
ಮೋಡಗಳೊರಗಿವೆ ನಿರ್ವಾಸಿತವಾದಾಕಾಶದ ಅವಕಾಶದೊಳು ಆಲಸದಲಿ ದಣಿವಾದವೊಲು ಗತಿಸಿದ ಕಡಲಿನ ನೆರೆ ತೆರೆ ಅವಲೋಕಿಸಿ ಸುತ್ತಾಡುತ್ತಿವೆ ಖಿನ್ನ ಉರುಳುರುಳುತ್ತಿವೆ ಅವಸನ್ನ ಬರಿ ಚಿಂತೆಯೊಳೋ ಕರಿ ಕರೆ ಚಾಚಿದೆ ಶೋಕಾಕುಲತೆಯೆ ಮುಸುಕಿದೊಲು ವಾಯವ್ಯದ ಉಸಿರಾಟ...
ಬ್ರಹ್ಮಾಂಡಕೆ ಕಾನ್ ಕೊಡುತಿದ್ದೆ, ಒಬ್ಬೊಂಟಿಗ ಶಮ-ಶಿಖರದಲೂ ಮುತ್ತಿತ್ತೋ ಗುಜುಗುಜು ನಾದಾ ಝಗಝಗಿಸುವ ನಿದ್ದೆಯೊಳದ್ದಿ, ಮಾನಸವನು ಸುತ್ತಿದೆ ಎತ್ತೂ ಮರ್ಮರಿಸುವ ನಿರ್ಭರ ಮೌನಾ. ಚಿರಶುಭ್ರ ಜ್ವಾಲಾ ಗೂಢಾ, ಮನನಕ್ಕೆ ಪ್ರಾಪ್ತ ಪದಾರ್ಥಾ ಜಿನುಗುಡುತ...
ಮಿಂಚಿ ಚಕಮಕ, ಬಾಗಿ ತೂಗುತ ಮಣಿದು ಬಳಕುತ ತಡೆದಿದೆ ಕಾಮಬೆಟ್ಟದ ಪಚ್ಚೆ ಹೃದಯದಿ ಏನು ನುಸುಳುತ ನಡೆದಿದೆ ನಯನ ನಿಗಿನಿಗಿ ಎದೆಯ ದೃಢಪಡೆ ಏನೊ ನಾತವ ಹಿಡಿದಿದೆ ಕಳ್ಳಹೆಜ್ಜೆಯ ಮೆಲ್ಲನಡಿಗೆಯ ಘಾತಸಂಭ್ರಮ ಪಡೆದಿದೆ ಎಲೆಯ ಸಂದಿಗಳಿಂದ ಜಳಕನೆ ಹರಿದ ಮರ್...
ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ ಯಾರವನೋ ಚಿರತರುಣಾ ಬಂದಾ ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ – ಆಕೃತಿಬಂಧಾ ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ, ಸವಿನುಡಿ ಛಂದಾ- `ಆ ಹೃದಯ ಜ್ವ...














