ ಬಂಧನದ ಕತ್ತೆಲೆಯಲಿ ನೀ ಕಳೆದ ಇಪ್ಪತ್ತಾರು ವರ್ಷಗಳು. ಸೆರೆಮನೆಯ ಪ್ರತಿಯೊಂದು ಕಲ್ಲುಗಳಿಗೂ ನಿನ್ನ ನಿಟ್ಟುಸಿರಿನ ಬಿಸಿಯು ತಟ್ಟಿ...

ನನಗೆ ಮಾತನಾಡಲು ಬಿಡಿ

ನನ್ನ ಬಂಧುಗಳೇ, ನಾನು ತಲೆಯೆತ್ತಿ ನಡೆದರೆ, ನಿಮಗೆ ಅಹಂಕಾರಿಯಂತೆ ಕಾಣುವೆನು ತಲೆ ಬಗ್ಗಿಸಿ ನಡೆದರೆ, ಅಬಲೆ, ಅಪರಾಧಿಯಂತೆ ಕಾಣುವೆನು. ಮೌನವಾಗಿದ್ದರೆ ಮೂಕಿ, ಎನ್ನುವಿರಿ. ಮಾತನಾಡಿದರೆ ವಾಚಾಳಿ ಎನ್ನುವಿರಿ. ಹೇಳಿ ನಾನು ಹೇಗೆ ನಡೆದುಕೊಳ್ಳಲಿ ?...

ಬೆಳ್ಳಿ ಚುಕ್ಕಿ

ಸಭಾದಾಗ ಕೂತುಕೊಂಡು ಇವರು ನಮ್ಮ ಮೇಲೆ ಕಾನೂನು ಮಾಡ್ತಾರ, ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು ಓಟ ಕೇಳಲಿಕ್ಕೆ ಬರತಾರ. ನಮ್ಮ ಉದ್ಧಾರವೇ ತಮ್ಮ ಧೈಯ ಅಂತ ಹೇಳಿ ಘೋಷಣೆ ಕೊಡ್ತಾರ ಆ ನನ್ಮಕ್ಕಳ ಚರ್ಮ...
cheap jordans|wholesale air max|wholesale jordans|wholesale jewelry|wholesale jerseys