Home / Nagarekha Gaonkar

Browsing Tag: Nagarekha Gaonkar

ಅಲ್ಲಿ ವಿದ್ವತ್ತಿನದೇ ಮೇಲುಗೈ ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ ಅಸಲಿಗೆ ದ್ವೈತ ಅದ್ವೈತಗಳೇ ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು ಹೊಸತು ಹುಡುಕುವ ಪರಿ ಪರಿಪರಿಯಾಗಿ ಇನ್ನೊಂದೆಡೆ ಕಾಂಚಾಣದ ಕುಣಿತ ಸತ್ಯಕ್ಕೂ ಸ್ಥಳವಿಲ್ಲ ಜ್ಞಾನಕ್ಕೂ ಬೆಲೆಯ...

ನಾವೇಕೆ ಹೀಗೆ ಮುಖವಾಡಧಾರಿಗಳುಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತಹಿಂದೆ-ವ್ಯಂಗ್ಯಕಟಕಿ ಕುಹಕಪವಿತ್ರ ಸ್ನೇಹಕ್ಕೆ ಕೊರತೆಯೇ? ನಮ್ಮ ನಗುವೇಕೆ ಹೀಗೆ?ತುಟಿ ತೆರೆದು, ಹಲ್ಲು ತೋರಿಸಿ ವಕ್ರನಗೆ ಬಿರಿದು, ಸ್ನೇಹಸ್ಮಿತವಲ್ಲ ಅದುಅಣಕು ನಗುವೇ? ನಮ್...

ಮನೆಯ ದೀಪ ಹೆಣ್ಣು ಸಂಸಾರಕ್ಕೆ ಅವಳೇ ಕಣ್ಣು ಕೊಳೆ ಜಾಡಿಸಿ ಮನೆಯ ತಮ ಓಡಿಸಿ ಮನದ ಹಂಡೆ ಒಲೆಗೆ ಉರಿಹಚ್ಚಿ ನೀರ ಹೊಯ್ದು ಮನೆ ಮಂದಿಗೆಲ್ಲಾ ಎಣ್ಣೆ ಮಜ್ಜನ ಗೈದು ಹಿಂಡಲಿ ಕಾಯಿ ಮೆಟ್ಟಿ ಬಲಿಯ ಪಾತಾಳ ಕಟ್ಟಿ ಬರುವಾಗ ಪತಿರಾಯಗೆ ಆರತಿಯ ಎತ್ತಿ ಸಿಹಿ ಊ...

ಬೀಜ ಬೇರೂರಿ ಕುಡಿ ಇಡುತ್ತಿರುವಾಗಲೇ ಹತ್ತಿಕೊಂಡಿತ್ತು ಗೆದ್ದಲು ಬಿಡಿಸಿಕೊಳ್ಳಲು ಹರಸಾಹಸಗೈದರೂ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಗೆದ್ದಲು ಹಿಡಿದ ಬೀಜ ಸಾಯುವುದೇ ದಿಟ ಎಂದುಕೊಂಡರೂ ಹಾಗಾಗಲಿಲ್ಲ ಉಳಿವಿಗಾಗಿ ಹೋರಾಟ ತುಸು ಉಸಿರುವವರೆಗೂ ಚಿಗುರಿಕೊಂ...

ಮೂರು ಕಾಸಿನ ಗಂಧ ಬೊಟ್ಟು ಮೊಣಕಾಲು ಮಾರುದ್ದ ಸೀರೆ ತಲೆ ತುಂಬಾ ಸೆರಗು ತಲೆ ಬಾಗಿಲಲೇ ನಿಂತು ಪತಿದೇವ ನಿರೀಕ್ಷೆ ನನ್ನಜ್ಜಿ ಪರಂಪರೆ ಬಳೆಯಂಡಿಯ ದೊಡ್ಡ ಬಿಂದಿಯಿಟ್ಟು ಆರು ಮಾರುದ್ದ ಸೀರೆಯುಟ್ಟು ಮೈತುಂಬಾ ಸೆರಗ ಹೊದ್ದು ಟಿ.ವಿ. ನೋಡುತ್ತ ಮತ್ತೆ ...

