Home / ಹಸುರಿನವಸರದೊಳ್

Browsing Tag: ಹಸುರಿನವಸರದೊಳ್

ಜೀವಪೋಷಣೆಗಪ್ಪವಯವಗಳೆಲ್ಲ ಜೀವಕಿರ್ಪಂತೆ ಜೀವ ಜಾಲಗಳೀ ಜಗದ ತುಂಬೆಲ್ಲ ಜಗದ ಪೋಷಣೆಗೆ ಆವ ದೇಹದೊಳಾವ ರೋಮವು ಬೇಡವೆನಲುಂಟೇ ? ದೇವನೊಲವಿನ ದೇಹದೊಳೊಂದವಯವ ತಾನೆಂದೆಂಬ ಭಾವದೊಳುಸುರಿದರದುವೆ ಸಾವಯವ – ವಿಜ್ಞಾನೇಶ್ವರಾ *****...

ಇದ್ದೀತು ಕೃಷಿಯೊಳಗು “ಮತ ಭೇದ” ವದನೆ ಚರ್ಚಿಸುತೆಮ್ಮ ಮತದಾನವಾ ವುದಕೆಂದು ಕಾಲ ಕಳೆವುದು ವ್ಯರ್ಥ ಮುದದೊಳೆಮ್ಮ ದೇಶಕಾಲದಾಧಾರದೊಳು ಪ್ರಕೃತಿ ಯಾದಿ ಧರ್ಮವ ನೆನೆದರದು ಸಾವಯವ – ವಿಜ್ಞಾನೇಶ್ವರಾ *****...

ಬೆಳೆದೊಂದು ಹಣಕೆಂದು, ಮನೆಗೆಂದು ನೂರೊಂದು ಬಳಿಯಂಗಡಿಯೊಳೆ ತಂದು, ನಾ ಸಾವಯವವೆಂದು ಪೇಳಿದೊಡದು ಕುಂದು, ಹಿಂದು ಮುಂದಾಗಬೇಕಿಂದು ಕಳೆ ಬೆಳೆಗಳೊಂದಾಗಿ ಮನೆಯಡುಗೆ ಸರಕಾಗಿ ತಳುಕಿನಂಗಡಿ ದಾರಿ ತಪ್ಪಿದರದುವೆ ಸಾವಯವ – ವಿಜ್ಞಾನೇಶ್ವರಾ *****...

ಸಾವಯವವೆಂದರದು ಗೃಹಸ್ಥನಾಗುವುದೆಂದೆ ಸಂತೆಯೊಳಗಿಂದೇನೆ ತಂದರು ಕುಂದೆ ಸ್ವಗೃಹದ ಸುತ್ತಿನೊಳೆಲ್ಲ ಸೊತ್ತನು ಸಾನುರಾಗದಿ ಸಾಗುವಳಿಗೊಂಡೊಡಾತಂಗೆ ಸದೃಹಸ್ಥನೆಂದೆಂಬ ಶುಭನಾಮ ಸಲ್ಲುವುದು – ವಿಜ್ಞಾನೇಶ್ವರಾ *****...

ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು ತಿಳಿದೊಡಂ ಕಳಿತಾಗದದು ಸಾವಯವ ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ ಕಳು ಮನವ ದಮನಿಸುತ ಮೈ ಬಳಲೆ ಬೆವರಿದರದುವೆ ಸಾವಯವ – ವಿಜ್ಞಾನೇಶ್ವರಾ *****...

ಸಾವಯವದೆಂದರದು ಬಲು ಸರಳ ಜೀವನ ತತ್ತ್ವವಿದನಾ ಪದವೆ ಎದೆ ತುಂಬಿ ಹೇಳಿದರು ಅವಯವಗಳುಪಯೋಗವನಧಿಕ ಗೊಳಿಸಿದರ ದುವೆ ಸಾವಯವವೆಂದೇನೆ ಕೇಳಿದರು ಬಲು ಧನದ ಕುರ್‍ಚಿ ತಾ ಮೆರೆಯುತಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಬೇಕಿಹುದಾದೊಡಂ ಒಂದಷ್ಟು ಹಣ, ರಣ ಶೋಕಿ ವಾಹನ ದಾರಿಯನು ಮಾಡಲಿಕೆ ಬೇಕಿಲ್ಲವದು ಅನ್ನದರಿವಿಗೆ ಬಾಳ ದಾರಿಗೆ ಭುಕ್ತಿಯನ್ನವದು ಭುವಿಯಲ್ಲಿ ತಾನೆ ಬೆಳೆಯುವುದು ಯುಕ್ತಿಯೊಳದುವೆ ಸೆಳೆಯುವುದು ಹಸಿದವನ – ವಿಜ್ಞಾನೇಶ್ವರಾ *****...

ವನ, ಮನ, ಮನೆ, ಮಡದಿಯೊಂದಾದಂದು ಘನ ಕೃಷಿಗಿರದಾವ ಮನ್ನಣೆಯ ಕುಂದು ಧನದ ಮಿತಿಯನರಿತು ಅನ್ನದ ಗತಿಯ ನನುಸರಿಸಿ, ತನು ಮನದ ಬಯಕೆ ಯನು ಅವರಿಗವರೇ ಭರಿಸಿದರದು ಸಾವಯವ – ವಿಜ್ಞಾನೇಶ್ವರಾ *****...

ಅಂದಂದಿನನ್ನವಲ್ಲಲ್ಲೇ ಸಿಗುವಂತೆ ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ ಆತುರವು ಅವಸರವು ಅಳಿವಂತೆ ಅನ್ಯದೇಶದವಲಂಬನೆಯು ಕಡಿವಂತೆ ಆನಂದವಿರಲದುವೆ ಸಾವಯವ – ವಿಜ್ಞಾನೇಶ್ವರಾ *****...

ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ – ವಿಜ್ಞಾನೇಶ್ವ...

1...1819202122...26

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...