ಆ ಅಸೀಮದಾ ಸಂಚುಹೊಂಚಿನಲಿ ಒಂದು ಕುದ್ರ ಘಟಕ ವೈಶ್ವಾನರನ ಆವರ್ತನೃತ್ಯರಂಗದಲಿ ಸಣ್ಣ ಚುಟುಕ. ಬಟಾಬಯಲು ಇದು, ಹೋ ಅಭಂಡ ತಾನರ್ಥಹೀನ ಹಳವು ಅಕಸ್ಮಾತ್ತೊ ಎನುವಂತೆ ಬಂತು ಭೂಮಿಯಲಿ ನರನ ಫಲವು. ತನ್ನ ನರೆತ ಅಜ್ಞಾನದಲ್ಲಿ...
ಚಂದ್ರಶೈಲದುನ್ನತಿಯ ರಾಜವೀಥಿಯಲಿ ಅಬ್ಬ ಬಂಡೆ ಆದಿ ಶಂಕರನ ಚಿಕ್ಕ ಗುಡಿಯೊಂದ ಕಟ್ಟಿದಂತೆ ಕಂಡೆ- ಹೊತ್ತು ಮುಗಿದ ಮುಮ್ಮೂಕ ತುದಿಗೆ ಆನಂತ್ಯದಿದಿರುಕಡೆಗೆ ಇಹದಭಂಡ ಕಥೆ ಮುಗಿಸಿದಂತೆ ಪಾಳಿನಲಿ ಒಂಟಿನಡಿಗೆ ನಿರಾಕಾರ ಏಕಾಂತ ತಂತು ಸುತ್ತುತ್ತಲಿತ್ತು ನನ್ನ...
ಇಲ್ಲಿ, ಅಲ್ಲಿಹ, ಎಲ್ಲೆಲ್ಲೂ ಅವ ಮುಖಕ್ಕೆ ಪ್ರತಿಮುಖನಾಗಿಹನು ಹಮ್ಮಿನ ಕೋಟೆಯ ಗೋಡೆಯ ತನ್ನಯ ಬಲಭುಜದಲಿ ಸೈತಾಗಿಹನು ನಾನೋ ಅಗಸೆಯ ಸೀಮೆಗೆ ನಿಂತು ದಿಟ್ಟಿಸಿ ನೋಡೇ ನೋಡುವೆನು ಬಯಲು ಬಯಲು ನಿರವಯಲಿನಾಚೆ ನಾನನಂತ ಅನಂತ ತೋಡುವೆನು...
ಬೆಳಕು ಬೆಳಕು ಕೊನೆಯಿರದ ಬೆಳಕು ಕತ್ತಲೆಗೆ ಖಣವೆ ಇಲ್ಲ. ಪ್ರಾಣದಲ್ಲಿ ಅಜ್ಞಾತ-ಖಾತ ತೆರೆವುದು ರಹಸ್ಯವೆಲ್ಲ. ಜಡದಗಾಧ ಆಖಾತ ಮುಂಚೆ ಮುಚ್ಚಿತ್ತು ತನ್ನ ನೆಲೆಯ. ಲವಲವಿಕೆಯಲ್ಲಿ ಎಚ್ಚೆತ್ತು ಈಗ ಎತ್ತಿಹುದು ತನ್ನ ತಲೆಯ. ಬೆಳಕು, ಹೊತ್ತಿರದ...
ನನ್ನ ಜೀವ ಮನ ಹಿಗ್ಗಿ ಹಿಗ್ಗಿ ಆಕಾಶಕಿಂತ ಅಗಲ ಆವರಣರಹಿತದಾಕಾಲ ಮುಳುಗಿ ಉಂಡಿತ್ತು ಹರ್ಷ ಮಿಗಿಲ ಮೈಯ ಪಿಂಡ ಉಡುಗಿತ್ತು ಉಳಿದು ಜಲಲಿಪಿಯ ರೇಷೆಯಾಗಿ ಆತ್ಮದೇಕಾಂತ ಚಿಂತೆಯಲ್ಲಿ ಸ್ಮೃತಿ ಮಾತ್ರ ಶೇಷವಾಗಿ. ಬಣ್ಣ ಹಾರಿ...