ಸ್ವಚ್ಚಂದ ಬೆಳಕಿನಲಿ ಅಟ್ಟ ಅಡುಗೆಯ ಉಂಡು ಆಕಾಶ ಭೂಮಿಗಳೇ ನೆಲ ಮಾಡುಗೊಂಡು ನಾಳೆ ಎಂಬುದ ಮರೆತು ಇಂದಿಂದೆ ಬದುಕುವರು ಅಲೆಮಾರಿ ಜನರು ಚಿಂತೆಯಂಬ ಬೊಂತೆಗೆ ಒಂದೊಂದು ಗುಂಡು ಗೋಲಿಯ ಹೊಡೆದು ತಣ್ಣೆಯನ್ನಕ್ಕೆ ಉಪ್ಪು ಮೆಣಸು ನುರಿದು ದಿನ ದಿನವೂ ಹೊಸ ...

ಜಟಿಲ ಬದುಕಿನ ಯಕ್ಷ ಪ್ರಶ್ನೆಗಳು ಹೊಡೆಮರಳಿ ಕಾಡುವವು ಯಾಕೋ? ಸಮೃದ್ಧ ಸಂಸಾರ ಎಂದುಕೊಂಡರೂ ಅತೃಪ್ತಿ ಅನಾಸಕ್ತಿ ಮುಲುಗುವುದು ಯಾಕೋ? ಬಿಗಿವ ಬಿಗಿಸುವ ಬಗಿವ ಬಗ್ಗಿಸುವ ಸಂಬಂಧ ಅನುಬಂಧಗಳು ಬಾಯಾರಿ ಕಾಂಚಣಕ್ಕೆ ಕುಣಿಯುವವು ಯಾಕೋ? ಜನನ ಮರಣದ ಗುಟ್ಟ...

ಮೋಡನ ಮನೆಯೊಳಗೆ ಸರಿಗಮ ಸ್ವರ ಏರಿಳಿತ ಕಪ್ಪು ಬಿಳಿ ಚಿತ್ತಾರ ಆಗಾಗ ನೇಸರನ ಕಣ್ಣು ಮುಚ್ಚಾಲೆ ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು ಸುಳಿಗಾಳಿ ಬೀಸುತಿದೆ ಬಿಸಿಲ ಕಾವಿಗೆ ಹುಡಿ ನೆಲ ಗರ್ಭದಿ ಏರಿ ಮುಗಿಲ ತಬ್ಬಿ ಆಹಾ! ಎದೆಯಲ್ಲಿ ಏನೋ ಸುಳಿದಂತೆ ತ...

ಮೊದಮೊದಲು ನನ್ನಕ್ಕನ ಕೂಡ ನಾ ಪಾಟಿ ಚೀಲವ ಹೊತ್ತು ಶಾಲೆ ಮೆಟ್ಟಿಲು ಹತ್ತಿದ ಕ್ಷಣ ಮಣಿ ಪಾಟಿಯಲ್ಲಿ ಒಂದೆರಡು ಕಾಗುಣಿತ ಕಲಿತ ದಿನ ಮೊದಮೊದಲು ನನ್ನಪ್ಪನ ಕೈಯಲ್ಲಿ ಕೈಯಿಕ್ಕಿ ನಡೆದು ದೊಡ್ಡ ದೇವನ ಜಾತ್ರೆ ನೋಡಿ ದೊಡ್ಡ ಪುಗ್ಗಿಯ ಕೊಂಡು ನಲಿದ ದಿನ ...

ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು ಮಕ್ಕಳೆಂದರೆ ತುಂಟಾಟ ಮೊಂಡಾಟಕ್ಕೆ ಏಣೆಯಾದವರು ಮೈಮನಕ್...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...