ಚಳಿಗಾಲದಲ್ಲಿ ನಾವು ಮಳೆ ಬೀಳುವುದನ್ನು ನೋಡಿದೆವು;
ಆದರೆ, ನಾವು ನೆನೆಯಲಿಲ್ಲ.

ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಿನಗಟ್ಟಲೆ
ಕುಡಿಯುತ್ತ ಕುಳಿತಿದ್ದವರು ಮಾತ್ರ,
ಹಿತ್ತಲಿನಲಿ ಸವೆದು ಬಿದ್ದ ಬೂಟುಗಳಂತೆ ತೋಯ್ದು,
ಮಣ್ಣು ಸೇರುವಂತಿದ್ದರು.

ನಿಜ ಹೇಳಬೇಕೆಂದರೆ,
ನಮಗೇ ಗೊತ್ತಿಲ್ಲದೆ ನಾವು ನೆನೆಯುತ್ತಿದ್ದೆವು.

ನೆನೆದೂ, ನೆನೆಯದೇ ಹೋಗುವ ಹುಡುಗಿಯನ್ನು
ನಾನು ಆವೊತ್ತೇ ನೋಡಿದ್ದು.
*****

Latest posts by ಮಂಜುನಾಥ ವಿ ಎಂ (see all)