
ಚಳಿಗಾಲದಲ್ಲಿ ನಾವು ಮಳೆ ಬೀಳುವುದನ್ನು ನೋಡಿದೆವು; ಆದರೆ, ನಾವು ನೆನೆಯಲಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಿನಗಟ್ಟಲೆ ಕುಡಿಯುತ್ತ ಕುಳಿತಿದ್ದವರು ಮಾತ್ರ, ಹಿತ್ತಲಿನಲಿ ಸವೆದು ಬಿದ್ದ ಬೂಟುಗಳಂತೆ ತೋಯ್ದು, ಮಣ್ಣು ಸೇರುವಂತಿದ್ದರ...
ಮಡೊನ್ನ, ಜೆನ್ನಿಫರ್ ಮತ್ತು ಮರಿಯಕ್ಯಾರೆ ಎಂಬ ಪಾಶ್ಚಾತ್ಯ ನೀರೆಯರ ಹಾಡುಗಳು ಅವರಿಬ್ಬರ ಮೈ ಮೇಲಿನ ಹಳದಿಬಟ್ಟೆಯನ್ನು ಬಿಚ್ಚಿಸುತ್ತಲಿದೆ. ಪ್ರಳಯದಂತೆ ಉಕ್ಕಿ ಬರುವ ಆ ಸಂಗೀತ ಗುಚ್ಛವೋ, ಗಾಳಿಯಲ್ಲಿ ತೇಲಾಡತೊಡಗಿದ ಆ ಬೀದಿಬದಿಯ ಚಿಂದಿಬಟ್ಟೆಗಳನ್ನ...
ಹೆಚ್‌ಪಿ ಲೇಸರ್‌ಜೆಟ್ ಪ್ರಿಂಟರ್ ಮೇಲೆ ಕುಗ್ರಾಮದ ಮುದುಕಿಯಂತೆ ಹೊದೆಯಲ್ಪಟ್ಟಿರುವ ಕಡುಗುಲಾಬಿ ವರ್ಣದ ದಾವಣಿ- ಬ್ರೌಸಿಂಗ್ ಸೆಂಟರ್‌ನ ಹುಡುಗಿಯ ಮೈ ಮೇಲೆ ಬೀಳಲು ಕಳ್ಳ ಸಂಚೇನೋ ಹೂಡುತ್ತಿರುವಂತಿರುತ್ತದೆ. ಅವನ ಗುಪ್ತ ಪ್ರೇಮ ವ್ಯವಹಾರ, ...
ನೀಲಾಕಾಶದಲ್ಲಿ ಸರ್ಪವೊಂದು ಹರಿದಂತೆ ಅವಳು ಬುಸುಗುಡುತ್ತಾಳೆ. ಸಂಗೀತ ದಿಕ್ಕಾಪಾಲಾಗಿ, ಕೋಣೆ ಗೋಡೆಗಳಿಗೆ ತನ್ನ ತಲೆ ಜಜ್ಜಿಕೊಂಡು ರಕ್ತ ಕಾರಿ, ನಿರಂತರ ಸಾಯತೊಡಗುತ್ತದೆ. ಅಲ್ಲಿ ಚುಂಬನಗಳು ಪ್ರತಿ ಮಧ್ಯಾಹ್ನ ಚಳಿಗಾಲದ ತಣ್ಣಗಿನ ಗಾಳಿಯಂತ...
ಮೃತರ ಸವಾಲುಗಳಿಗೆ ಉತ್ತರಿಸಲೇಬೇಕಾದ ದಿನ ಬಂದೊದಗಬಹುದು. ಆಗ ಉತ್ತರಿಸದಿದ್ದಲ್ಲಿ ಅವರು ಮತ್ತೊಮ್ಮೆ ರೋದಿಸುತ್ತಾರಂತೆ. ಆಗಲೂ ಸುಮ್ಮನಿದ್ದಲ್ಲಿ, ಬದುಕಿ ಪ್ರಶ್ನಿಸುತ್ತಾರಂತೆ- ಎದುರಾಳಿಗಳ ನಾಲಗೆಗಳನ್ನು ಕತ್ತರಿಸಿ. *****...
ಗೂಡು ಸೇರುವ ಹೊತ್ತು- ಪುಂಡ ಹುಂಜಗಳು ಪೈಪೋಟಿಗಿಳಿದು ತಮ್ಮ ಪಂಜಗಳಿಗೆ ಬಿಗಿದ ತುಂಡು ಚಾಕುಗಳಿಂದ ತಲೆ ಮತ್ತು ಹೃದಯಭಾಗ ಸೀಳಿಕೊಂಡು, ಚಿಮ್ಮುವ ನೆತ್ತರಿನ ಆವೇಶದಲಿ ಆಗಸದೆತ್ತರಕೆ ಜಿಗಿದು, ಕೆಂಡಗಳ ಸುಡುತ್ತಿವೆ. ಒಂದು ಡೈರಿಯಷ್ಟು ಪ್ರೇ...
ಅವಳು ತನ್ನೆರಡೂ ಸ್ತನಗಳನ್ನು ಮುಚ್ಚಿಕೊಳ್ಳುತ್ತಾ, ಗಾಳಿಯಲೆಗಳಲ್ಲಿ ನಡೆಯತೊಡಗಿದ್ದಳು. ಬಟ್ಟೆಯಿದ್ದರೂ ಬೆತ್ತಲೆಯಲ್ಲಿದ್ದೇನೆ ಅಂದುಕೊಂಡವನ ಹಾಳುಭ್ರಮೆ ಮರದ ಹೂಎಲೆಗಳನ್ನು ಉದುರಿಸುತ್ತಿತ್ತು. ಉನ್ಮತ್ತ ಉಡುಪಿನ ಅವಳ ನಗೆ- ಕಿಟಕಿಯ ಮೂಲಕ ಹಾದುಬ...
ಮಾತುಗಳು ಶವದಂತೆ ಹೂತುಹೋಗಿವೆ; ಬೆಳದಿಂಗಳ ಕನಸುಗಳೋ ಸಾಲುಗಟ್ಟಿ ಕಂಬನಿ ಸುರಿಸುತ್ತವೆ. ರಾತ್ರೆ ಓದಿದ ದುಃಖಗಳು ಹಗಲಿನ ಒಣಮರಗಳಲ್ಲಿ ಹಸಿವಿನ ಪುಟ್ಟ ಹಕ್ಕಿಗಳಂತೆ, ಮರದ ಗೊಂಬೆಗಳಂತೆ ಮಾರ್ದನಿಸುತ್ತಿದ್ದವು. *****...














