ಹನಿಗವನ ಕಸಿ May 29, 2022December 29, 2021 ಒಂದು ಪ್ರಭೇಧದ ಭಿನ್ನ ರುಚಿಯ ಸಸಿಗಳೆರಡ ಆಯ್ದು ಕೊಯ್ದು ಒಂದರ ಬುಡಕ್ಕೆ ಮತ್ತೊಂದರ ನಡು ಜೋಡಿಸಿ ತಾಳಿಯ ಬಂಧದಿ ಬಿಗಿದು ಬೆಳೆಸಿ ನೋಡಿರಿ ಮೂಲದೆರಡರ ಗುಣ, ಲಕ್ಷಣ […]
ಹನಿಗವನ ಪ್ರಿಯನಲ್ಲ May 22, 2022December 29, 2021 ಲೋಕದಲಿ ನಾನು ಯಾರಿಗೆ ಪ್ರಿಯ? ಬಿಡಿ ನಾನು ನನಗೆ ಪ್ರಿಯನಲ್ಲ! *****
ಹನಿಗವನ ಸೋಲು May 15, 2022December 29, 2021 ನಿನ್ನಲ್ಲಿ ಬೇಡಿ, ಬೇಡಿ ಕೇವಲವಾಗಲಾರೆ ಎಂದು ನೂರು ನೂರು ಬಾರಿ ನಿರ್ಧರಿಸುವೆ ಬಾರಿ, ಬಾರಿಗೂ ಸೋಲುವೆ. *****
ಹನಿಗವನ ಕಣ್ಣೀರು May 8, 2022December 29, 2021 ಸಂಕಟದಲ್ಲಿ ಕಣ್ಣೀರು ಸಂತಸದಲ್ಲಿ ಕಣ್ಣೀರು ಬಾಳೆಂದರೆ ಬರಿ ಕಣ್ಣೀರೇನು? *****
ಹನಿಗವನ ಮಾದರಿ April 24, 2022December 29, 2021 ಎತ್ತರದ ನಿಲುವವರ ಕಂಡು ವಿಷಕಕ್ಕುವ ಬಗೆ ತೆಗೆ; ಅವರು ನಮಗೊಂದು ಮಾದರಿ ಅಳತೆಗೋಲು. *****
ಹನಿಗವನ ಬಲೆ April 10, 2022December 29, 2021 ಬೆಸ್ತರು ಬೀಸುವರು ಬಲೆ ಹಿಡಿಯಲು ಮೀನು, ಸಿರಿವಂತರು ಹೂಡುವರು ಬಂಡವಾಳ ಸೆಳೆಯಲು ಸಂಪತ್ತಿನ ಜೇನು. *****