
ಶಕ್ತಿ ಯಂತ್ರಗಳೇನೆ ಬಂದರು ತಿನಲಪ್ಪುದ ದಕೊಂದೆ. ಪೆಟ್ರೋಲು ತಪ್ಪಿದರೆ ವಿದ್ಯುತ್ತು ಶಕ್ತ ಜೀವಿಗಳೀ ಜಗದೊಳೆಷ್ಟೊಂದು? ತಿನಲಪ್ಪುದ ದಕೆ ಮಣ್ಣಿಂದ ಹಣ್ಣಿನಾ ತನಕ ಸಾವಿರದೊಂದು ಲೋಕವೀ ಸತ್ಯವನರಿತೊಡದು ಸುಜ್ಞಾನ ಸಾವಯವ – ವಿಜ್ಞಾನೇಶ್ವರಾ *...
ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ ಗಂಭೀರ ಮುಳ್ಳಿನಾ ತೆರದಿ ಗಾಬರಿಯ ಕಷ್ಟಗಳು ಸಾವಯವ ವೆಂಬೊಂದು ಕೃಷಿಯೊಳಗೆ ಲೋಭದೊಳಾಯ್ಕೆ ಫಲಿಸದು – ವಿಜ್ಞಾನೇಶ್ವರಾ *****...
ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ – ವಿಜ್ಞಾನೇಶ್ವರಾ *****...
ವೈಜ್ಞಾನಿಕವೆಂದೇನೇನೋ ಮಾಳ್ಪರಲಾ ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ ನಿಜದೊಳೇನು ಮಾಡದ ಸಾವಯವದೊಳಿಕ್ಕು ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ – ವಿಜ್ಞಾನೇಶ್ವರಾ *****...
ಹಿಂದಿರಲಿಲ್ಲ ಸಾವಯವವೆಂಬೊಂದು ಪಂಥ ಅಂದೆಲ್ಲವುಂ ಸ್ವಂತ ದುಡಿಮೆಯ ಹಂತ ಎಂತಕೀ ಕಠಿಣ ಬದುಕೆನುತಿಂದು ಪ್ರಗತಿ ಪಥ ಸಂಭ್ರಾಂತ ವೇಗದೊಳೆಲ್ಲ ಮರೆಯಾದೊಡಂ ಕಂಡೆನೆನುವರಲಾ ಕೊಂಡಕೂಳನೆ ಸಾವಯವವೆಂದೆನುತ – ವಿಜ್ಞಾನೇಶ್ವರಾ *****...
ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ – ವಿಜ್ಞಾನೇಶ್ವರಾ *****...
ಸಾವಯವವೆಂದೊಡದು ಪರ್‍ಯಾಯನಾಮ ಸಹನೆಯೊಡಗೂಡಿ ತತ್ತ್ವ ಸಾಧನೆಗೆ ಸಹನೆಯದು ಗೆಲು ಮನದ ಮರ್ಮ ಸಾಧನೆಯು ತನುವಿನಾಶ್ರಿತ ಧರ್ಮ ಸಾರ್ಥಕವು ತನುಮನಗಳೊಂದಾದ ಕರ್ಮ – ವಿಜ್ಞಾನೇಶ್ವರಾ *****...
ಬೇಕಿಲ್ಲವೆಂದು ಹಸುರೆಲ್ಲ ಕೀಳುವುದು ಕಳೆಯೆಂದು ಹಾಕುವುದೇನೆಲ್ಲ ಗೊಬ್ಬರ ಬೆಳೆಯಿಳುವರಿ ಸಾಲದೆಂದು ರೊಕ್ಕ ಸೇದಲು ಬಾವಿ ನೀರಿಗೆ ಬೋರು ಕೊರೆವುದೊಂದಾದ ಮೇಲೊಂದು ಪ್ರಕೃತಿಯೊಳೇನಿಹುದು? ಎಲ್ಲವನ್ನು ನಾವೆ ಮಾಡಿದೆವೆಂದು ಬಾಯ್ ಕೆರೆದರದುವೆ ಭಾರಿ ಕ...
ಋತು ಧರುಮದೊಳೆಲ್ಲ ಬಿತ್ತುಗಳಲ್ಲಲ್ಲೇ ಸತುವದೊಳುಕ್ಕಿ ಬೆಳೆಯಲು ಬೇಕು ತತುವದಾ ಮಾತುಗಳೆತ್ತಲೋ ಪೊರಳಿರಲು ಬಿತ್ತಿನಾ ಗುಣ ಬತ್ತಿ ವೈದ್ಯ, ಪೋಲೀಸ ರತಿ ಪಹರೆಯೊಳಿರ್ಪೆಮ್ಮ ಜೀವನದಂತಾಯ್ತು – ವಿಜ್ಞಾನೇಶ್ವರಾ *****...
ದೇವರನತ್ತಿತ್ತಲರಸುತ್ತ ಎತ್ತ ಫೋದರುಂ ಅವನಂತಿಮದೊಳೆಮ್ಮ ಮನದ ಮೌನದೊ ಳವತರಿಪಂತೆಮ್ಮ ಕೃಷಿ ಕಾಣ್ಕೆಗ ಳವರವರ ಚಿಂತನ ಮಂಥನವನಾಧರಿಸಿ ನವ ರೂಪದೊಳುದಿಸಿದರದು ಸಾವಯವ – ವಿಜ್ಞಾನೇಶ್ವರಾ *****...














