Home / Shrinivasa KH

Browsing Tag: Shrinivasa KH

ಸೂರ್ಯನೂ ಅಷ್ಟೆ ನಮ್ಮ ಐ.ಟಿ.ಬಿ.ಟಿ ಹುಡುಗರಂತೆ ಮೇಲಕ್ಕೇರಿದ ಮೇಲೆ ಜನ್ಮ ಸ್ಥಳ ಮರೆತು ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ ಅಲ್ಲಿ ಏನು ಕಥೆಯೋ ಏನೋ ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ ದೊಡ್ಡದಾಗಿ ಕಾಣಿಸುತ್...

ಪಾಪ ಸೂರ್ಯ ಅನ್ನೋ ಪ್ರಾಣಿ ಎಲ್ಲರಂತೆ ನಿದ್ದೆ ಮಾಡ್ಲಿಕ್ಕೆ ಕತ್ತಲೆ ಹುಡುಕಿಕೊಂಡು ಒಂದೇ ಸಮನೆ ತಿರುಗುತ್ಲೇ ಇದೆ ಅವನು ಕಾಲಿಟ್ಟಲ್ಲೆಲ್ಲಾ ಕೈಗೆ ಸಿಗದಂತೆ ಕಣ್ ತಪ್ಪಿಸಿ ಕತ್ತಲೇನೂ ಸುಖಾಸುಮ್ನೆ ಹೆದರ್‍ಕೊಂಡು ಓಡುತ್ಲೇ ಹೋಗ್ತಿದೆ. *****...

ಚಂದ್ರನಿಲ್ಲದ ಅಮವಾಸ್ಯೆ ರಾತ್ರೆ ತಾರೆಗಳು ಆಕಾಶದುದ್ದಗಲ ರಂಗೋಲೆ ಶೃಂಗರಿಸಿ ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ ಸೂರ್ಯ ಬಂದಾನೆಂದು ಎಷ್ಟು ಕಾದರು ಅವನು ಬರಲೇ ಇಲ್ಲ. ಬೆಳಗಾದ ಮೇಲೆ ಮಹರಾಯ ಬಂದಾಗ, ಕಣ್ಣು ಬಿಡಲಾಗದ ಗಾಡನಿದ್ದೆಯಲ್ಲಿದ್ದ ತ...

ಅರೇ ಇಲ್ಲಿದ್ದ ಕತ್ತಲೆಯನ್ನು ಕದ್ದವರಾರು ಸೂರ್ಯನೇ? ಚಂದ್ರನೇ? ಅಥವಾ ನಮ್ಮ ಮನೆಯ ಮೊಂಬತ್ತಿಯೇ? ವಿಚಾರಿಸೋಣ ಬಿಡಿ ಒಂದು ಕಂಪ್ಲೇಂಟ್ ಕೊಡಿ ಎಲ್ಲಿ ಹೋಗ್ತಾರೆ, ಸಿಕ್ಕಿ ಬೀಳ್ತಾರೆ *****...

ನೋಡಿ ನಾನು ಇದ್ದಲ್ಲೇ ಇರೋವ್ನು ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ. ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ. ಹಗಲೂ ಇಲ್ಲ, ರಾತ್ರೇನೂ ಇಲ್ಲ. ನನಗಿಲ್ಲ ಇದ್ಯಾವುದರ ಸೋಂಕು ಅದೆಲ್ಲಾ ಅವರವರ ಕಣ್ಣಿನ ಮಂಕು. *****...

ಇವನು ಆಕಾಶದಾಗೆ ಇರೋ ಅಷ್ಟು ಹೊತ್ತು ಜನರೆಲ್ಲ ಇವನ ತೊತ್ತು ಬೆವರ್‍ ಸುರಿಸುತ್ತಲೇ ಇರ್‍ಬೇಕು ಎಷ್ಟು ಸುರಿಸಿದರೂ ಇನ್ನಷ್ಟು ಮತ್ತಷ್ಟು ಹಿಂಡಿ ಹೀರುವ ಇವನೊಬ್ಬ ಬೆಂಕಿ ನವಾಬ ಯಾವುದೋ ಗುಲಾಮಗಿರಿ ಕಾಲದ ಕೆಂಪು ಮೂತಿ ಸಾಹೇಬ *****...

ಈಗ ತಾನೆ ನೆತ್ತಿಯ ಮೇಲಿದ್ದ ಸೂರ್ಯ ಸಾಹೇಬರು ಬುತ್ತಿ ಬಿಚ್ಚುವಷ್ಟರಲ್ಲಿ ಎಲ್ಲಿ ಮಾಯವಾದರು? ಮರದ ನೆರಳಲ್ಲಿ ಕುಳಿತ ರೈತ ಯೋಚಿಸಿದ. ಸಾಹೇಬರು ಮೋಡದ ಮರೆಯ ಆಂಟಿ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಈಗವರು ಸಿಗುವುದಿಲ್ಲ, ಅವರಿಗೀಗ ಲಂಚ್ ಬ...

1...1718192021...24

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...