Home / Govind Pai

Browsing Tag: Govind Pai

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆ...

ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ- ತೋರದನುರಕ್ತಿ, ಭಕ್ತಿಯನೆಂತು ಕಾಂಬೆ? ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ. *****...

ತನ್ನೊಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳ್‌ ಸದೃಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳ್ತಳೆದು ಬಾಳ್ಗಳೆದುಂ ಬದುಕಿರ್ಪರಾವಗಂ- ಬೆಳ್ಳಿಯ ಬೆಟ್ಟಮಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ? ೪ *****...

‘ಎಲ್ಲಿಹವೊ, ಕಾಲ, ನೀನೆಲ್ಲಿಗವನವಿತೆ? ಇಂತಿಳೆಯ ಬದುಕಿನೇತರ ಸರ್ವಗವತೆ? ನಿನಗೆಟಕದೆಮಗುಳಿವುದೇನಾನುಮುಂಟೆ?’- ‘ಉಂಟು, ಕವಿಗೊಳಕವಿಯಿನೊಗೆತಂದ ಕವಿತೆ’ ೪ *****...

ಬಿತ್ತರಿಸದೆ ತಾಂ ಕಾವ್ಯವ ಗೊತ್ತರಿಯಲಳವೆ ಕವಿಯೆದೆಯಂ? ಕವಿಯೆದೆಯಂ| ಗೆತ್ತಿರದ ವಿಮರ್ಶಕನೇಂ? ಹೆತ್ತರಿಯದ ಬಂಜೆ ಸೂಲಗಿತ್ತಿಯೆ ಜಗದಿ? ||೧|| ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳೆವಂತೆ ಲೋಚನಂ, ತಳುವುವೊಲಿಂಚರಂ ಸ್ಫುರಣದಿಂ, ನದಿ ತಕ್ಕನಿ...

ರಾಗ ನವರಸಕನ್ನಡ ರೂಪಕತಾಳ (‘ನಿನುವಿನಾ ನಾಮದೇಂದು’ ಎಂಬ ತ್ಯಾಗರಾಜ ಕೃತಿಯಂತೆ) ಜಯಜಯಾ ನಮ್ಮೊಡೆಯಾ! ಜಗದೊಡೆಯಾ ಜಯಜಯಾ! ||ಪಲ್ಲ|| ಜಯಜಯ ಭಾರತದಜೊಡೆಯಾ! ಬಡವರೊಡೆಯ ಜಯಜಯಾ! ||ಅನು|| ಏನು ಚೆಲುವೊ ದೇವ ನಿನ್ನೀ ಭಾರತಮೂರ್ತಿ! ತೆರೆ...

ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ ೧ಗಾನಗಳಿಲ್ಲ- ಧಾರಿಣಿ ತನತ್ತುರೆ ಗೆತ್ತಣಮಿಲ್ಲವಿಂದಿಗೆ! ಕಬ್ಬದೊಳಾದೊಡಂದಿಗೊಗೆತಂದೊಲೆ ನಿಂದಿಹವಿಂದಿಗೆಂದಿಗುಂ – ಬರ್ದಿನ ವಾರ್ಧಿಯಿಂದೊಸರ್ದಮರ್ದೆನೆ ಕಬ್ಬಮದೊಂದೆ ಬರ್ದಿಲಂ. ೪ ...

ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು? ೭ ಮನೆಗೆಯ್ದಕ್ಕರೆಯ ಪಿಕಂ ಪಾರಿದುದೆಲ್ಲಿ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ! ಅಳಲ ಕಣಜವಿನ್ನು ಸಾಗೆ, ಹಗಲ...

ಬಲ್ಲುದೆ ಲತೆ ಫಲಂ ತನ್ನ ಸಿಹಿಯೊ ಕಹಿಯೊ ಎಂಬುದನ್ನ? ಒಗೆದಂತೊದಗಿಸಲು ಬನ್ನ ಮೇನೊ? ಬಳ್ಳಿಯಾ ೪ ಹಲವೊ ಕೆಲವೊ ಸವಿದು ಹಣ್ಣ, ಸಿಹಿಯಾದಡೆ ಕೊಳುವುದುಣ್ಣ ಕಹಿಯಾದಡೆ ಕಳೆವುದಣ್ಣ ಲತೆಯ ತಳ್ಳಿಯಾ ೮ ಪ್ರಕೃತಿವಶಮೆ ಫಲಿಸ ಬಲ್ಲ ಲತೆಗೆ ರುಚಿಯ ಗೊಡವೆ ಸಲ...

1234...6

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...