ರೂಪಾಂತರ
ಕಾಲಲ್ಲಿ ತುಳಿದ ಮಣ್ಣು ಗಡಿಗೆಯಾಗಿ ಏರುತ್ತದೆ ತಲೆಯನ್ನು *****
ಚಿನ್ನವೆಂಬ ಹೆಣ್ಣು ಕಬ್ಬಿಣವೆಂಬ ಗಂಡು ತಾಮ್ರವೆಂಬ ಶ್ರೀಮಂತ ಹಿತ್ತಾಳೆಯೆಂಬ ಬಡವಿ ಬೇಧವಿಲ್ಲದೆ ಬೆರೆತು ಒಂದಾಗುವುದು ಕರಗಿ ಕುಲುಮೆಯ ಕುದಿವಂತ ಮೂಸೆಯೊಳಗೆ ದ್ರವವಲ್ಲದ ಖನಿಜವಲ್ಲದ ಕೂಡಿ ಬಾಳಲೂ ತಿಳಿಯದ […]
ಬಣ್ಣ ಬಣ್ಣದ ಅಕ್ಷರಗಳಿಂದ ಬೀಗುತ್ತವೆ ಬೀದಿ ಬೀದಿಗಳಲ್ಲಿ ಜಾಹಿರಾತಿನ ಫಲಕಗಳು ಯಾವ ಅಕ್ಷರಗಳನ್ನೂ ಶಾಶ್ವತವಾಗಿ ತಮ್ಮೊಳಗೆ ಉಳಿಸಿಕೊಳ್ಳದೆ ನಿಸ್ವಾರ್‍ಥ ಸೇವೆ ಸಲ್ಲಿಸುತ್ತವೆ ಶಾಲೆಗಳಲ್ಲಿನ ಕಪ್ಪು ಹಲಗೆಗಳು *****
ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್‍ವತಗಳ […]
ಅರಮನೆಯಲ್ಲಿ ಅರಳುವ ಗುಲಾಬಿಯ ಸುತ್ತ ಮುತ್ತ ಆಳು-ಕಾಳು, ಮುಳ್ಳು ಸರ್‍ಪಗಾವಲು ಆದರೇನು ದುಂಬಿಗೆ ಸದಾ ತೆರೆದ ಬಾಗಿಲು *****
ಏರಿದರೆ ಮಂಚ, ಗದ್ದುಗೆ, ಸಿಂಹಾಸನ ಹೆಚ್ಚೆಂದರೆ ಎರಡು ಮೂರಡಿ ಮೇಲೆ ಜಾರಿದರೆ ಗೋರಿ, ಸಮಾಧಿ, ಬೃಂದಾವನ ಹೆಚ್ಚೆಂದರೆ ಎರಡು ಮೂರಡಿ ಕೆಳಗೆ *****
ಹಲ್ಲಿ ಹೆಕ್ಕಿ ಹೆಕ್ಕಿ ನುಂಗುತ್ತಿತ್ತು ಇರುವೆಗಳ ಮತ್ತೆ ಸತ್ತ ಹಲ್ಲಿಯ ಹೊತ್ತು ಸಾಗಿತ್ತು ಇರುವೆಗಳ ಮೆರವಣಿಗೆ ದೇಹವೆಲ್ಲ ಬಗೆದು ಹುಡುಕುತ್ತಿದ್ದವು ಇರುವೆಗಳು ಕಾಣಲಿಲ್ಲ ಕೊನೆಗೂ ಒಳ ಹೊಕ್ಕ […]