ಮುಂಜಾನೆ ಸೂರ್ಯನ ಕಿರಣಗಳು ಸೋಕಿ ತೆರೆದ ಕಣ್ಣುಗಳ ತುಂಬ ಕಾಲಾತೀತ ಕವಿತೆಗಳು. ಗುಂಪಿನಲಿ ತೇಲಿಹೋದ ಅವರಿವರ ಹೆಜ್ಜೆಗಳು ಕಾಲುದಾರಿ ನಿರ್ಮಿಸಿ ಸುಖದ ಸಂತೋಷದ ಗಳಿಗೆಗಳು. ನಂಬಿಕೆಗಳು ಊರತುಂಬ ಹರಡಿದ ಗಾಳಿ. ಯಾರದೋ ಪಾಪ ಪ್ರಾಯಶ್ಚಿತ ತೊಳೆದು, ಸರಿ...

ನಿನಗೆ ನೀನು ನಡೆಯೇ | ಮನವೆ ನಿನ್ನ ಬಾಳು ಜೀನು || ನಿನ್ನ ಕರುಣೆ ಕಮಲದಂತೆ | ನಡುವೆ ನೀನು ಅಮರನಂತೆ ||ನಿನ್ನ || ಹಸಿರ ಹುಲ್ಲು ಹಾಸಿಗೆಯಂತೆ | ಮಲ್ಲೆ ಹೂವು ಘಮ ಘಮವಂತೆ || ತಾಯಿ ಒಡಲ ಬಳ್ಳಿ ನೀನು | ಬೆಳೆಯೆ ನೀನು ಬಾಳಿನೇ ಬೆಳಕು || ನಿನ್ನ ...

ಮನುಜ ನೀನೊಮ್ಮೆ ಹಿಂತಿರುಗಿ ನೋಡು ಎಲ್ಲಿಯದು ಆ ನಿನ್ನ ಪೂರ್‍ವ ಧಾಮ ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ ಜನರನ್ನು ಮೆಚ್ಚಿಸಿ ನೀನೇನು ಮಾಡುವುದು ಸೌಂದರ್‍ಯತೆ ಕಂಡು ನೀನೇನು ಬಯಸುವುದು ನಿನ್ನಲ್ಲಿದ...

ಕುಮುದಪುರವನ್ನು ಶಾಬಯನೂ ಭೀಮಾಜಿಯೂ ಬಿಟ್ಟು ಹೋದಂ ದಿನಿಂದ ಆ ಊರಿನ ಜನರು ನಿಶ್ಚಿಂತರಾದರು. ಅವರಿಬ್ಬರ ಬದಲಿಗೆ ಬಂದ ಉದ್ಯೋಗಸ್ಥರು ಅನ್ಯಾಯ ಪ್ರವರ್ತನೆಯಲ್ಲಿ ಎಂದೂ ಸೇರುವವರಲ್ಲ ವೆಂದು ಪ್ರತಿ ಒಬ್ಬನಿಗೂ ಖಂಡಿತವಾಗಿ ಗೊತ್ತಾಯಿತು. ಮರ್ಯಾದೆವಂತ ...

ನನ್ನ ಉಸಿರು ಹರಿದಾಡುತಿಹುದು ಇಗೊ ಸೂಕ್ಷ್ಮ ಛಂದದಲ್ಲಿ; ನನ್ನ ಅವಯವದಿ ಬೆಳೆಯುತಿಹುದು ಭಗವಂತ ಶಕ್ತಿ-ವಲ್ಲಿ: ಆನಂತ್ಯವನ್ನು ನಾ ಕುಡಿದೆ ಎತ್ತಿಯಾ ಅಸುರ-ಸುರಾ-ಪಾತ್ರೆ ಕಾಲಲೀಲೆಯದು ನನ್ನ ನಾಟಕವು ನನ್ನ ಸ್ವಪ್ನಯಾತ್ರೆ ಈಗ ನನ್ನ ಜೀವಾಣುಗಣವು ಪ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....