ವಚನ ಲಿಂಗಮ್ಮನ ವಚನಗಳು – ೭ ಲಿಂಗಮ್ಮJuly 12, 2014June 6, 2015 ವ್ಯಾಪಾರವ ಬಿಟ್ಟು, ತಾಪತ್ರಯವನೆ ಹಿಂಗಿ. ಲೋಕದ ಹಂಗನೆ ಹರಿದು, ಬೇಕು ಬೇಡೆಂಬುದನೆ ನೂಕಿ, ತಾ ಸುವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** Read More
ವಚನ ಲಿಂಗಮ್ಮನ ವಚನಗಳು – ೬ ಲಿಂಗಮ್ಮJuly 5, 2014June 6, 2015 ನಿಮ್ಮ ಪಾದವಿಡಿದು, ಮನ ನಿರ್ಮಳವಾಯಿತು. ನನ್ನ ತನು ಶುದ್ಧವಾಯಿತು. ಕಾಯ ಗುಣವಳಿಯಿತು. ಕರಣಗುಣ ಸುಟ್ಟು ಭಾವಳಿದು ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು, ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. ***** Read More
ವಚನ ಲಿಂಗಮ್ಮನ ವಚನಗಳು – ೫ ಲಿಂಗಮ್ಮJune 28, 2014June 6, 2015 ನೆನವುತ್ತಿದೆ ಮನ. ದುರ್ವಾಸನೆಗೆ ಹರಿವುತ್ತಿದೆ. ಕೊನೆಕೊಂಬೆಗೆ ಎಳೆವುತ್ತಿದೆ. ಕಟ್ಟಿಗೆ ನಿಲ್ಲದು- ಬಿಟ್ಟರೆ ಹೋಗದು. ತನ್ನ ಇಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲ್ಲಿಸಿ, ಬಚ್ಚಬರಿಯ ಬೆಳಗಿನೊಳಗೆ ಓಲಾಡುವ ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯ ಅಪ್ಪಣಪ್ರಿಯ... Read More
ವಚನ ಲಿಂಗಮ್ಮನ ವಚನಗಳು – ೪ ಲಿಂಗಮ್ಮJune 14, 2014June 6, 2015 ಆಸೆಯನಳಿದು, ರೋಷವ ನಿಲ್ಲಿಸಿ, ಜಗದ ಪಾಶವನರಿದು, ಈಶ್ವರನೆನಿಸಿಕೊಂಬ ಶರಣರ ಜಗದ ಹೇಸಿಗಳೆತ್ತ ಬಲ್ಲರೊ ಅಪ್ಪಣಪ್ರಿಯ ಚನ್ನಬಸವಣ್ಣಾ? ***** Read More
ವಚನ ಲಿಂಗಮ್ಮನ ವಚನಗಳು – ೩ ಲಿಂಗಮ್ಮJune 13, 2014June 6, 2015 ಮನ ಮರವೆಗೆ ಮುಂದುಮಾಡಿತ್ತು. ತನು ಕಳವಳಕ್ಕೆ ಮುಂದುಮಾಡಿತ್ತು. ಆಸೆರೋಷವೆಂಬವು ಅಡ್ಡಗಟ್ಟಿದವು. ಕೋಪ ಕ್ರೋಧವೆಂಬವು ಮುಂದುವರಿದವು. ಇದರೊಳಗೆ ಜಗದೀಶ್ವರನೆನಿಸಿಕೊಂಬವರ ನುಡಿಯ ಓಸರಿಸುವದು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** Read More
ವಚನ ಲಿಂಗಮ್ಮನ ವಚನಗಳು – ೨ ಲಿಂಗಮ್ಮJune 2, 2014June 6, 2015 ಮದ ಮತ್ಸರ ಬಿಡದು. ಮನದ ಕನಲು ನಿಲ್ಲದು. ಒಡಲ ಗುಣ ಹಿಂಗದು. ಇವ ಮೂರನು ಬಿಡದೆ ನಡಿಸುವನ್ನಕ್ಕ, ಘನವ ಕಾಣಬಾರದು. ಘನವ ಕಾಂಬುದಕ್ಕೆ, ಮದಮತ್ಸರವನೆ ಬಿಟ್ಟು, ಮನದ ಕನಲ ನಿಲಿಸಿ, ಒಡಲ ಗುಣವನೆ ಹಿಂಗಿಸಿ,... Read More
ವಚನ ಲಿಂಗಮ್ಮನ ವಚನಗಳು – ೧ ಲಿಂಗಮ್ಮMay 26, 2014June 6, 2015 ಮಚ್ಚಬೇಡ. ಮರಳಿ ನರಕಕ್ಕೆರಗಿ, ಕರ್ಮಕ್ಕೆ ಗುರಿಯಾಗಬೇಡ. ನಿಶ್ಚಿಂತನಾಗಿ ನಿಜದಲ್ಲಿ ಚಿತ್ತವ ಸುಯಿಧಾನವ ಮಾಡಿ, ಲಿಂಗದಲ್ಲಿ ಮನ ಅಚ್ಚೊತ್ತಿದಂತಿರಿಸಿ, ಕತ್ತಲೆಯನೆಕಳೆದು, ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚನ್ನಬಸವಣ್ಣಾ. ***** Read More
ವಚನ ಲಿಂಗಮ್ಮನ ವಚನಗಳು – ೮ ಲಿಂಗಮ್ಮMay 23, 2014October 2, 2018 ಅಯ್ಯ, ಈ ಮಹಾಘನವ ಕಾಂಬುದಕ್ಕೆ, ಹಸಿವು ಕೆಡಬೇಕು. ತೃಷೆಯಡಗಬೇಕು. ವ್ಯಸನ ನಿಲ್ಲಬೇಕು. ನಿದ್ರೆ ಹರಿಯಬೇಕು. ಜೀವ ಬುದ್ಧಿ ಹಿಂಗಬೇಕು. ಮನ ಪವನ ಬಿಂದು ಒಡಗೂಡಬೇಕು. ಚಿತ್ತ ಒತ್ತಟ್ಟಿಗೆ ಹೋಗದಿರಬೇಕು. ಹೊತ್ತು ಹೊತ್ತಿಗೆ ಎತ್ತರವನೇರಿ, ಬೆಚ್ಚು... Read More