ಒಂದು ಪ್ರಭೇಧದ
ಭಿನ್ನ ರುಚಿಯ ಸಸಿಗಳೆರಡ ಆಯ್ದು
ಕೊಯ್ದು
ಒಂದರ ಬುಡಕ್ಕೆ ಮತ್ತೊಂದರ ನಡು
ಜೋಡಿಸಿ
ತಾಳಿಯ ಬಂಧದಿ ಬಿಗಿದು
ಬೆಳೆಸಿ ನೋಡಿರಿ
ಮೂಲದೆರಡರ ಗುಣ, ಲಕ್ಷಣ ಲಯವಾಗಿ
ಸುಭಿನ್ನ ಫಲದೊಂದು ಸಸಿ
ರೂಪುಗೊಳ್ಳುವುದು
*****